Swift Car EMI For 3 lakh Down payment: ಮಾರುತಿ ಸೀಫ್ಟ್ ಭಾರತದಲ್ಲಿ ಯುವಜನರ ಮೆಚ್ಚಿನ ಹ್ಯಾಚ್ ಬ್ಯಾಕ್ ಕಾರ್ ಆಗಿದೆ ಮತ್ತು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೇಳಿ ಮಾಡಿಸಿದ ಕಾರ್ ಆಗಿದೆ. ಅತ್ಯುತ್ತಮ ಮೈಲೇಜ್, ಆಧುನಿಕ ಫೀಚರ್ಗಳು ಮತ್ತು ಸುರಕ್ಷತೆಯನ್ನು ನೀಡುವ ಮಾರುತಿ ಸೀಫ್ಟ್ 2025 ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೆ 3 ಲಕ್ಷ ಡೌನ್ ಪೇಮೆಂಟ್ ಮಾಡಿದರೆ ತಿಂಗಳಿಗೆ ಎಷ್ಟು EMI ಪಾವತಿ ಮಾಡಬೇಕಾಗುತ್ತದೆ ಅನ್ನುವ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
Maruti Swift 2025 Price
ಹೊಸ ಹೈಬ್ರಿಡ್ ಎಂಜಿನ್ ಮತ್ತು ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಮಾರುತಿ ಸ್ವಿಫ್ಟ್ 2025 ಮಾದರಿಯು ಆಕರ್ಷಕ ಎಕ್ಸ್-ಶೋರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ಡಿಸೆಂಬರ್ 2025 ರಲ್ಲಿ ಮಾರುತಿ ಸೀಫ್ಟ್ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆ 7 ಲಕ್ಷದಿಂದ 10.7 ಲಕ್ಷ ರೂಪಾಯಿವರೆಗೆ ಇರುತ್ತದೆ. ಈ ಬೆಲೆಯಲ್ಲಿ ಎಕ್ಸ್-ಶೋರೂಂ, RTO, ಇನ್ಶೂರೆನ್ಸ್ ಮತ್ತು Fastag ಸೇರಿವೆ.
* ಬೇಸ್ ಮಾದರಿ LXiಗೆ ಸುಮಾರು 7 ಲಕ್ಷ
* ಟಾಪ್ ಮಾದರಿ ZXi Plus AMT ಗೆ 10.5 ರಿಂದ 10.7 ಲಕ್ಷ ರೂಪಾಯಿ ಆಗಿದೆ. (ಪ್ರದೇಶಗಳಿಗೆ ಅನುಗುಣವಾಗಿ ಬೆಲೆ ಹೆಚ್ಚು ಕಡಿಮೆ ಇರಬಹುದು)
3 ಲಕ್ಷ ಡೌನ್ ಪೇಮೆಂಟ್ ಗೆ EMI ಲೆಕ್ಕಾಚಾರ
ಕಾರ್ ಲೋನ್ ಬಡ್ಡಿದರ ಸಾಮಾನ್ಯವಾಗಿ 8.5% ರಿಂದ 9.5% ಇರುತ್ತದೆ. 5 ವರ್ಷದ ಲೆಕ್ಕಾಚಾರದ ಮೂಲಕ ನೋಡುದಾದರೆ, ( ಅಂದಾಜಿನ ಪ್ರಕಾರ )
* ಬೇಸ್ ಮಾದರಿ LXi ಗೆ ಸುಮಾರು 7 ರಿಂದ 7.5 ಲಕ್ಷ ಆಗಿದೆ. 4 ರಿಂದ 4.5 ಲಕ್ಷ ಲೋನ್ ಮಾಡಿದರೆ, 8,500 ರಿಂದ 9,500 ರೂ. EMI ಪಾವತಿ ಮಾಡಬೇಕಾಗುತ್ತದೆ.
* ಮಿಡ್ ವೆರಿಯಂಟ್ ಗೆ 8.5 ರಿಂದ 9.5 ಲಕ್ಷ ಆಗಿದೆ. 5.5 ರಿಂದ 6.5 ಲಕ್ಷ ಲೋನ್ ಮಾಡಿದರೆ, 11,500 ರಿಂದ 13,500 ರೂ EMI ಪಾವತಿ ಮಾಡಬೇಕಾಗುತ್ತದೆ.
* ಟಾಪ್ ಮಾದರಿ 10 ರಿಂದ 10.7 ಲಕ್ಷ ಆಗಿದೆ. 7 ರಿಂದ 7.7 ಲಕ್ಷ ಲೋನ್ ಮಾಡಿದರೆ, 14,500 ರಿಂದ 16,000 ರೂ. EMI ಪಾವತಿ ಮಾಡಬೇಕಾಗುತ್ತದೆ.
| ವೇರಿಯಂಟ್ | ಆನ್-ರೋಡ್ ಬೆಲೆ (₹ ಲಕ್ಷ) | ಲೋನ್ ಅಮೌಂಟ್ (₹ ಲಕ್ಷ) | ತಿಂಗಳ EMI (₹) |
|---|---|---|---|
| LXi (ಪೆಟ್ರೋಲ್ MT) | 7.00 | 4.00 | 8,200 |
| VXi (ಪೆಟ್ರೋಲ್ MT) | 8.00 | 5.00 | 10,200 |
| VXi (O) (ಪೆಟ್ರೋಲ್ MT) | 8.30 | 5.30 | 10,800 |
| VXi AGS (ಪೆಟ್ರೋಲ್ AMT) | 8.50 | 5.50 | 11,200 |
| VXi (O) AGS | 8.80 | 5.80 | 11,800 |
| VXi CNG | 9.00 | 6.00 | 12,200 |
| ZXi (ಪೆಟ್ರೋಲ್ MT) | 9.10 | 6.10 | 12,400 |
| ZXi AGS | 9.60 | 6.60 | 13,400 |
| ZXi Plus (ಪೆಟ್ರೋಲ್ MT) | 9.90 | 6.90 | 14,000 |
| ZXi Plus Dual Tone MT | 10.00 | 7.00 | 14,200 |
| ZXi CNG | 10.10 | 7.10 | 14,400 |
| ZXi Plus AGS | 10.40 | 7.40 | 15,000 |
| ZXi Plus Dual Tone AGS | 10.50 | 7.50 | 15,200 |
ಈ ಲೆಕ್ಕ ಅಂದಾಜು – ನಿಖರಕ್ಕೆ ಬ್ಯಾಂಕ್ ಕ್ಯಾಲ್ಕುಲೇಟರ್ ಬಳಸಿ.
ವೇರಿಯಂಟ್ ಗಳ ಸಂಪೂರ್ಣ ಮಾಹಿತಿ
* LXi ವೇರಿಯಂಟ್
LXi ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 5.79 ಲಕ್ಷ ಆಗಿದೆ (ಪೆಟ್ರೋಲ್ MT). Halogen headlamps, steel wheels (165/80 R14), Manual AC, Power Windows, Keyless Entry ಅನ್ನು ಅಳವಡಿಸಲಾಗಿದೆ. LXi ವೇರಿಯಂಟ್ ಕಾರ್ 24.8 kmpl ಮೈಲೇಜ್ ನೀಡುತ್ತದೆ. ಬಜೆಟ್ ಬೆಲೆಯಲ್ಲಿ ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಉತ್ತಮವಾಗಿದೆ.
* VXi ವೇರಿಯಂಟ್
VXi ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 6.59 ಲಕ್ಷ ಆಗಿದೆ. (ಪೆಟ್ರೋಲ್ MT), CNG ಮತ್ತು AMT ಆಯ್ಕೆಗಳೊಂದಿಗೆ ಬರುತ್ತದೆ. 7-inch touchscreen infotainment, wireless Android Auto/Apple CarPlay, steering controls, 4 speakers ಗಳನ್ನ ಅಳವಡಿಸಲಾಗಿದೆ. CNG ಆಯ್ಕೆಯಲ್ಲಿ 32.85 km/kg ಮೈಲೇಜ್ ನೀಡುತ್ತದೆ. ದೈನಂದಿನ ಬಳಕೆದಾರರಿಗೆ ಉತ್ತಮವಾಗಿದೆ.
* ZXi ವೇರಿಯಂಟ್
ZXi ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 7.53 ಲಕ್ಷ ಆಗಿದೆ. (ಪೆಟ್ರೋಲ್ MT), CNG ಮತ್ತು AMT ಆಯ್ಕೆಗಳೊಂದಿಗೆ ಬರುತ್ತದೆ. Alloy wheels (185/65 R15), LED headlamps, auto AC, rear AC vents, wireless charger, 2 tweeters, cruise control ಅನ್ನು ಅಳವಡಿಸಲಾಗಿದೆ. ಉತ್ತಮ ಮೈಲೇಜ್ ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಲಾಂಗ್ ಡ್ರೈವ್ ಗೆ ಉತ್ತಮವಾಗಿದೆ.
* ZXi+ ವೇರಿಯಂಟ್
ZXi+ ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 8.20 ಲಕ್ಷ ಆಗಿದೆ. (ಪೆಟ್ರೋಲ್ MT), AMT ಆಯ್ಕೆಗಳೊಂದಿಗೆ ಬರುತ್ತದೆ. 9-inch touchscreen, ARKAMYS sound, rear camera, LED fog lamps, leather steering, front footwell lights ನೊಂದಿಗೆ ಬರುತ್ತದೆ. ZXi+ ವೇರಿಯಂಟ್ 24.8 kmpl (MT) ಮೈಲೇಜ್ ನೀಡುತ್ತದೆ.

