India New Labour Codes Rules: ಭಾರತ ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನ ಈಗಾಗಲೇ ಜಾರಿಗೆ ತಂದಿದೆ. ಕಾರ್ಮಿಕರ ಭವಿಷ್ಯದ ಭದ್ರತೆಗಾಗಿ ದೇಶದಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ಹೊಸ ಲೇಬರ್ ಕೋಡ್ ಜಾರಿಗೆ ಬಂದಿದ್ದು ಈ ಹೊಸ ಬದಲಾವಣೆ ಕೋಟ್ಯಾಂತರ ಉದ್ಯೋಗಿಗಳ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ಕಾರ್ಮಿಕರ ಕೆಲಸದ ಅವಧಿ ಮತ್ತು ರಜೆಗೆ ಸಂಬಂಧಿಸಿದಂತೆ ಕೂಡ ಹೊಸ ಕಾರ್ಮಿಕ ಕೋಡ್ ನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಹಾಗಾದರೆ ಹೊಸ ಕಾರ್ಮಿಕ ಕೋಡ್ ಕಾರ್ಮಿಕರ ಕೆಲಸದ ಅವಧಿಯಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಉಂಟುಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾರ್ಮಿಕರಿಗಾಗಿ ಹೊಸ ಲೇಬರ್ ಕೋಡ್
ಭಾರತದಲ್ಲಿ ನವೆಂಬರ್ 21, 2025 ರಿಂದ 4 ಹೊಸ ಲೇಬರ್ ಕೋಡ್ ಜಾರಿಗೆ ತರಲಾಗಿದೆ. ಇವುಗಳು 29 ಹಳೆಯ ಕಾನೂನುಗಳನ್ನು ಸರಳಗೊಳಿಸಿ ಕೆಲಸಗಾರರಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಕಾರ್ಮಿಕರಿಗೆ ವೇತನದಲ್ಲಿ ಕೆಲವು ಬದಲಾವಣೆ ಆದರೂ ಕೂಡ ನಿವೃತ್ತಿ ಸಮಯದಲ್ಲಿ ಬಹಳ ಹೆಚ್ಚಿನ ಲಾಭ ಸಿಗಲಿದೆ. ಕಾರ್ಮಿಕ ಕೋಡ್ ನಿಯಮದಲ್ಲಿ 4 ಬದಲಾವಣೆ ಮಾಡಲಾಗಿದೆ ಮತ್ತು ಆ ಬದಲಾವಣೆ ಈ ಕೆಳಗಿನಂತಿದೆ.
4 ಹೊಸ ಲೇಬರ್ ಕೋಡ್ ಗಳು
* The Code on Wages, 2019
* The Industrial Relations Code, 2020
* The Code on Social Security, 2020
* The Occupational Safety, Health and Working Conditions Code, 2020
ವಾರದಲ್ಲಿ ಕೆಲಸದ ದಿನದ ವಿತರಣೆ
ಕಾರ್ಮಿಕರು ಒಟ್ಟು ವಾರಕ್ಕೆ 48 ಗಂಟೆ ಕೆಲಸ ಮಾಡಬೇಕು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಗಂಟೆಗಳ ವಿತರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಕಂಪನಿ ಮತ್ತು ಉದ್ಯೋಗಿಗಳ ಒಪ್ಪಿಗೆಯ ಮೇಲೆ ಅವಲಂಬಿತವಾಗಿರುತ್ತದೆ.
* ದಿನಕ್ಕೆ 12 ಗಂಟೆ ಅಂತೇ ವಾರದಲ್ಲಿ 4 ದಿನ ಕೆಲಸ ಮಾಡಬಹುದು (ವಿರಾಮದ ಜೊತೆಗೆ)
* ದಿನಕ್ಕೆ 9 ರಿಂದ 10 ಗಂಟೆಗಳಂತೆ ವಾರದಲ್ಲಿ 5 ದಿನ ಕೆಲಸ ಮಾಡಬಹುದು
* ಇನ್ನು ದಿನಕ್ಕೆ 8 ಗಂಟೆಗಳಂತೆ ವಾರದಲ್ಲಿ 6 ದಿನ ಕೆಲಸ ಮಾಡಬಹುದು
* 12 ಗಂಟೆಯಂತೆ 4 ದಿನ ಕೆಲಸ ಮಾಡಿ 3 ದಿನ ರಜೆ ಪಡೆದುಕೊಳ್ಳಬಹುದು
ಹೊಸ ಲೇಬರ್ ಕೋಡ್ ಮುಖ್ಯ ನಿಯಮಗಳು
* 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಡಬಲ್ ವೇತನ ಪಡೆದುಕೊಳ್ಳಬಹುದು.
* ದಿನಕ್ಕೆ 12 ಗಂಟೆಗಳ ನಂತರದ ಕೆಲಸ ಮಾಡಿದರೆ ಅದನ್ನು ಓವರ್ ಟೈಮ್ ಆಗಿ ಪರಿಗಣಿಸಲಾಗುತ್ತದೆ.
* ಫಿಕ್ಸ್ಡ್-ಟರ್ಮ್ ಉದ್ಯೋಗಿಗಳಿಗೆ ಪರ್ಮನೆಂಟ್ ಸಿಬ್ಬಂದಿಯಂತೆಯೇ ಲೀವ್, ಮೆಡಿಕಲ್ ಮತ್ತು ಗ್ರಾಚುಯಿಟಿ ಸೌಲಭ್ಯಗಳು ಲಭ್ಯವಿದೆ.
* ಗ್ರ್ಯಾಚ್ಯುಯಿಟಿ ಹಿಂದೆ 5 ವರ್ಷದ ನಂತರ ಸಿಗುತ್ತಿತ್ತು, ಆದರೆ ಈಗ ಫಿಕ್ಸ್‌ಡ್ ಟರ್ಮ್ ಉದ್ಯೋಗಕ್ಕೂ 1 ವರ್ಷದ ನಂತರ ಸಿಗುತ್ತದೆ.
* ವಾರ್ಷಿಕ ಆರೋಗ್ಯ ಚೆಕ್ ಅಪ್ 40 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಉಚಿತವಾಗಿದೆ.
ಪ್ರಯೋಜನಗಳು
* ಹೆಚ್ಚಿನ ವಿಶ್ರಾಂತಿ ಮತ್ತು ಕುಟುಂಬಕ್ಕೆ ಸಮಯ ಕೊಡಬಹುದಾಗಿದೆ.
* ಈ ಹೊಸ ಕೋಡ್‌ಗಳು ಕೆಲಸಗಾರರ ಜೀವನವನ್ನು ಸುಧಾರಿಸುತ್ತವೆ.
* ವಾರಕ್ಕೆ 48 ಗಂಟೆ ಮಿತಿ ಮತ್ತು ಓವರ್ ಟೈಮ್ ಗೆ ಡಬಲ್ ಪಾವತಿ.
* ಇನ್ನು 40 ವರ್ಷ ಮೀರಿದ ಕೆಲಸಗಾರರಿಗೆ ಉಚಿತ ವಾರ್ಷಿಕ ಆರೋಗ್ಯ ಪರೀಕ್ಷೆ ಮಾಡಿಸಲಾಗುತ್ತದೆ.
* ಲೈಫ್ ಇನ್ಶೂರನ್ಸ್ 2 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಕಾರ್ಮಿಕರಿಗೆ ವೇತನದಲ್ಲಿ ಕೆಲವು ಬದಲಾವಣೆ ಆದರೂ ಕೂಡ ನಿವೃತ್ತಿ ಸಮಯದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.
* ಭವಿಷ್ಯದಲ್ಲಿ ಇದು ಉದ್ಯೋಗ ಸೃಷ್ಟಿ ಹೆಚ್ಚಿಸುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

