Wagon R Car Monthly EMI For 2 lakh Down payment: ಮಾರುತಿ ಸುಜುಕಿ ಕಂಪನಿ ಭಾರತದಲ್ಲಿ ಸಾಕಷ್ಟು ಗ್ರಾಹಕರು ಇಷ್ಟಪಡುವ ಮೋಟಾರ್ ಕಂಪನಿಯಾಗಿದೆ. ಬಡವರಿಗೆ ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಖರೀದಿ ಮಾಡುವುದನ್ನು ನಾವು ಗಮನಿಸಬಹುದು. ಬಾಳಿಕೆ ಬರುವ ಹಾಗೆ ವಿಶ್ವಾಸಾರ್ಹ ವಾಹನಗಳನ್ನು ನಿರ್ಮಿಸುವಲ್ಲಿ ಖ್ಯಾತಿ ಪಡೆದ ಮಾರುತಿ ಸುಜುಕಿ ಕಂಪನಿಯ Maruti Suzuki Wagon R ಕಾರ್ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೆ ಅದರ ತಿಂಗಳ EMI ಬಗ್ಗೆ ಮಾಹಿತಿ ನೀಡುತ್ತೇವೆ. ಇದೀಗ ನಾವು 2025 ರಲ್ಲಿ Maruti Suzuki Wagon R ಖರೀದಿ ಮಾಡಲು 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ, ಉಳಿದಿದ್ದನ್ನು EMI ಅಲ್ಲಿ ಪಾವತಿಸಿದರೆ ತಿಂಗಳ ಕಂತು ಎಷ್ಟು ಅನ್ನುವ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
Wagon R ಬೆಲೆ
ಕುಟುಂಬ ಪ್ರಯಾಣಕ್ಕೆ Maruti Suzuki Wagon R ಉತ್ತಮವಾಗಿದೆ. ಇದೀಗ ಕರ್ನಾಟಕದಲ್ಲಿ Wagon R ಆನ್ ರೋಡ್ ಬೆಲೆ ಸುಮಾರು 7 ರಿಂದ 9.5 ಲಕ್ಷ ಆಗಿದೆ. ಇದರಲ್ಲಿ ಬೇಸ್ ಮಾಡೆಲ್ LXI ಗೆ ಬೆಂಗಳೂರಿನಲ್ಲಿ ಸುಮಾರು 7 ಲಕ್ಷದಷ್ಟು, ಹಾಗೆ ಟಾಪ್ ZXI+ AT ಗೆ ಸುಮಾರು 9.5 ಲಕ್ಷ ಆಗುತ್ತದೆ. 2 ಲಕ್ಷ ಡೌನ್ ಪೇಮೆಂಟ್ ಗೆ EMI ಎಷ್ಟಾಗುತ್ತದೆ..? ಅನ್ನುವ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
Wagon R EMI ಲೆಕ್ಕಾಚಾರ
* ಸದ್ಯ ಕಾರ್ ಲೋನ್ ಬಡ್ಡಿದರ 8.5% ರಿಂದ 9.5% ಆಗಿದೆ. ಇದೀಗ ನೀವು ಬೇಸ್ ಮಾಡೆಲ್ LXI ಗೆ 2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ, ಸುಮಾರು 5 ಲಕ್ಷ ಲೋನ್ ಮಾಡಬೇಕಾಗುತ್ತದೆ.
* 5 ಲಕ್ಷ ಸಾಲವನ್ನು 5 ವರ್ಷಗಳ ಅವಧಿಗೆ 9% ಬಡ್ಡಿಯಲ್ಲಿ ತೆಗೆದುಕೊಂಡರೆ, ತಿಂಗಳಿಗೆ ಸುಮಾರು 10,400 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ.
* ಇನ್ನು ಟಾಪ್ ZXI+ AT ಗೆ 2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ, ಸುಮಾರು 7 ಲಕ್ಷ ಲೋನ್ ಮಾಡಬೇಕಾಗುತ್ತದೆ. 7 ಲಕ್ಷ ಸಾಲವನ್ನು 5 ವರ್ಷಗಳ ಅವಧಿಗೆ 9% ಬಡ್ಡಿಯಲ್ಲಿ ತೆಗೆದುಕೊಂಡರೆ ತಿಂಗಳಿಗೆ ಸುಮಾರು 14,600 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ.
* ಇದು ಅಂದಾಜು ಲೆಕ್ಕಾಚಾರ, ನಿಖರವಾದ ಲೆಕ್ಕಾಚಾರಕ್ಕೆ ಬ್ಯಾಂಕ್ ಕ್ಯಾಲ್ಕುಲೇಟರ್ ಬಳಕೆ ಮಾಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
Wagon R ಮೈಲೇಜ್
Maruti Suzuki Wagon R ನಲ್ಲಿ ಪೆಟ್ರೋಲ್ ಹಾಗೆ CNG ವೆರಿಯಂಟ್ ನಾವು ಕಾಣಬಹುದು. Wagon R ಪೆಟ್ರೋಲ್ ವೆರಿಯಂಟ್ ನಲ್ಲಿ ಪ್ರತಿ ಲೀಟರ್ ಗೆ 24 ರಿಂದ 25 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಹಾಗೆ CNG ವೆರಿಯಂಟ್ ನಲ್ಲಿ ಪ್ರತಿ kg ಗೆ 33 ರಿಂದ 34 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಹೆಚ್ಚು ಮೈಲೇಜ್ ಕೊಡುವ ಕಾರಣ ಈ ಕಾರ್ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಹೇಳಿಮಾಡಿಸಿದ ಕಾರ್ ಆಗಿದೆ.
Wagon R ಫೀಚರ್
Maruti Suzuki Wagon R ನಲ್ಲಿ Automatic and manual transmission, touchscreen infotainment (Android Auto/Apple CarPlay), steering mounted controls, power windows, ಹಾಗೆ ಸೇಫ್ಟಿ ಗಾಗಿ – dual airbags, ABS, EBD, hill-hold assist ಅನ್ನು ಅಳವಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

