Highcourt Judgement Fo Permanent Job: ಕರ್ನಾಟಕದ ಸಾಕಷ್ಟು ನೌಕರರು ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಅವರ ಕೆಲಸ ಖಾಯಂ ಆಗಿಲ್ಲ. ಕೆಲಸ ಖಾಯಂ ಆಗದ ಕಾರಣ ಸಾಕಷ್ಟು ನೌಕರರು ಸರ್ಕಾರ ಬಳಿ ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ದಿನಗೂಲಿ ನೌಕರರ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಆದರೆ ಕೆಲಸ ಖಾಯಂ ಆಗದ ಸರ್ಕಾರಕ್ಕೆ ಶಾಪವನ್ನು ಹಾಕುತ್ತಿದ್ದರು. ಸದ್ಯ ದಿನಗೂಲಿ ಕೆಲಸ ಮಾಡುವ ಎಲ್ಲಾ ನೌಕರರರಿಗೆ ಹೈಕೋರ್ಟ್ ಮಹತ್ವದ ತಿರುಪು ಹೊರಡಿಸುವುದರ ಮೂಲಕ ಎಲ್ಲಾ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.
ಹತ್ತು ವರ್ಷ ಕೆಲಸ ಮಾಡಿದರೆ ಕೆಲಸ ಖಾಯಂ
ಸಾಕಷ್ಟು ದಿನಗೂಲಿ ಕಾರ್ಮಿಕರಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕೆಲಸ ಯಾವ ಖಾಯಂ ಆಗುತ್ತದೆ ಎಂದು ದಿನಗೂಲಿ ಕೆಲಸಗಾರರು ಸರ್ಕಾರದ ಬಳಿ ಸಾಕಷ್ಟು ಸಮಯಗಳಿಂದ ಮನವಿ ಸಲ್ಲಿಸುತ್ತಿದ್ದರು. ಇದರ ನಡುವೆ ಕರ್ನಾಟಕ ಹೈಕೋರ್ಟ್ ಈಗ ಮಹತ್ವದ ಆದೇಶ ಹೊರಡಿಸಿದೆ ಮತ್ತು ಆದೇಶದ ಪ್ರಕಾರ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ದಿನಗೂಲಿ ಕೆಲಸದಲ್ಲಿ ಸೇವೆಯನ್ನು ಸಲ್ಲಿಸಿದವ ಕೆಲಸವನ್ನು ಖಾಯಂ ಮಾಡುವಂತೆ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ. ಹತ್ತು ವರ್ಷ ಮೇಲ್ಪಟ್ಟ ದಿನಗೂಲಿ ಕೆಲಸಗಾರರ ಕೆಲಸವನ್ನು ಖಾಯಂ ಮಾಡುವಂತೆ ಆದೇಶ ಹೊರಡಿಸುವುದರ ಮೂಲಕ ಸಾವಿರಾರು ದಿನಗೂಲಿ ಕಾರ್ಮಿಕರಿಗೆ ಹೈಕೋರ್ಟ್ ದೊಡ್ಡ ಗುಡ್ ನ್ಯೂಸ್ ನೀಡಿದೆ.
ಯಾರು ಯಾರು ಕೆಲಸ ಖಾಯಂ ಆಗಲಿದೆ
ನಿರಂತರವಾಗಿ ಸರ್ಕಾರೀ ಕಚೇರಿಗಳಲ್ಲಿ ಕೆಲವನ್ನು ಮಾಡುತ್ತಿರುವ ದಿನಗೂಲಿ ಕಾರ್ಮಿಕರ ಕೆಲಸವನ್ನು ಖಾಯಂ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ತಿಂಗಳ ವೇತನದ ಚೀಟಿ, ಅವರ ಹಾಜರಾತಿ ಮತ್ತು ಇಲಾಖೆಯ ಪತ್ರವ್ಯವಹಾರವೇ ಅವರು ಸರ್ಕಾರೀ ಕಚೇರಿಗಳಲ್ಲಿ ಸೇವೆ ಸಲ್ಲಿಸುವುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಕಳೆದ ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯ ಕಚೇರಿಯಲ್ಲಿ ದಿನಗೂಲಿ ಸೇವೆ ಸಲ್ಲಿಸುತ್ತಿರುವ ಅರ್ಜಿದಾರರೊಬ್ಬರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ಈಗ ಹತ್ತು ವರ್ಷಗಳ ದಿನಗೂಲಿ ಕೆಲಸ ಮಾಡಿದ ಎಲ್ಲಾ ದಿನಗೂಲಿ ಕೆಲಸಗಾರರನ್ನು ಖಾಯಂ ಮಾಡುವಂತೆ ಆದೇಶ ಹೊರಡಿಸಿದೆ.
ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲಸಗಾರರು ಶಾಶ್ವತ ಕೆಲಸರಕ್ಕೆ ಅರ್ಹರಾಗಿರುತ್ತಾರೆ ಎಂದು ತೀರ್ಪಿನಲ್ಲಿ ನೀಡಲಾಗಿದೆ. ಯಾವುದೇ ಸರ್ಕಾರೀ ಕಚೇರಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಸರ್ಕಾರೀ ನೌಕರರು ಹತ್ತು ವರ್ಷಗಳ ಕಾಲ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರು ಖಾಯಂ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ದಿನಗೂಲಿ ಕಾರ್ಮಿಕರರ ಕೆಲಸವನ್ನು ಖಾಯಂ ಮಾಡುವುದರ ಮೂಲಕ ಕರ್ನಾಟಕ ಹೈಕೋರ್ಟ್ ರಾಜ್ಯದ ಎಲ್ಲಾ ದಿನಗೂಲಿ ಕೆಲಸಗಾರರಿಗೆ ಸಿಹಿಸುದ್ದಿ ನೀಡಿದೆ ಎಂದು ಹೇಳಬಹುದು.