Income Tax Fake Refund: ITR ಪಾವತಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ವಾರ್ಷಿಕವಾಗಿ ಅಧಿಕ ಹಣಕಾಸಿನ ವಹಿವಾಟು ಮಾಡುವ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ITR ಪಾವತಿ ಮಾಡಬೇಕು. ಆದಾಯ ತೆರಿಗೆ ರಿಟರ್ನ್ (ITR) ಫೈಲ್ ಮಾಡುವುದು ಕೇವಲ ಕಾನೂನು ಜವಾಬ್ದಾರಿಯಲ್ಲ, ಆರ್ಥಿಕ ಭದ್ರತೆಗೂ ಮುಖ್ಯ. ಒಂದು ವರ್ಷವಾದರೂ ಫೈಲ್ ಮಾಡದಿದ್ದರೆ ದಂಡ, ಬಡ್ಡಿ, ಮತ್ತು ಕಾನೂನು ಕ್ರಮಗಳಂತಹ ತೊಂದರೆಗಳು ಎದುರಾಗುತ್ತದೆ. ಹಾಗೆ ಕೆಲವು ITR ಹೆಸರಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಮೋಸ ಮಾಡುತ್ತಿರುವುದು ಈಗ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಈಗ ಕೇಂದ್ರ ತೆರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ ಮತ್ತು ಈ ತಪ್ಪುಗಳನ್ನು ಮಾಡಿದರೆ ಇನ್ನುಮುಂದೆ 200% ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಸುಳ್ಳು ಮಾಹಿತಿ ನೀಡಿ ರಿಫಂಡ್
ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ನೆಡೆಸಿದ ತನಿಖೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಜೇಂಟ್ ಗಳು ಕಂಡುಬಂದಿದ್ದರೆ. ಈ ಎಜೇಂಟ್ ಗಳು ಕಮಿಷನ್ ಗಾಗಿ ಸುಳ್ಳು ಮಾಹಿತಿಯನ್ನು ತೋರಿಸಿ ರಿಫಂಡ್ ಪಡೆಯುವಂತೆ ಸಹಾಯ ಮಾಡುತ್ತಿದ್ದಾರೆ. ಸೆಕ್ಷನ್ 80G ಮತ್ತು 80GGC ಅಡಿಯಲ್ಲಿ Charitable Trust ಗಳು ಅಥವಾ Registered Unrecognized Political Parties ಗಳಿಗೆ (RUPPs) ಸುಳ್ಳು ಕ್ಲೈಮ್ ಗಳು ಹೆಚ್ಚಾಗಿವೆ. ಇದರಿಂದ ತೆರಿಗೆ ಕಡಿಮೆಯಾಗಿ ಅಕ್ರಮ ರಿಫಂಡ್ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ರಿಫಂಡ್ ಪಡೆಯಲು ಸುಳ್ಳು ಕ್ಲೇಮ್ ಮಾಡಿದರೆ ಏನಾಗುತ್ತದೆ?
ಡಿಸೆಂಬರ್ 12, 2025 ರಿಂದ Fake Claim Refund ಪಡೆಯುವ ತೆರಿಗೆದಾರರಿಗೆ SMS ಮತ್ತು ಇಮೇಲ್ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತಿದೆ. ಇದಕ್ಕಾಗಿ ತೆರಿಗೆ ಇಲಾಖೆ “NUDGE” ಕ್ಯಾಂಪೇನ್ ಆರಂಭಿಸಿದೆ. ಕಳುಹಿಸಿದ ಸಂದೇಶದಲ್ಲಿ ತಪ್ಪು ಕ್ಲೇಮ್ ಗಳನ್ನ ಹಿಂಪಡೆದು, ರಿಟರ್ನ್ ಅಪ್ಡೇಟ್ ಮಾಡಬೇಕು. ಈಗಾಗಲೇ ಅನೇಕರು AY 2025-26 ಗೆ ರಿವೈಸ್ಡ್ ರಿಟರ್ನ್ ಫೈಲ್ ಮಾಡಿ ತಪ್ಪು ಸರಿಪಡಿಸಿದ್ದಾರೆ.
ದಂಡದ ಜೊತೆಗೆ ಶಿಕ್ಷೆ ಖಚಿತ
ಮೊದಲು SMS ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಲಾಗುತ್ತದೆ. ಸಂದೇಶವನ್ನು ನಿರಾಕರಿಸಿದರೆ, ಸೆಕ್ಷನ್ 270A ಪ್ರಕಾರ, ಅಂಡರ್-ರಿಪೋರ್ಟಿಂಗ್ ಗೆ 50% ದಂಡ, ಮಿಸ್-ರಿಪೋರ್ಟಿಂಗ್ ಅಂದರೆ ಸುಳ್ಳು ಮಾಹಿತಿ ನೀಡಿ ಪಾವತಿ ಮಾಡಿದ ತೆರಿಗೆಯ ಮೇಲೆ 200% ದಂಡ ವಿಧಿಸಬಹುದು. ಜೊತೆಗೆ ಕ್ರಿಮಿನಲ್ ಪ್ರಾಸಿಕ್ಯೂಷನ್ ಅಂದರೆ ಅಪರಾಧಿಯನ್ನು ಶಿಕ್ಷಿಸಲಾಗುತ್ತದೆ. ಹಾಗೆ ರಿಫಂಡ್ ಅನ್ನು ಹಿಂಪಡೆಯಲಾಗುತ್ತದೆ. ಎಜೇಂಟ್ ನೀಡಿದ ಸಲಹೆ ಅಂತೆಯೇ ತಪ್ಪು ಮಾಡಿದರು ಇದಕ್ಕೆ ತೆರಿಗೆದಾರರೇ ಹೊಣೆಗಾರರಾಗಿರುತ್ತಾರೆ.
ಇಲಾಖೆಯ ಎಚ್ಚರಿಗೆ
ಈಗಲೇ ನಿಮ್ಮ ಮೊಬೈಲ್ ಮತ್ತು ಇಮೇಲ್ ಅಪ್ಡೇಟ್ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ. ನಿಮಗೂ ಸಂದೇಶ ಬಂದರೆ ತಕ್ಷಣ ರಿಟರ್ನ್ ರಿವೈಸ್ ಅಥವಾ ಅಪ್ಡೇಟ್ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ https://www.incometax.gov.in/iec/foportal/ ವೆಬ್ ಸೈಟ್ ಬಳಕೆ ಮಾಡಿ. ತೆರಿಗೆ ವಿಷಯದಲ್ಲಿ ತೆರಿಗೆ ಕ್ಲೇಮ್ ಗಳಿಂದ ದೂರವಿರಿ. ತಾತ್ಕಾಲಿಕ ಲಾಭಕ್ಕೆ ಸುಳ್ಳು ಮಾಹಿತಿ ನೀಡಿದರೆ ಮುಂದೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

