Father Property Will: ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಪ್ರಕಾರ, ಹೆಣ್ಣು ಮಕ್ಕಳಿಗೂ ಕೂಡ ತಂದೆ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಸಿಗುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರಲ್ಲಿ ಕೆಲವು ಬದಲಾವಣೆ ಮಾಡುವುದರ ಮೂಲಕ ಹೆಣ್ಣು ಮಕ್ಕಳಿಗೆ ತಂದೆ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಸಿಗುವಂತೆ ಮಾಡಲಾಗದೆ. ಆದರೆ ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಸಿಗಲ್ಲ. ಸುಪ್ರೀಂ ಕೋರ್ಟ್ ತಂದೆಯ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಕೊಟ್ಟಿದೆ. ಹಾಗಾದರೆ ಯಾವ ಸಮಯದಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾಳು ಸಿಗಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸುಪ್ರೀಂ ಕೋರ್ಟ್ ಹಿನ್ನಲೆ ತಿಳಿದುಕೊಳ್ಳಿ
ಕೇರಳ ಮೂಲದ ಎನ್.ಎಸ್. ಶ್ರೀಧರನ್ ಅವರಿಗೆ 9 ಮಕ್ಕಳು. ಶ್ರೀಧರನ್ ಅವರ ಮಗಳಾದ ಶೈಲಾ ಜೋಸೆಫ್ ಧರ್ಮದ ಯುವಕನೊಂದಿಗೆ ಮದುವೆಯಾದ ಕಾರಣ ತಂದೆ ಎನ್.ಎಸ್. ಶ್ರೀಧರನ್ ಅವರು ಮಗಳನ್ನು ದೂರವಿಟ್ಟಿದ್ದರು. ಇನ್ನು 1988 ರಲ್ಲಿ ಶ್ರೀಧರನ್ ಬರೆದ ವಿಲ್ ನಲ್ಲಿ ಆಕೆಗೆ ಯಾವುದೇ ಆಸ್ತಿ ಪಾಲು ನೀಡಲಿಲ್ಲ. 1992 ರಲ್ಲಿ ಶ್ರೀಧರನ್ ಅವರು ನಿಧನರಾಗುತ್ತಾರೆ. ತಂದೆಯ ಅಗಲಿಕೆಯ ನಂತರ ಶೈಲಾ ಅವರು ಕೋರ್ಟ್ ಗೆ ಹೋಗಿ ಸಮಾನ ಪಾಲು ಕೋರಿ ಅರ್ಜಿ ಅನ್ನು ಸಲ್ಲಿಸುತ್ತಾರೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ಟ್ರಯಲ್ ಕೋರ್ಟ್ ಮತ್ತು ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿತು, ಆದರೆ ಸುಪ್ರೀಂ ಕೋರ್ಟ್ ಅದನ್ನು ಅಲ್ಲಗೆಳೆದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿರುವ Ahsanuddin Amanullah ಮತ್ತು K. Vinod Chandran ಅವರು ವಿಲ್ ಸರಿಯಾಗಿ ಇದೆ. ತಂದೆಯ ಇಚ್ಛೆಯನ್ನು ಬದಲಾಯಿಸಲು ಕೋರ್ಟ್ ಗೆ ಅಧಿಕಾರವಿಲ್ಲ, ಎನ್.ಎಸ್. ಶ್ರೀಧರನ್ ಅವರ ಆಸ್ತಿ ಉಳಿದ 8 ಮಕ್ಕಳಿಗೆ ಸೇರಬೇಕು ಎಂದು ಆದೇಶ ಹೊರಡಿಸಿತು.
ಈ ತೀರ್ಪಿನಿಂದ ತಿಳಿದುಕೊಳ್ಳಬೇಕಾದ ಅಂಶಗಳು
ತಂದೆ ಮತ್ತು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೊಟ್ಟ ತೀರ್ಪು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವಂತೆ ಮಾಡಿದೆ. ಸುಪ್ರೀಂ ಕೊಟ್ಟ ತೀರ್ಪಿನಿಂದ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿದೆ.
- ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಪ್ರಕಾರ, ಪೂರ್ವಜರ ಆಸ್ತಿಯಲ್ಲಿ ಮಗಳಿಗೆ ಸಮಾನ ಹಕ್ಕು ಇದೆ. ಆದರೆ ತಂದೆ ಸ್ವಂತ ಸಂಪಾದನೆ ಮಾಡಿದ ಆಸ್ತಿಯಲ್ಲಿ ವಿಲ್ ಬರೆದಿಟ್ಟಿದ್ದರೆ, ವಿಲ್ ಅಂತಿಮವಾಗಿರುತ್ತದೆ.
- ವಿಲ್ ರಿಜಿಸ್ಟರ್ ಆಗಿದ್ದರೆ, ಅದಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ಇರುತ್ತದೆ.
- ಕೋರ್ಟ್ ಹೇಳಿಕೆಯಂತೆ, ವಿಲ್ ಬರೆಯುವವರ ಇಚ್ಛೆಯೇ ಮುಖ್ಯವಾಗಿರುತ್ತದೆ. ಆ ಇಚ್ಛೆಗೆ ಕಾರಣಗಳು ಸರಿಯೋ ತಪ್ಪೋ ಎಂದು ಕೋರ್ಟ್ ಪರೀಕ್ಷಿಸುವುದಿಲ್ಲ.
- ಲಿಂಗ ಸಮಾನತೆಯ ನಿಯಮಗಳು ವಿಲ್ ಗೆ ಅನ್ವಯಿಸುವುದಿಲ್ಲ
- ಈ ತೀರ್ಪು ಕುಟುಂಬ ಸಂಬಂಧಗಳು ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಹೊಸ ಚರ್ಚೆ ಗೆ ಕಾರಣವಾಗಿದೆ.
- ಮಕ್ಕಳು ತಂದೆ-ತಾಯಿಯ ಭಾವನೆಗಳನ್ನು ಗೌರವಿಸುವುದು ಮುಖ್ಯ
- ಕಾನೂನು ತಂದೆಯ ಸ್ವೇಚ್ಛೆ ಯನ್ನು ರಕ್ಷಿಸುತ್ತದೆ.
- ಕೆಲವು ಕುಟುಂಬಗಳಲ್ಲಿ ಇಂಟರ್‌ಫೇತ್ ಅಥವಾ ಇಂಟರ್ ಕಾಸ್ಟ್ ಮದುವೆಗಳು ಸಮಸ್ಯೆಯಾಗಿರುವುದರಿಂದ ಈ ತೀರ್ಪು ಮಹತ್ವ ಪೂರ್ಣವಾಗಿದೆ.
- ವಿಲ್ ಬರೆಯುವುದರ ಮಹತ್ವ ಹೆಚ್ಚಿಸಿದೆ.
- ಸ್ವಯಂ ಸಂಪಾದಿತ ಆಸ್ತಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ.
ತಂದೆಯ ವೆಯಾರ್ಜಿತ ಆಸ್ತಿ ಅಂದರೆ ಏನು?
ಸ್ವಯಾರ್ಜಿತ ಆಸ್ತಿ ಅಂದರೆ ತಂದೆಯಾದವನು ತನ್ನ ಸ್ವಂತ ಹಣದಲ್ಲಿ ಸಂಪಾದನೆ ಮಾಡಿದ ಆಸ್ತಿಯಾಗಿರುತ್ತದೆ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೂ ಕೂಡ ಪಾಲು ಕೇಳುವ ಅಧಿಕಾರ ಇರುವುದಿಲ್ಲ. ತಂದೆಯಾದವನು ತಾನು ಸಂಪಾದನೆ ಮಾಡಿದ ಆಸ್ತಿಯಲ್ಲಿ ಯಾರಿಗೆ ಬೇಕಾದರು ಗಿಫ್ಟ್ ಮೂಲಕ ಕೊಡಬಹುದು ಅಥವಾ ವಿಲ್ ಬರೆಯಬಹುದು. ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಪಡೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ, ಅದು ಹೆಣ್ಣಾಗಲಿ ಅಥವಾ ಗಂಡಾಗಲಿ.
ತಂದೆ ವಿಲ್ ಬರೆಯದೆ ಇದ್ದರೆ
ತಂದೆಯಾದವನು ಸ್ವಯಾರ್ಜಿತವಾಗಿ ಆಸ್ತಿ ಸಂಪಾದನೆ ಮಾಡಿ ಅದನ್ನು ಯಾರಿಗೂ ಗಿಫ್ಟ್ ಕೊಡದೆ ಅಥವಾ ವಿಲ್ ಬರೆಯದೆ ಇಹಲೋಕ ತ್ಯಜಿಸಿದರೆ ಆ ಆಸ್ತಿಯಲ್ಲಿ ಮಕ್ಕಳದವರು ಸಮನಾದ ಪಾಲು ಪಡೆದುಕೊಳ್ಳುತ್ತಾರೆ. ತಂದೆ ವಿಲ್ ಬರೆಯದೆ ಇದ್ದರೆ ಹೆಣ್ಣು ಮಕ್ಕಳು ಗಂಡು ಮಕ್ಕಳು ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ಪಡೆದುಕೊಳ್ಳಬಹುದು. ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳು ಜನ್ಮಸಿದ್ಧ ಹಕ್ಕು ಪಡೆದುಕೊಂಡು ಬಂದಿರುತ್ತಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

