Gruha Lakshmi Scheme 24th Installment: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು. ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರದಿಂದ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಬಂದಿದೆ. ಈಗಾಗಲೇ 23 ಕಂತುಗಳ ಹಣ ಬಿಡುಗಡೆ ಮಾಡಲಾಗಿದೆ ಮತ್ತು ಈಗ 24ನೇ ಕಂತಿನ ಹಣವನ್ನು ನಾಳೆ ಮಹಿಳೆಯರ ಖಾತೆಗೆ ಜಮಾ ಮಾಡಲು ತೀರ್ಮಾನವನ್ನು ಮಾಡಲಾಗಿದೆ. ಹಾಗಾದರೆ ನಾಳೆ ಯಾವ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಜಮಾ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ಗೃಹಲಕ್ಷ್ಮಿ 24ನೇ ಕಂತಿನ ಹಣ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಡಿಸೆಂಬರ್ 22 , ಅಂದರೆ ನಾಳೆ ಅರ್ಹ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿದ್ದಾರೆ. ನಾಳೆ ಜಮಾ ಆಗದೆ ಇದ್ದರೆ 27ನೇ ತಾರೀಕಿನ ಒಳಗಾಗಿ ಮಹಿಳೆಯರು 24ನೇ ಕಂತಿನ ಹಣವನ್ನು ಪಡೆದುಕೊಳ್ಳುತ್ತಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೆ ತರುವುದು ಮಾತ್ರವಲ್ಲದೆ ಕೆಲವು ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಕೂಡ ಮಾಡಲಾಗಿದೆ.
ಡಿಸೆಂಬರ್ 22 ರಿಂದ 27 ನೇ ತಾರೀಕಿನ ಒಳಗೆ ಈ ಮಹಿಳೆಯರ ಖಾತೆಗೆ ಹಣ ಜಮಾ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿರಿಯ ಬೆಳಗಾವಿಯ ನಿವಾಸದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದು ಗೃಹಲಕ್ಷ್ಮಿ 24ನೇ ಕಂತಿನ ಹಣ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಹಣಕಾಸು ಇಲಾಖೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು ಸೋಮವಾರದಿಂದ ಹಣ ಸಂದಾಯ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ.
ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ ಗೃಹಲಕ್ಷ್ಮಿ ಹಣ
ರಾಜ್ಯ ಸರ್ಕಾರ ಕೆಲವು ಅನರ್ಹ ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಮಾಡಿದೆ. ಅನರ್ಹ ಮಹಿಳೆಯರು 24ನೇ ಕಂತಿನ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಯಾವ ಮಹಿಳೆಯರ ಹೆಸರನ್ನು ಡಿಲೀಟ್ ಮಾಡಲಾಗಿದೆ ಅನ್ನುವ ಪಟ್ಟಿ ಇಲ್ಲಿದೆ.
- BPL ರೇಷನ್ ಕಾರ್ಡ್ ರದ್ದಾದ ಮಹಿಳೆಯರು
- GST ಪಾವತಿ ಮಾಡುವ ಮಹಿಳೆಯರು
- ತೆರಿಗೆ ಪಾವತಿ ಮಾಡುವ ಮಹಿಳೆಯರು
- ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು
- ಬ್ಯಾಂಕ್ ಖಾತೆಗೆ KYC ಅಪ್ಡೇಟ್ ಮಾಡದ ಮಹಿಳೆಯರು
- ಬ್ಯಾಂಕ್ ಖಾತೆಗೆ ಪಾನ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು
- ಪತಿ ಸರ್ಕಾರೀ ನೌಕರಿಯಲ್ಲಿ ಇರುವವರು
- ಸರ್ಕಾರೀ ಕೆಲಸ ಮಾಡುತ್ತಿರುವ ಮಹಿಳೆಯರು
- DBT ಸ್ಟೇಟಸ್ ನಲ್ಲಿ ಸಮಸ್ಯೆ ಇದ್ದರೆ ಹಣ ಜಮಾ ಆಗಲ್ಲ
ಸತ್ತವರ ಹೆಸರು ಡಿಲೀಟ್ ಮಾಡಲು ಕ್ರಮ
ಹೊಸ Software ಈಗ ಸಿದ್ಧಪಡಿಸಲಾಗಿದ್ದು ಸತ್ತವರ ಖಾತೆಗೆ ಇನ್ನುಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲ್ಲ. ಕಳೆದ ಕೆಲವು ತಿಂಗಳಿಂದ ಸತ್ತವರ ಖಾತೆಗೆ ಕೂಡ ಗೃಹಲಕ್ಷ್ಮಿ ಯೋಜನೆಯ 2000 ರೂ ಜಮಾ ಆಗುತ್ತಿದೆ ಸಾಕಷ್ಟು ಜನರು ರಾಜ್ಯ ಸರ್ಕಾರಕ್ಕೆ ದೂರು ಕೊಟ್ಟಿದ್ದರು. ಈ ಕಾರಣಗಳಿಂದ ಈಗ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಸತ್ತವರ ಹೆಸರು ಡಿಲೀಟ್ ಮಾಡಲು ಈಗ ಹೊಸ Software ಕೂಡ ಸಿದ್ದಪಡಿಸಲಾಗಿದೆ.
ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
- ಹತ್ತಿರದ ಸೇವಾಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು
- ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಫಾರ್ಮ್ ತುಂಬಿಸಿ ಅರ್ಜಿ ಸಲ್ಲಿಸಬಹುದು
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪತಿಯ ಆಧಾರ್ ಕಾರ್ಡ್ ಅಥವಾ ವೋಟರ್ ID ಕೆಲವೊಮ್ಮೆ ಬೇಕಾಗಬಹುದು
- ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ವಿವರ ಕೊಡಬೇಕು
ಗೃಹಲಕ್ಷ್ಮಿ ಯೋಜನೆಗೆ ಯಾವ ಮಹಿಳೆಯರು ಅರ್ಹರು
- ಕುಟುಂಬದ ಯಜಮಾನಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
- BPL ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ
- ತೆರಿಗೆ ಪಾವತಿ ಮತ್ತು ಸರ್ಕಾರೀ ನೌಕರಿಯಲ್ಲಿರುವ ಕುಟುಂಬದವರು ಯೋಜನೆಗೆ ಅನರ್ಹರು
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
ಮಹಿಳೆಯರು DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅಥವಾ ಹತ್ತಿರದ ಸೇವಾ ಕೇಂದ್ರದಲ್ಲಿ ರೇಷನ್ ಕಾರ್ಡ್ ನಂಬರ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು. ಅಥಾವ sevasindhu.karnataka.gov.in ವೆಬ್ಸೈಟ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
ವಿಶೇಷ ಸೂಚನೆ: ನಾಡುನುಡಿ ಮಾಧ್ಯಮದಲ್ಲಿ ನಿಖರವಾದ ಸುದ್ದಿಯನ್ನು ಮಾತ್ರ ಹಂಚಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಅಧಿಕೃತ ಸರ್ಕಾರೀ ವೆಬ್ಸೈಟ್ ನಲ್ಲಿ ಕೂಡ ತಿಳಿದುಕೊಳ್ಳಬಹುದು.

