Post Office Monthly Income Scheme: ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಒಂದು ಉತ್ತಮವಾದ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಹೂಡಿಕೆ ಮಾಡಿದ ಹಣಕ್ಕೆ ನಿರ್ದಿಷ್ಟ ಆದಾಯ ಪಡೆದುಕೊಳ್ಳಬಹುದು. ಈ ನಡುವೆ ಪೋಸ್ಟ್ ಆಫೀಸ್ ಹೂಡಿಕೆ ಮಾಡುವವರಿಗಾಗಿ ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದೆ. ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಯೋಜನೆಯಲ್ಲಿ ಮಾಸಿಕ ಆದಾಯ ಯೋಜನೆ ಕೂಡ ಒಂದಾಗಿದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಮಾಸಿಕವಾಗಿ ಸುಮಾರು 5550 ರೂಪಾಯಿ ತನಕ ಆದಾಯ ಪಡೆದುಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಪ್ರತಿ ತಿಂಗಳು 5550 ರೂ ಆದಾಯ ಪಡೆದುಕೊಳ್ಳಲು ಎಷ್ಟು ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಹೂಡಿಕೆ ಮಾಡಿ ನಿರ್ದಿಷ್ಟ ಆದಾಯ ಗಳಿಸಿಕೊಳ್ಳಬೇಕು ಅನ್ನುವವರಿಗಾಗಿ ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಯೋಜನೆಯಲ್ಲಿ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಕೂಡ ಒಂದಾಗಿದೆ. ಒಂಟಿಯಾಗಿ ಅಥವಾ ಜಂಟಿಯಾಗಿ ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹಣ ಗಳಿಸಬಹುದು. ಇದೊಂದು ಸರ್ಕಾರೀ ಹೂಡಿಕೆ ಯೋಜನೆಯಾಗಿದ್ದು ಪೋಸ್ಟ್ ಆಫೀಸ್ ಖಾತೆ ತೆರೆದು ಹೂಡಿಕೆ ಆರಂಭಿಸಬಹುದು. ಕನಿಷ್ಠ 1000 ರೂ ಹೂಡಿಕೆ ಮಾಡುವುದರ ಮೂಲಕ ಈ ಯೋಜನೆಯ ಖಾತೆ ತೆರೆಯಬಹುದು.
ಪೋಸ್ಟ್ ಆಫೀಸ್ ಮಾಸಿಕ ಯೋಜನೆಯ ನಿಯಮಗಳು
- ಭಾರತೀಯ ನಾಗರೀಕ ಮಾತ್ರ ಈ ಯೋಜನೆಯ ಖಾತೆ ತೆರೆಯಬಹುದು
- ಕನಿಷ್ಠ 1000 ರೂ ಹೂಡಿಕೆ ಮಾಡಬೇಕು
- ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರುವುದು ಕಡ್ಡಾಯ
- ಒಂಟಿಯಾಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು
- ಯೋಜನೆಯ ಅವಧಿ 5 ವರ್ಷಗಳು ಮಾತ್ರ
- 18 ವರ್ಷ ಮೇಲ್ಪಟ್ಟ ಭಾರತೀಯ ನಾಗರೀಕ ಮಾತ್ರ ಹೂಡಿಕೆ ಮಾಡಬಹುದು
ಮಾಸಿಕ ಆದಾಯ ಯೋಜನೆಯಲ್ಲಿ ಸಿಗಲಿದೆ 5550 ರೂ ಬಡ್ಡಿ ಪ್ರತಿ ತಿಂಗಳು
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಂಟಿಯಾಗಿ ಮತ್ತು ಜಂಟಿಯಾಗಿ ಖಾತೆ ತೆರೆಯಬಹುದು. ಮಾಸಿಕ ಆದಾಯ ಯೋಜನೆಯಲ್ಲಿ ಒಂಟಿಯಾಗಿ ಹೂಡಿಕೆ ಮಾಡಿದರೆ ಸುಮಾರು 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು ಮತ್ತು ಜಂಟಿಯಾಗಿ ಹೂಡಿಕೆ ಮಾಡಿದರೆ 15 ಲಕ್ಷ ರೂಪಾಯಿ ತನಕ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7.4 ರಷ್ಟು ಬಡ್ಡಿ ಪಡೆದುಕೊಳ್ಳಬಹುದು.
ಒಬ್ಬ ವ್ಯಕ್ತಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಹಣವನ್ನು 7.4% ಬಡ್ಡಿಗೆ ಹೂಡಿಕೆ ಮಾಡಿದರೆ ಆತ ಪ್ರತಿ ತಿಂಗಳು ಸುಮಾರು 5550 ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು. ಇನ್ನು 7.4% ಬಡ್ಡಿದರದಲ್ಲಿ 5 ವರ್ಷಕ್ಕೆ 9 ಲಕ್ಷ ರೂಪಾಯಿ ಹೂಡಿಕೆಯ ಮೇಲೆ ಒಟ್ಟಾರೆಯಾಗಿ ಒಬ್ಬ ವ್ಯಕ್ತಿ ಸುಮಾರು 3,33,000 ರೂ ಬಡ್ಡಿ ಪಡೆದುಕೊಳ್ಳಬಹುದು. ಪ್ರಸ್ತುತ ಬಡ್ಡಿದರ ವಾರ್ಷಿಕ 7.4% ಆಗಿದೆ. ಇದು ಮಾಸಿಕವಾಗಿ ಪಾವತಿಸಲ್ಪಡುತ್ತದೆ ಮತ್ತು ಸಿಂಪಲ್ ಇಂಟರೆಸ್ಟ್ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಯೋಜನೆಯ ಮುಕ್ತಾಯದ ನಂತರ ಹೂಡಿಕೆ ಮೊತ್ತ ಬಡ್ಡಿ ಹಣವನ್ನು ಸೇರಿಸಿ ಸುಮಾರು ಸುಮಾರು 12.3 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು.
ಖಾತೆ ತೆರೆಯಲು ಬೇಕಾದ ದಾಖಲೆಗಳು ಮತ್ತು ಯೋಜನೆಯ ಷರತ್ತುಗಳು
- ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು
- ಯೋಜನೆಯ ಅರ್ಜಿ ಫಾರ್ಮ್ ಭರ್ತಿಮಾಡಿ ಜೆರಾಕ್ಸ್ ಪ್ರತಿ ಕೊಡಬೇಕು
- ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯ
- ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಆಗಿರಬೇಕು
- ಜಂಟಿ ಖಾತೆಯಾದರೆ ಇಬ್ಬರ ಎಲ್ಲಾ ದಾಖಲೆ ಕೊಡುವುದು ಕಡ್ಡಾಯ
- ಕನಿಷ್ಠ 1000 ರೂ ಹೂಡಿಕೆ ಮಾಡಬೇಕು
- ರಿಜಿನಲ್ ದಾಖಲೆ ವೆರಿಫಿಕೇಷನ್ ಕಡ್ಡಾಯ
ಜಂಟಿಯಾಗಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಎಷ್ಟು ಲಾಭ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಜಂಟಿಯಾಗಿ ಕೂಡ ಹೂಡಿಕೆ ಮಾಡಬಹುದು. ಜಂಟಿಯಾಗಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿಯಾಗಿ ಹೂಡಿಕೆ ಮಾಡಿದರೂ ಕೂಡ ಮಾಸಿಕವಾಗಿ ಶೇಕಡಾ 7.4 ಬಡ್ಡಿ ಕೊಡಲಾಗುತ್ತದೆ. ಗಂಡ ಮತ್ತು ಹೆಂಡತಿ ಜಂಟಿಯಾಗಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಜಂಟಿಯಾಗಿ ಹಣ ಹೂಡಿಕೆ ಮಾಡಿದರೆ 15 ಲಕ್ಷ ರೂಪಾಯಿಗೆ ಒಟ್ಟಾರೆಯಾಗಿ ಪ್ರತಿ ತಿಂಗಳು 9250 ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು. ಪಟ್ಟಾರೆಯಾಗಿ 5 ವರ್ಷಗಳಿಗೆ ಸುಮಾರು 5.55 ಲಕ್ಷ ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದಾಗಿದೆ. ಯೋಜನೆಯ ಮುಕ್ತಾಯದ ಸಮಯದಲ್ಲಿ 15 ಲಕ್ಷ ರೂಪಾಯಿ ಹೂಡಿಕೆಯ ಮೊತ್ತದ ಜೊತೆಗೆ 5.55 ಲಕ್ಷ ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು.
ನಾಡುನುಡಿ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಕಟಿಸಲಾಗುವುದಿಲ್ಲ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಪೋಸ್ಟ್ ಆಫೀಸ್ ನಲ್ಲಿ ಕೂಡ ತಿಳಿದುಕೊಳ್ಳಬಹುದು.

