Best Banks For Car Loan: ಜೀವನದಲ್ಲಿ ಒಮ್ಮೆ ಆದರೂ ಕಾರ್ ಖರೀದಿಸಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆಯಿಂದ ಅವರ ಆಸೆ ಕನಸಾಗಿಯೇ ಉಳಿಯುತ್ತದೆ. ಇದೀಗ ನೀವು ಸಾಲದ ಮೂಲಕ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ದೇಶದಲ್ಲಿ ಅನೇಕ ಬ್ಯಾಂಕ್ ಗಳು ಕಡಿಮೆ ಬಡ್ಡಿದರಕ್ಕೆ ಕಾರ್ ಲೋನ್ ಅನ್ನು ನೀಡುತ್ತದೆ. ನಾವೀಗ ಈ ಲೇಖನದಲ್ಲಿ ಕಡಿಮೆ ಬಡ್ಡಿದರದಲ್ಲಿ ಕಾರ್ ಲೋನ್ ನೀಡುವ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ದೈನಂದಿನ ಜೀವನದಲ್ಲಿ ಕಾರ್ ಅಗತ್ಯತೆ
ಕಾರ್ ಕೇವಲ ಐಷಾರಾಮಿ ಜೀವನ ನೆಡೆಸಲು ಮಾತ್ರ ಅಲ್ಲ. ತುರ್ತು ಪರಿಸ್ಥಿತಿಗೂ ಕೂಡ ಕಾರ್ ಅವಶ್ಯವಾಗುತ್ತದೆ. ಹಾಗೆ ಸ್ವಂತ ಕಾರ್ ಇದ್ದರೆ ಕುಟುಂಬದ ಜೊತೆ ಪ್ರಯಾಣ ಮಾಡಲು ಉತ್ತಮವಾಗಿದೆ. ದೂರದ ಪ್ರಯಾಣಕ್ಕೆ ಬಾಡಿಗೆ ಕಾರ್ ಬಳಸುವ ಬದಲು ಸ್ವಂತ ಕಾರ್ ಬಳಸಿದರೆ ಹಣ ಉಳಿತಾಯ ಕೂಡ ಮಾಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆಯಿಂದ ಒಮ್ಮೆಲೇ ಹಣ ಕೊಟ್ಟು ಕಾರ್ ಖರೀದಿ ಅಸಾಧ್ಯ. ಈ ಸಮಯದಲ್ಲಿ ಕಾರ್ ಲೋನ್ ಸೌಲಭ್ಯ ಉತ್ತಮವಾಗಿದೆ.
ಖಾಸಗಿ ಮತ್ತು ಸರ್ಕಾರೀ ಬ್ಯಾಂಕುಗಳಲ್ಲಿ ವಾಹನಗಳ ಸಾಲ
ಕಾರ್ ಸಾಲ ಇದು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಿಂದ ಪಡೆದುಕೊಳ್ಳುವ ಸುರಕ್ಷಿತವಾದ ಸಲವಾಗಿದೆ ಮತ್ತು ಈ ವೆಹಿಕಲ್ ಲೋನ್ ಗಳು ಹೊಸ ವಾಹನವನ್ನು ಖರೀದಿ ಮಾಡಲು ಸಹಾಯಕವಾಗುತ್ತದೆ. ಭಾರತದಲ್ಲಿ ಅನೇಕ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ ಗಳು ಕಾರ್ ಲೋನ್ ಅನ್ನು ನೀಡುತ್ತದೆ. ಕೆಲವು ಸಾರ್ವಜನಿಕ ಬ್ಯಾಂಕ್ ಗಳು ಖಾಸಗಿ ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರಕ್ಕೆ ಕಾರ್ ಲೋನ್ ನೀಡುತ್ತದೆ. ಇದೀಗ ನಾವು ಡಿಸೆಂಬರ್ 2025 ರ ವರೆಗಿನ ಬ್ಯಾಂಕ್ ಕೊಟ್ಟ ಮಾಹಿತಿಯ ಪ್ರಕಾರ ಕಡಿಮೆ ಬಡ್ಡಿದರ ಇರುವ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವ ಬ್ಯಾಂಕ್ ಗಳ ಪಟ್ಟಿ
- Canara Bank – ಆರಂಭಿಕ ಬಡ್ಡಿದರ 7.70% ಆಗಿದೆ
- Bank Of Baroda – ಆರಂಭಿಕ ಬಡ್ಡಿದರ 8.15% ಆಗಿದೆ
- ICICI Bank – ಆರಂಭಿಕ ಬಡ್ಡಿದರ 8.5% ಆಗಿದೆ
- HDFC Bank – ಆರಂಭಿಕ ಬಡ್ಡಿದರ 8.55% ಆಗಿದೆ
- State Bank Of India – ಆರಂಭಿಕ ಬಡ್ಡಿದರ 8.70% ಆಗಿದೆ
ಕಾರ್ ಲೋನ್ ಮಾಡಲು ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಕಾರ್ ಲೋನ್ ಮಾಡಲು ಬೇಕಾದ ಅಗತ್ಯ ಪಾನ್ ಕಾರ್ಡ್
- ಚಾಲನಾ ಪರವಾನಗಿ
- ಬ್ಯಾಂಕ್ ಸ್ಟೇಟ್ಮೆಂಟ್
- ಭಾವಚಿತ್ರ
- ಸಿಬಿಲ್ ರಿಪೋರ್ಟ್
- ಸ್ಯಾಲರಿ ಸ್ಲಿಪ್
- ವಾಹನದ ಕೊಟೇಶನ್
ವಾಹನಗಳ ಮೇಲೆ ಸಾಲ ಮಾಡುವವರಿಗೆ ಕೆಲವು ಸಲಹೆ
- ಕ್ರೆಡಿಟ್ ಸ್ಕೋರ್ ಉತ್ತಮವಾಗಿರಿಸಿಕೊಳ್ಳಿ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಸಾಲದ ಬಡ್ಡಿದರ ಕಡಿಮೆ ಆಗುತ್ತದೆ.
- ಸಾಲದ ಬಡ್ಡಿದರ ನಿಮ್ಮ ಆದಾಯದ ಮೇಲು ಕೂಡ ಪ್ರಭಾವ ಬೀರುತ್ತದೆ.
- ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಎಲ್ಲ ಬ್ಯಾಂಕ್ ಗಳ ಬಡ್ಡಿದರ, ಪ್ರೊಸೆಸಿಂಗ್ ಪೀ, ಹಾಗೆ ಫ್ರೀ ಪೇಮೆಂಟ್ ಶುಲ್ಕವನ್ನು ಪರಿಶೀಲಿಸಿಕೊಳ್ಳಿ.
- ಹೆಚ್ಚು ಡೌನ್ ಪೇಮೆಂಟ್ ಮಾಡುವ ಮೂಲಕ ಸಾಲದ ಮೊತ್ತ ಕಡಿಮೆಯಾಗಿ EMI ಕಡಿಮೆಯಾಗುತ್ತದೆ.
- ವ್ಯಾಪಾರ ಉದ್ದೇಶದ ಕಾರ್ ಖರೀದಿಗೆ ತೆರಿಗೆ ವಿನಾಯಿತಿ ಸಿಗಬಹುದು.
ನಾಡುನುಡಿ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿ ನೀಡಲಾಗುವುದಿಲ್ಲ. ಕಾರ್ ಲೋನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ಹತ್ತಿರದ ಬ್ಯಾಂಕಿಗೆ ಭೇಟಿನೀಡಿ.

