Indian Train Mileage: ಭಾರತದಲ್ಲಿ ಪ್ರತಿನಿತ್ಯ ಎರಡು ಕೋಟಿಗೂ ಅಧಿಕ ಪ್ರಯಾಣಿಕರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ದೂರ ಊರುಗಳಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರಯಾಣಿಕರು ರೈಲು ಪ್ರಯಾಣವನ್ನುಆಯ್ಕೆ ಮಾಡಿಕೊಳ್ಳುತ್ತಾರೆ. ಇದಲ್ಲದೆ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಜನರು ಹೆಚ್ಚು ಹೆಚ್ಚು ರೈಲ್ವೆ ಪ್ರಯಾಣವನ್ನ ಆರಿಸಿಕೊಳ್ಳುತ್ತಾರೆ. ನೀವು ರೈಲಿನ ಮೈಲೇಜ್ ಬಗ್ಗೆ ಒಮ್ಮೆ ಆದರೂ ತಿಳಿದುಕೊಂಡಿದ್ದೀರಾ..? ಕಾರ್ ಮತ್ತು ಬೈಕ್ ಗಳಂತೆ ರೈಲಿನ ಮೈಲೇಜ್ ಕೂಡ ಆಸಕ್ತಿದಾಯಕವಾಗಿದೆ. ಭಾರತೀಯ ರೈಲಿನಲ್ಲಿ ಡಿಸೇಲ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಗಳನ್ನೂ ಅಳವಡಿಸಲಾಗಿದೆ. ಈ ಎರಡು ಎಂಜಿನ್ ಗಳು ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈಲಿನ ಡಿಸೇಲ್ ಇಂಜಿನ್ ಮೈಲೇಜ್
ಡಿಸೇಲ್ ರೈಲುಗಳ ಮೈಲೇಜ್ ಆ ರೈಲಿನ ತೂಕ, ಕೋಚ್ ಗಳ ಸಂಖ್ಯೆ ಹಾಗೆ ನಿಲುಗಡೆಯ ಮೇಲೆ ಅವಲಂಭಿತವಾಗಿರುತ್ತದೆ.
- ಒಂದು ಡಿಸೇಲ್ ಟ್ರೈನ್ ಸಂಪೂರ್ಣ ಟ್ರೈನ್ ಅನ್ನು ಎಳೆದಾಗ ಒಂದು ಕಿಲೊಮೀಟರ್ ಗೆ 4 ರಿಂದ 6 ಲೀಟರ್ ಡೀಸೆಲ್ ಬೇಕಾಗುತ್ತದೆ.
- 12 ಕೋಚ್ ಗಳ ಪ್ಯಾಸೆಂಜರ್ ಟ್ರೈನ್ ಪ್ರತಿ ಕಿಲೋಮೀಟರ್ ಚಲಿಸಲು ಸುಮಾರು 6 ಲೀಟರ್ ಬೇಕಾಗುತ್ತದೆ.
- Express ಟ್ರೈನ್ ಗಳಿಗೆ ಪ್ರತಿ ಕಿಲೋಮೀಟರ್ ಗೆ 4.5 ಲೀಟರ್ ಡಿಸೇಲ್ ಬೇಕಾಗುತ್ತದೆ. ಏಕೆಂದರೆ Express ಟ್ರೈನ್ ಗಳು ಕಡಿಮೆ ನಿಲುಗಡೆಯ ಸ್ಥಳವನ್ನು ಪಡೆದುಕೊಂಡಿದೆ.
- ಸೂಪರ್ ಪಾಸ್ಟ್ ಟ್ರೈನ್ ಗಳು 24 ಕೋಚ್ ಗಳೊಂದಿಗೆ ಪ್ರತಿ ಕಿಲೋಮೀಟರ್ ಗೆ 6 ಲೀಟರ್ ಬಳಸಿಕೊಳ್ಳುತ್ತದೆ.
- ಗೂಡ್ಸ್ ಟ್ರೈನ್ ಗಳು ಹೆಚ್ಚು ಲೋಡ್ ಇರುವ ಕಾರಣ ಅತಿ ಹೆಚ್ಚು ಇಂಧನವನ್ನು ಬಳಕೆ ಮಾಡುತ್ತದೆ. (ಅಂದಾಜು ಪ್ರತಿ ಕಿಲೋಮೀಟರ್ ಗೆ 7 ರಿಂದ 8 ಲೀಟರ್)
| ಪ್ಯಾರಾಮೀಟರ್ | ಡೀಸೆಲ್ ಎಂಜಿನ್ | ಎಲೆಕ್ಟ್ರಿಕ್ ಎಂಜಿನ್ |
|---|---|---|
| ಇಂಧನ ಬಳಕೆ (ಪ್ರತಿ ಕಿಮೀ) | 4-6 ಲೀಟರ್ ಡೀಸೆಲ್ | 20 kWh ವಿದ್ಯುತ್ |
| ವೆಚ್ಚ (ಪ್ರತಿ ಕಿಮೀ, ಅಂದಾಜು) | ₹350-500 | ₹130 |
| ದಕ್ಷತೆ (%) | 30-35% | 90-95% |
| ಮಾಲಿನ್ಯ | ಹೆಚ್ಚು (ಕಾರ್ಬನ್ ಎಮಿಷನ್) | ಕಡಿಮೆ (ಝೀರೋ ರೈಲು ಸಮಯದಲ್ಲಿ) |
| ನಿರ್ವಹಣೆ | ಹೆಚ್ಚು ಬೇಕು | ಕಡಿಮೆ ಬೇಕು |
| 2025ರ ಬಳಕೆ | ಕೇವಲ 0.8% ರೂಟ್ಗಳು | 99.2% ರೂಟ್ಗಳು |
ಎಲೆಕ್ಟ್ರಿಕ್ ಎಂಜಿನ್ ಟ್ರೈನ್ ಗಳು
ಟ್ರೈನ್ ಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳು ಡಿಸೇಲ್ ಇಂಜಿನ್ ಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ. ಡಿಸೇಲ್ ಇಂಜಿನ್ ನ ದಕ್ಷತೆ ಸುಮಾರು 30 ರಿಂದ 35% ಆದರೆ ಎಲೆಕ್ಟ್ರಿಕ್ ಎಂಜಿನ್ ಗಳು 95% ವರೆಗೆ ದಕ್ಷತೆಯನ್ನು ಹೊಂದಿದೆ. ಇದರಿಂದ ಇಂಧನ ವೆಚ್ಚ ಕಡಿಮೆಯಾಗುತ್ತದೆ ಮತ್ತು ಮಾಲಿನ್ಯ ಕೂಡ ಕಡಿಮೆ ಆಗುತ್ತದೆ. ಭಾರತೀಯ ರೈಲ್ವೇ ಈಗ 95% ಕ್ಕಿಂತ ಹೆಚ್ಚು ರೂಟ್ ಗಳನ್ನು ವಿದ್ಯುತ್ಕರಣ ಮಾಡಲಾಗಿದೆ ಮತ್ತು ಇದರಿಂದ ದೊಡ್ಡ ಪ್ರಮಾಣದ ಡೀಸೆಲ್ ಉಳಿತಾಯವಾಗುತ್ತಿದೆ. ಇನ್ನು ಡೀಸೆಲ್ ಎಂಜಿನ್ ಗಳಿಗಿಂತ ಹೆಚ್ಚು ನಿಶ್ಯಬ್ದವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತೀಯ ರೈಲ್ವೆ ಲಗೇಜ್ ನಿಯಮ
ಪ್ರಯಾಣಿಕರು ಪ್ರಯಾಣ ಮಾಡುವ ಪ್ರತಿ ಕೋಚ್ ಗಳಿಗೆ ಅನುಗುಣವಾಗಿ ಲಗೇಜ್ ನಿಯಮವನ್ನು ಜಾರಿಗೆ ತರಲಾಗಿದೆ. ಕೋಚ್ ಗಳಿಗೆ ಅನುಗುಣವಾಗಿ ಪ್ರಯಾಣಿಕರು ಲಗೇಜ್ ಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
- AC ಫಸ್ಟ್ ಕ್ಲಾಸ್ 70 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 150 ಕೆಜಿ)
- AC 2 – ಟೈರ್ 50 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 100 ಕೆಜಿ)
- AC 3 – ಟೈರ್ / ಸ್ಲೀಪರ್ 40 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 80 ಕೆಜಿ)
- ಜನರಲ್ 35 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 70 KG)
ನಿಗದಿತ ತೂಕ ಮೀರಿದರೆ ಪ್ರಯಾಣಿಕರು, ಸಾಮಾನ್ಯ ದರಕ್ಕಿಂತ 1.5 ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಈ ರೈಲ್ವೆ ನಿಯಮ ಹೊಸದಲ್ಲ ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಬಗ್ಗೆ ಚರ್ಚೆ ನೆಡೆಯುತ್ತಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

