MDR Charges On UPI Transactions: ದೇಶದಲ್ಲಿ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ UPI ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಹೌದು, ದೇಶದಲ್ಲಿ ಡಿಜಿಟಲ್ ಕ್ಷೇತ್ರ ಬಹಳ ಮುಂದುವರೆದಿದ್ದು ಪ್ರತಿಯೊಬ್ಬರೂ ಕೂಡ UPI ಮೂಲಕ ವಹಿವಾಟು ಮಾಡುತ್ತಾರೆ. ಈ ನಡುವೆ UPI ಕ್ಷೇತ್ರದಲ್ಲಿ NPCI ಕೆಲವು ಬದಲಾವಣೆ ಕೂಡ ಜಾರಿಗೆ ಬಂದಿದೆ. UPI ನಿಂದ ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾದ ಕಾರಣ UPI ನಲ್ಲಿ ಕೆಲವು ಬದಲಾವಣೆ ಜಾರಿಗೆ ತರುವುದು ಅನಿವಾರ್ಯವಾಗಿದೆ. ಇದರ ನಡುವೆ ದೇಶದಲ್ಲಿ UPI ಬಳಸುವವರಿಗೆ ಒಂದು ಬೇಸರದ ಸುದ್ದಿ ಬಂದಿದೆ. ಇನ್ನುಮುಂದೆ UPI ಪೇಮೆಂಟ್ ಮಾಡುವವರು ಹೆಚ್ಚುವರು ಶುಲ್ಕ ಪಾವತಿ ಮಾಡಬೇಕಾಗಿದೆ. ಹಾಗಾದರೆ UPI ಬಳಸುವವರು ಮುಂದಿನ ದಿನಗಳಲ್ಲಿ ಎಷ್ಟು ಶುಲ್ಕ ಪಾವತಿ ಮಾಡಬೇಕು ಮತ್ತು UPI ನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
UPI ಬಳಸುವವರು ಕೊಡಬೇಕು ಹೆಚ್ಚುವರಿ ಶುಲ್ಕ
ದೇಶದಲ್ಲಿ ಚಿಕ್ಕ ವಹಿವಾಟು ಕೂಡ UPI ಮೂಲಕ ನಡೆಯುತ್ತದೆ ಎಂದು ಹೇಳಬಹುದು. UPI ಮೂಲಕ ಕ್ಷಣಮಾತ್ರದಲ್ಲಿ ಹಣವನ್ನು ವಹಿವಾಟು ಮಾಡಬಹುದು ಅನ್ನುವ ಕಾರಣಕ್ಕೆ ಹೆಚ್ಚು ಹೆಚ್ಚು UPI ಬಳಕೆ ಮಾಡುತ್ತಿದ್ದಾರೆ. ಇನ್ನು ಗೂಗಲ್ ಪೆ, ಫೋನ್ ಪೆ ಸೇರಿದಂತೆ ಹಲವು ಹಣಕು ಸಂಸ್ಥೆಗಳು UPI ಬಳಕೆ ಮಾಡಿಕೊಳ್ಳುತ್ತಿದೆ. ಇಷ್ಟು ದಿನಗಳಿಂದ UPI ಬಳಸುವ ಎಲ್ಲರೂ ಉಚಿತವಾಗಿ ಟ್ರಾನ್ಸಾಕ್ಷನ್ ಮಾಡುತ್ತಿದ್ದರೂ, ಆದರೆ ಇನ್ನುಮುಂದೆ ಯಾವುದು ಉಚಿತವಲ್ಲ ಮತ್ತು ಇನ್ನುಮುಂದೆ ಟ್ರಾನ್ಸಾಕ್ಷನ್ ಮಾಡಲು ಹಣ ಕಡ್ಡಾಯವಾಗಿ ಕಟ್ಟಬೇಕು.
ಕಳೆದ ಕೆಲವು ವರ್ಷಗಳಿಂದ UPI ಎಲ್ಲಾ ಹಣಕಾಸು ಕ್ಷೇತ್ರವನ್ನು ಹಿಂದಿಕ್ಕಿ ಮುಂದಕ್ಕೆ ಸಾಗಿದೆ ಎಂದು ಹೇಳಬಹುದು. ಇನ್ನು ಪ್ಯಾತ್ಮ, ಗೂಗಲ್ ಪೆ, ಫೋನ್ ಸೇರಿದಂತೆ ಎಲ್ಲಾ ಹಣಕ್ಸು ಸಂಸ್ಥೆಗಳು UPI ವಹಿವಾಟಿನ ಮೇಲೆ ಶುಲ್ಕ ವಿಧಿಸುತ್ತದೆ. UPI ಟ್ರಾನ್ಸಾಕ್ಷನ್ ಶುಲ್ಕದ ನಡುವೆ ಈಗ UPI ಬಳಕೆ ಮಾಡುವವರಿಗೆ ಇನ್ನೊಂದು ಬೇಸರದ ಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು, UPI ಬಳಕೆ ಮಾಡುವವರು ಮುಂದಿನ ದಿನಗಳಲ್ಲಿ MDR ಶುಲ್ಕ ಪಾವತಿ ಮಾಡಬೇಕು.
ಗ್ರಾಹಕರ ಪ್ರತಿ ಹಂತದ ವಹಿವಾಟಿನಲ್ಲಿ ಅವರಿಗೆ ಸುರಕ್ಷತೆ ಮತ್ತು ಅವರ ಹಣಕ್ಕೆ ಭದ್ರತೆ ನೀಡಬೇಕು ಅನ್ನುವ ಉದ್ದೇಶದಿಂದ ಗ್ರಾಹಕರ UPI ಪಾವತಿಗಳ ಮೇಲೆ MDR ಶುಲ್ಕ ಹಾಕು ಈಗ ಕಂಪನಿ ಮುಂದಾಗಿದೆ. MDR ಶುಲ್ಕ ಏನು ಅಂದರೆ, ವ್ಯಾಪಾರಿಗಳು UPI ಮೂಲಕ ಪಡೆಯುವ ಹಣಕ್ಕೆ ವಿಧಿಸುವ ಶುಲ್ಕ ಆಗಿದೆ ಮತ್ತು ಈ ಶುಲ್ಕ ಪ್ರೊಸೆಸಿಂಗ್ ಶುಲ್ಕ ಎಂದು ಕೂಡ ಕರೆಯುತ್ತಾರೆ. ಕ್ರೆಡಿಟ್ ಕಾರ್ಡ್ ಮೂಲಕ ವ್ಯಾರಿಗಳು ಹಣವನ್ನು ಸ್ವೀಕಾರ ಮಾಡಿದರೆ ಆ ಹಣಕ್ಕೆ ವಿಧಿಸುವ ಶುಲ್ಕವನ್ನು MDR ಶುಲ್ಕ ಎಂದು ಕರೆಯಲಾಗುತ್ತದೆ. ಕ್ರೆಡಿಟ್ ಕಾರ್ಡ್ ಮೇಲೆ ಶುಲ್ಕ ವಿಧಿಸುವ ಕಾರಣ ಹಲವು ವ್ಯಾಪಾರಿಗಳು ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಸ್ವೀಕಾರ ಸಮಯದಲ್ಲಿ ಹೆಚ್ಚು ಶುಲ್ಕದ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಾರೆ.
UPI ಕಂಪನಿ ನಿಯಮದ ಪ್ರಕಾರ 2000 ರೂಪಾಯಿಗಿಂತ ಅಧಿಕ ಹಣಕಾಸಿನ ವಹಿವಾಟು ಮಾಡುವವರು ಕಡ್ಡಾಯವಾಗಿ ಈ MDR ಶುಲ್ಕ ಪಾವತಿ ಮಾಡಬೇಕು. UPI ಕಂಪನಿ ಇಂತಹ ವಹಿವಾಟಿನ ಮೇಲೆ ಶೇಕಡಾ 0.3 ರಷ್ಟು ಶುಲ್ಕ ವಿಧಿಸುತ್ತದೆ. MDR ಶುಲ್ಕ ವ್ಯಾಪಾರಿಗಳಿಗೆ ನೇರವಾಗಿ ತಟ್ಟದೇ ಇದ್ದರೂ ಕೂಡ ಗ್ರಾಹಕರಿಗೆ ನೇರವಾಗಿ ತಟ್ಟುತ್ತದೆ ಎಂದು ಹೇಳಬಹುದು. ಕ್ರೆಡಿಟ್ ಕಾರ್ಡ್ ಮೇಲೆ ಮಾಡುವ ವಹಿವಾಟುಗಳಿಗೆ ಮಾತ್ರ ಈ MDR ಶುಲ್ಕ ನಿಗದಿ ಮಾಡಲಾಗುತ್ತದೆ, ಆದರೆ ಡೆಬಿಟ್ ಮೂಲಕ ವಹಿವಾಟು ಮಾಡಿದರೆ ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ.