Gold Loan LTV Ration: 2025 ರ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಸದ್ಯ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 12 ಸಾವಿರ ಗಡಿ ದಾಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಬ್ಯಾಂಕುಗಳು ಮತ್ತು NBFC ಗಳು ಚಿನ್ನದ ಸಾಲ ನೀಡುವಲ್ಲಿ ಹೆಚ್ಚು ಜಾಗ್ರತೆಯನ್ನು ವಹಿಸುತ್ತಿದೆ. ಇದಕ್ಕಾಗಿ ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸದ್ಯ ಚಿನ್ನದ ಬೆಲೆ ಏರಿಳಿತದ ಅಪಾಯದಿಂದ ಬ್ಯಾಂಕುಗಳು ಮತ್ತು NBFC ಗಳು ಸ್ವಯಂ ಪ್ರೇರಿತವಾಗಿ LTV ಅನ್ನು 60-65% ಗೆ ಇಳಿಕೆ ಮಾಡಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ನಾವೀಗ ಸಂಪೂರ್ಣವಾದ ವಿವರವನ್ನು ತಿಳಿದುಕೊಳ್ಳೋಣ.
ಗೋಲ್ಡ್ ಲೋನ್ LTV
ಚಿನ್ನದ ಸಾಲದಲ್ಲಿ LTV (ಮೌಲ್ಯಕ್ಕೆ ಸಾಲ) ಎಂದರೆ ಸಾಲದಾತನು ನಿಮಗೆ ಸಾಲವಾಗಿ ನೀಡುವ ನಿಮ್ಮ ಚಿನ್ನದ ಮಾರುಕಟ್ಟೆ ಮೌಲ್ಯದ ಶೇಕಡಾವಾರು ಪ್ರಮಾಣ ಆಗಿದೆ. ಇದನ್ನು (ಸಾಲದ ಮೊತ್ತ ÷ ಚಿನ್ನದ ಮೌಲ್ಯ) × 100 ಮೂಲಕ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, 75% LTV ಎಂದರೆ 1,00,000 ಚಿನ್ನದ ಮೌಲ್ಯದಲ್ಲಿ ನಿಮಗೆ 75,000 ಸಾಲವನ್ನು ನೀಡುತ್ತದೆ.
ಚಿನ್ನದ ಬೆಲೆ ಏರಿಳಿತದ ಪರಿಣಾಮ
2025 ರಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆ ಕಾಣುತ್ತಿದೆ. 2025 ರಲ್ಲಿ ಚಿನ್ನದ ಬೆಲೆ 30% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಆದರೆ ಬೆಲೆ 10-15% ಕುಸಿದರೆ ಅಡವಿಟ್ಟ ಚಿನ್ನದ ಮೌಲ್ಯ ಸಾಲಕ್ಕಿಂತ ಕಡಿಮೆಯಾಗಬಹುದು. ಇದರಿಂದ ಸಾಲಗಾರರು ಮರುಪಾವತಿ ಮಾಡದೇ ಇದ್ದರೆ ಬ್ಯಾಂಕುಗಳಿಗೆ ನಷ್ಟ ಉಂಟಾಗುತ್ತದೆ. ಇದಕ್ಕಾಗಿ RBI ಹೊಸ ನಿಯಮವನ್ನು ಜಾರಿಗೆ ತಂದಿದೆ. Tiered Lifetime Value 60-65% ಗೆ ಇಳಿಕೆ ಮಾಡಿದೆ. ಇನ್ನುಮುಂದೆ 1 ಲಕ್ಷ ಮೌಲ್ಯದ ಚಿನ್ನಕ್ಕೆ 60 ರಿಂದ 65 ಸಾವಿರ ಮಾತ್ರ ಸಾಲ ಸಿಗುತ್ತದೆ. ಈ ಮೊದಲು 70 ರಿಂದ 75 ಸಾವಿರ ಸಾಲ ಸಿಗುತ್ತಿತ್ತು.
ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಸಾಲ
ಯುವಜನರು ಮತ್ತು ಮಧ್ಯಮ ವಯಸ್ಸಿನ ಜನರು ವ್ಯವಹಾರಕ್ಕೆ ಬಳಸಿಕೊಳ್ಳದೆ, ದೈನಂದಿನ ಖರ್ಚುಗಳಿಗೆ ಹೆಚ್ಚಾಗಿ ಚಿನ್ನದ ಸಾಲವನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2025 ರ ಅಕ್ಟೋಬರ್ ನಲ್ಲಿ ಒಟ್ಟು ಚಿನ್ನದ ಸಾಲ 3.38 ಲಕ್ಷ ಕೋಟಿ ರೂಪಾಯಿ ದಾಟಿದೆ. ವರ್ಷದಿಂದ ವರ್ಷಕ್ಕೆ 128% ಬೆಳವಣಿಗೆ ಆಗುತ್ತಿದೆ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚಾಗಿರುದರಿಂದ RBI ಹೊಸ ನಿಯಮಗಳು ಪಾರದರ್ಶಕತೆ ಮತ್ತು ಸುರಕ್ಷತೆಗೆ ಒತ್ತು ನೀಡಿವೆ. ನೀವು ಸಾಲ ಪಡೆಯುವ ಮೊದಲು ಬ್ಯಾಂಕಿನ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಿ.
ಗೋಲ್ಡ್ ಲೋನ್ ಪಡೆಯುವವರಿಗೆ ಅಗತ್ಯ ಸಲಹೆಗಳು
- ಬ್ಯಾಂಕಿನಿಂದ ಸಾಲ ಪಡೆಯುವ ಮುನ್ನ ಬ್ಯಾಂಕಿನ ಪ್ರಸ್ತುತ LTV ಮತ್ತು ಬಡ್ಡಿದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
- ಚಿನ್ನದ ಬೆಲೆ ಏರಿಳಿತದ ಬಗ್ಗೆ ಮಾಹಿತಿ ತಿಳಿಯಿರಿ
- ಸಣ್ಣ ಸಾಲಗಳಿಗೆ ಹೆಚ್ಚು LTV ಸಿಗುತ್ತದೆ, ಆದರೆ ದೊಡ್ಡಸಾಲಗಳಿಗೆ ಕಡಿಮೆ LTV ಸಿಗುತ್ತದೆ
- ಸಾಲ ಪಡೆಯುವಾಗ ಮತ್ತು ಹಿಂತಿರುಗಿಸುವಾಗ ಚಿನ್ನದ ಫೋಟೋ ತೆಗೆದು, ಎಲ್ಲಾ ವಿವರಗಳನ್ನು ಬರೆದಿಟ್ಟುಕೊಳ್ಳಿ
- ಮರುಪಾವತಿ ಆಯ್ಕೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ (EMI, ಬ್ಯುಲೆಟ್ ಪೇಮೆಂಟ್ ಮತ್ತು ಓವರ್ ಡ್ರಾಫ್ಟ್)
Disclaimer: This information is provided for awareness purposes only. For personalised legal advice, consult a qualified professional and refer to official government notifications.

