Namma Hola Namma Dari Scheme: ಹೊಲ, ಗದ್ದೆ, ತೋಟಗಳನ್ನು ಹೊಂದಿರುವ ರೈತರು ಸುಗಮ ರಸ್ತೆ ಇಲ್ಲದೆ ಗ್ರಾಮಸ್ಥರ ನಡುವೆ ಜಗಳ ಮತ್ತು ಮನಸ್ತಾಪಗಳು ಸಾಮಾನ್ಯವಾಗಿದೆ. ಇದೀಗ ಈ ಸಮಸ್ಯೆಯನ್ನು ಮೂಲದಿಂದಲೇ ನಿವಾರಿಸುವ ಗುರಿಯೊಂದಿಗೆ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ರಾಜ್ಯ ಸರ್ಕಾರ ಹೊಲದಲ್ಲಿ ಬೆಳೆದ ಬೆಳೆಯನ್ನು ಸಾಗಿಸಲು ಸುಗಮ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ “ನಮ್ಮ ಹೊಲ ನಮ್ಮ ದಾರಿ” ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಏನಿದು “ನಮ್ಮ ಹೊಲ ನಮ್ಮ ದಾರಿ” ಯೋಜನೆ ಮತ್ತು ಈ ಯೋಜನೆಯ ಲಾಭ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
“ನಮ್ಮ ಹೊಲ ನಮ್ಮ ದಾರಿ” ಯೋಜನೆಯ ಉದ್ದೇಶ
- ರಾಜ್ಯದ ಪ್ರತಿ ರೈತನ ಹೊಲಕ್ಕೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು
- ರೈತರಿಗೆ ಸಮಯ ಮತ್ತು ವೆಚ್ಚದ ಉಳಿತಾಯ ಮಾಡುವುದು
- ಗ್ರಾಮೀಣ ಪ್ರದೇಶದ ಅಭಿವೃದ್ಧಿ
- ರೈತರಿಗೆ ಮೂಲಭೂತ ಸೌಕರ್ಯ ಒದಗಿಸುವುದು
- ರೈತ ರೈತನ ನಡುವಿನ ಮನಸ್ತಾಪ ಕಡಿಮೆ ಮಾಡುದು
“ನಮ್ಮ ಹೊಲ ನಮ್ಮ ದಾರಿ” ಯೋಜನೆಯ ಪ್ರಯೋಜನಗಳು
- ವಾಹನಗಳು ನೇರವಾಗಿ ಹೊಲಕ್ಕೆ ಪ್ರವೇಶ ಮಾಡುತದೆ
- ಸಾಗಣೆ ವೆಚ್ಚಗಳು ಗಣನೀಯವಾಗಿ ಇಳಿಕೆಯಾಗುತ್ತವೆ
- ಮಳೆಗಾಲದಲ್ಲಿ ಕೆಸರು ಸಮಸ್ಯೆಗಳು ಕಡಿಮೆಯಾಗಿ, ಬೆಳೆಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಕೊಂಡೊಯ್ಯಬಹುದು
- ರಸಗೊಬ್ಬರ ಮತ್ತು ಕೃಷಿ ಸಾಮಗ್ರಿಗಳನ್ನು ಸುಲಭವಾಗಿ ಹೊಲಗಳಿಗೆ ಸಾಗಿಸಬಹುದು
- ಗ್ರಾಮಗಳು ನಗರಗಳೊಂದಿಗೆ ಸಂಪರ್ಕ ಹೊಂದುವ ಮೂಲಕ ಗ್ರಾಮೀಣ ಅಭಿವೃದ್ಧಿ
ರಸ್ತೆ ಕಾಮಗಾರಿ ವೆಚ್ಚ
- ಪ್ರತಿ ಒಂದು ಕಿಲೋಮೀಟರ್ ಗೆ 12.5 ಲಕ್ಷ ರೂಪಾಯಿ ವೆಚ್ಚ
- ಅದರಲ್ಲಿ 9 MG ನರೇಗಾ ಯೋಜನೆಯಲ್ಲಿ ಬಳಸಿಕೊಳ್ಳಾಗುತ್ತದೆ.
- 3.75 ಮೀಟರ್ ಅಗಲದ ರಸ್ತೆ ಕಲ್ಲು ಹಾಕಿ ರೈತರ ವಾಹನಗಳಿಗೆ ಸುಗಮ
- ಉಳಿದ 3.50 ಲಕ್ಷ ರೂಪಾಯಿಗಳನ್ನು ರಾಜ್ಯದ ಬಜೆಟ್ ಶೀರ್ಷಿಕೆ ಯಡಿ ಮೀಸಲಿಟ್ಟು, ಯಂತ್ರಗಳ ಬಳಕೆಗೆ ಅನುಕೂಲ ಮಾಡಿಕೊಡಲಾಗುತ್ತದೆ.
“ನಮ್ಮ ಹೊಲ ನಮ್ಮ ದಾರಿ” ಯೋಜನೆಯ ಅರ್ಹತೆ
- ಕರ್ನಾಟಕದ ರೈತರಾಗಿರಬೇಕು
- ರಸ್ತೆ ಕಂದಾಯ ಇಲಾಖೆ ನಕ್ಷೆಯಲ್ಲಿ ಸಾರ್ವಜನಿಕ ರಸ್ತೆ ಅಥವಾ ಕಾಲುದಾರಿ ಆಗಿ ಗುರುತಿಸ ಕೊಂಡಿರಬೇಕು
- ಒಬ್ಬರಿಗೆ ಮಾತ್ರ ಬಳಕೆಗೆ ಸೀಮಿತವಲ್ಲದೆ, ಅನೇಕ ರೈತರಿಗೆ ಉಪಯುಕ್ತವಾಗುವ ರಸ್ತೆಗಳನ್ನು ಆಯ್ಕೆಮಾಡಬೇಕು.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಮನವಿ ಪತ್ರವನ್ನು ಗ್ರಾಮಪಂಚಾಯಿತಿ PDO ಗೆ ಸಲ್ಲಿಸಬೇಕು
- ತಾಲೂಕು ಅಧಿಕಾರಿಗಳು ಶಾಸಕರೊಂದಿಗೆ ಸಮಾಲೋಚಿಸಿ, ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ಕಾಮಗಾರಿಗಳನ್ನು ನಿರ್ಧರಿಸುತ್ತಾರೆ.
- ನಿಮ್ಮ ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿ ಮನವಿ ಮಾಡಿ, ಮಂಜೂರಾತಿಗೆ ಒತ್ತಾಯಿಸಿ.
- ಕಾಮಗಾರಿ ಪೂರ್ಣಗೊಳ್ಳಲು ಮೊದಲು ಮತ್ತು ನಂತರದ ಫೋಟೋಗಳು
- ದಾಖಲೆಗಳ ಪರಿಶೀಲನೆ
- ಗ್ರಾಮಸಭೆಯಲ್ಲಿ ಅನುಮೋಧನೆ ಪಡೆಯುವುದು ಕಡ್ಡಾಯವಾಗಿದೆ
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಸಾರ ಮಾಡಲಾಗುವುದಿಲ್ಲ. ಇದು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಾಗಿದೆ ಮತ್ತು ಸರ್ಕಾರೀ ವೆಬ್ಸೈಟ್ ನಲ್ಲಿ ಕೂಡ ಪ್ರಕಟವಾಗಿದೆ.

