Encumbrance Certificate Karnataka: ನೀವು ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸಲು ಯೋಚನೆ ಮಾಡುತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಆಸ್ತಿ ಖರೀದಿ ಮಾಡುವ ಮುನ್ನ ಕೆಲವು ಅಗತ್ಯ ದಾಖಲೆಯನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಕೂಡ ಈ ಕುರಿತಂತೆ ಆದೇಶ ಹೋರಾಡಿದೆ ಮತ್ತು ಸ್ವಂತ ಮನೆ ಅಥವಾ ಆಸ್ತಿ ಖರೀದಿಗೆ ಇನ್ನುಮುಂದೆ ಈ ದಾಖಲೆಗಳು ಕಡ್ಡಾಯವಾಗಿದೆ. ಹಾಗಾದರೆ ಸ್ವಂತ ಮನೆ ಅಥವಾ ಆಸ್ತಿ ಖರೀದಿಗೆ ಯಾವ ಯಾವ ದಾಖಲೆಗಳು ಕಡ್ಡಾಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Encumbrance Certificate ಎಂದರೆ?
Encumbrance ಪ್ರಮಾಣಪತ್ರ ಎಂದರೆ ಒಂದು ಆಸ್ತಿಯು ಅಡಮಾನ, ಸಾಲ, ಕಾನೂನು ವಿವಾದ ಅಥವಾ ಬೇರೆ ಯಾವುದೇ ಆರ್ಥಿಕ ಅಥವಾ ಕಾನೂನು ಹೊಣೆಗಾರಿಕೆಗಳಿಂದ ಮುಕ್ತವಾಗಿದೆ ಎಂದು ದೃಢೀಕರಿಸುವ ಅಧಿಕೃತ ದಾಖಲೆಯಾಗಿದೆ, ಇದನ್ನು ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ನೀಡಲಾಗುತ್ತದೆ ಮತ್ತು ಆಸ್ತಿ ಮಾರಾಟ, ಖರೀದಿ ಅಥವಾ ಸಾಲದ ಸಮಯದಲ್ಲಿ ಆಸ್ತಿಯ ಶೀರ್ಷಿಕೆ ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಮುಖ್ಯವಾಗಿದೆ. ಬ್ಯಾಂಕುಗಳು ಹೋಮ್ ಲೋನ್ ನೀಡುವಾಗ ಈ ದಾಖಲೆಯನ್ನು ಕಡ್ಡಾಯವಾಗಿ ಕೇಳುತ್ತವೆ.
ಏಕೆ ಈ ದಾಖಲೆ ಕಡ್ಡಾಯವಾಗಿದೆ?
ಭಾರತೀಯ ರಿಜಿಸ್ಟ್ರೇಷನ್ ಆಕ್ಟ್ ಮತ್ತು ಕರ್ನಾಟಕ ಸ್ಟ್ಯಾಂಪ್ ಆಕ್ಟ್ ಪ್ರಕಾರ, ಆಸ್ತಿ ವ್ಯವಹಾರಗಳು ಸುರಕ್ಷಿತವಾಗಿರಬೇಕು. EC ದಾಖಲೆ ಖರೀದಿದಾರನನ್ನು ಮೋಸದಿಂದ ರಕ್ಷಿಸುತ್ತದೆ. ಕರ್ನಾಟಕದಲ್ಲಿ ಆಸ್ತಿ ಖರೀದಿ ಅಥವಾ ಮಾರಾಟದ ಸಮಯದಲ್ಲಿ ಈ ಪ್ರಮಾಣಪತ್ರ ಅತ್ಯಗತ್ಯ. ಈ ದಾಖಲೆ ಇಲ್ಲದಿದ್ದರೆ ರಿಜಿಸ್ಟ್ರೇಷನ್ ಪ್ರಕ್ರಿಯೆಯಲ್ಲಿ ತೊಂದರೆಯಾಗಬಹುದು. 20 ಅಥವಾ 30 ವರ್ಷಗಳ EC ದಾಖಲೆ ಪರಿಶೀಲನೆ ಮಾಡುದು ಕಡ್ಡಾಯ, ಇಲ್ಲವಾದರೆ ಹಳೆಯ ಸಾಲ ಅಥವಾ ಕೋರ್ಟ್ ಕೇಸ್ ಇದ್ದರೆ ಮುಂದೆ ಸಮಸ್ಯೆ ಉಂಟಾಗುತ್ತದೆ.
ದಾಖಲೆ ಪಡೆದುಕೊಳ್ಳುವ ವಿಧಾನ
- ಆನ್ಲೈನ್ ಮೂಲಕ ಮೊದಲು https://kaveri.karnataka.gov.in/landing-page ಗೆ ಭೇಟಿ ನೀಡಿ. ಆಸ್ತಿ ವಿವರವನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಿ. ಫಾರ್ಮ್ 15 ಅಥವಾ 16 ಪಡೆದುಕೊಳ್ಳಿ. Nil Encumbrance Certificate ಆದರೆ ಆಸ್ತಿ ಸಂಪೂರ್ಣ ಮುಕ್ತವಾಗಿದೆ.
- ಆಫ್ ಲೈನ್ ಮೂಲಕ ಮಾಡುದಾದರೆ ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಶುಲ್ಕ ಕಡಿಮೆ ಇರುತ್ತದೆ. ಡಿಜಿಟಲ್ ಸೈನ್ EC ಲಭ್ಯವಿರುತ್ತದೆ.
ಕರ್ನಾಟಕದಲ್ಲಿ ಈ ದಾಖಲೆಗಳ ಮಹತ್ವ
ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಮತ್ತು ಹುಬ್ಬಳ್ಳಿಯಂತಹ ನಗರಗಳಲ್ಲಿ ಆಸ್ತಿ ವ್ಯವಹಾರಗಳು ತುಂಬಾ ಸಾಮಾನ್ಯ. ಆದರೆ ಇನ್ನುಮುಂದೆ ಈ ದಾಖಲೆಗಳಿಲ್ಲದೆ ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸುವುದು ಕಷ್ಟವಾಗಬಹುದು. ಉದಾಹರಣೆಗೆ, ಬೆಂಗಳೂರಿನಂತಹ ತಾಂತ್ರಿಕ ಕೇಂದ್ರದಲ್ಲಿ, ಆಸ್ತಿ ಮಾರಾಟ ಅಥವಾ ಖರೀದಿಯ ಸಂದರ್ಭದಲ್ಲಿ EC ಅನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ. ಇದರ ಜೊತೆಗೆ, ಈ ದಾಖಲೆಗಳು ಭವಿಷ್ಯದಲ್ಲಿ ಯಾವುದೇ ಕಾನೂನು ತೊಂದರೆಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

