Canara Bank Home Loan 15 Lakh EMI: ಸ್ವಂತ ಮನೆ ಮಧ್ಯಮ ವರ್ಗದ ಜನರ ದೊಡ್ಡ ಕನಸಾಗಿರುತ್ತದೆ. ಹಣವನ್ನು ಕೂಡಿತ್ತು ಮನೆ ನಿರ್ಮಾಣ ಮಾಡುದು ಕನಸಿನ ಮಾತು. ಹಾಗಾಗಿ ಸ್ವಂತ ಮನೆ ಕನಸನ್ನು ನನಸಾಗಿಸಲು ಗೃಹಸಾಲ ಅತಿ ಅಗತ್ಯವಾಗಿರುತ್ತದೆ. ದೇಶದಲ್ಲಿ ಅನೇಕ ಬ್ಯಾಂಕ್ ಗಳು ಗೃಹ ಸಾಲವನ್ನು ನೀಡುತ್ತದೆ. ಆದರೆ ಆ ಬ್ಯಾಂಕ್ ಗಳ ಬಡ್ಡಿದರ ಬೇರೆ ಬೇರೆ ಇರುತ್ತದೆ. ಹಾಗಾಗಿ ನೀವು ಎಲ್ಲ ಬ್ಯಾಂಕ್ ಗಳ ಬಡ್ಡಿದರ ದರ, ಪ್ರೊಸೆಸಿಂಗ್ ಶುಲ್ಕ ಎಲ್ಲವನ್ನು ಗಮನಿಸಿ ನಂತರ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಇದೀಗ ನಾವು ಕೆನರಾ ಬ್ಯಾಂಕ್ ನಲ್ಲಿ ಗೃಹಸಾಲ ಪಡೆದುಕೊಳ್ಳಲು ಎಷ್ಟು ಸಂಬಳ ಪಡೆಯುತ್ತಿರಬೇಕು ಹಾಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅಗತ್ಯ ಅನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಕೆನರಾ ಬ್ಯಾಂಕ್ ಗೃಹ ಸಾಲ
ಕೆನರಾ ಬ್ಯಾಂಕ್ಕೆ 5 ರಿಂದ 30 ವರ್ಷಗಳ ವರೆಗೆ ಗೃಹ ಸಾಲವನ್ನು ನೀಡುತ್ತದೆ. ಇನ್ನು ಕೆನರಾ ಬ್ಯಾಂಕ್ ನ ಗೃಹ ಸಾಲದ ಬಡ್ಡಿದರ ಸುಮಾರು 7.15% ನಿಂದ ಆರಂಭವಾಗುತ್ತದೆ. ಬಡ್ಡಿದರಗಳು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ ಹಾಗಾಗಿ ಬಡ್ಡಿದರ ಸರಾಸರಿ 8.5% ನಿಂದ ಆರಂಭವಾಗುತ್ತದೆ. https://canarabank.bank.in/housing-loan ವೆಬ್ ಸೈಟ್ ಗೆ ಭೇಟಿನೀಡುವ ಮೂಲಕ ಬಡ್ಡಿದರ ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ತಿಂಗಳ ಸಂಬಳದ ಆಧಾರದ ಮೇಲೆ ಗೃಹ ಸಾಲ
ಕೆನರಾ ಬ್ಯಾಂಕ್ ಸಂಬಳ ಪಡೆಯುವ ವ್ಯಕ್ತಿಯ EMI ಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಾಲವನ್ನು ನೀಡುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ವ್ಯಕ್ತಿಯ ಸಾಲದ ಮೊತ್ತ ಗರಿಷ್ಠ 72 ತಿಂಗಳ ಗ್ರಾಸ್ ಸಂಬಳಕ್ಕೆ ಸಮನಾಗಿರುತ್ತದೆ. ಅಂದರೆ ನಿಮ್ಮ ತಿಂಗಳ ಗ್ರಾಸ್ ಸಂಬಳದ 72 ಪಟ್ಟು ಸಾಲ ಸಿಗುತ್ತದೆ. ಉಧಾಹರಣೆಗೆ 15 ಲಕ್ಷ ಸಾಲಕ್ಕೆ ನಿಮ್ಮ ತಿಂಗಳ ಗ್ರಾಸ್ ಸಂಬಳ 20 ರಿಂದ 25,000 ರೂಪಾಯಿ ಆಗಿರಬೇಕು. ಬ್ಯಾಂಕ್ ಗಳು ಸಾಮಾನ್ಯವಾಗಿ ತಿಂಗಳ EMI ನಿಮ್ಮ ಟೇಕ್ ಹೋಂ ಸಂಬಳದ 40 ರಿಂದ 50% ಮೀರದಂತೆ ನೋಡಿಕೊಳ್ಳುತ್ತವೆ. 15 ಲಕ್ಷ ಸಾಲವನ್ನು 20 ರಿಂದ 30 ವರ್ಷ ಅವಧಿಗೆ ತೆಗೆದುಕೊಂಡರೆ EMI ಸುಮಾರು 12,000 ರಿಂದ 15,000 ರೂಪಾಯಿ ಆಗುತ್ತದೆ. ಹಾಗಾಗಿ ತಿಂಗಳ ಕನಿಷ್ಠ ಟೇಕ್ ಹೋಂ ಸಂಬಳ 30,000 ಕ್ಕಿಂತ ಅಧಿಕವಾಗಿದ್ದರೆ, ಸುಲಭವಾಗಿ ಗೃಹ ಸಾಲ ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಇದು ಅಂದಾಜು ಲೆಕ್ಕಾಚಾರವಷ್ಟೇ, ನಿಖರವಾದ ಮಾಹಿತಿಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ EMI ಕ್ಯಾಲ್ಕ್ಯುಲೇಟರ್ ಬಳಕೆ ಮಾಡಿ.
| ಬಡ್ಡಿ ದರ (%) | ಅವಧಿ (ವರ್ಷ) | ತಿಂಗಳ EMI (₹) | ಮೊತ್ತ (₹) | ಸಂಬಳ ಅಗತ್ಯ |
|---|---|---|---|---|
| 8.50 | 20 | 13,017 | 31.24 ಲಕ್ಷ | 26,035 |
| 8.50 | 25 | 12,078 | 36.24 ಲಕ್ಷ | 24,157 |
| 8.50 | 30 | 11,534 | 41.52 ಲಕ್ಷ | 23,067 |
| 9.00 | 20 | 13,496 | 32.39 ಲಕ್ಷ | 26,992 |
| 9.25 | 30 | 12,340 | 44.42 ಲಕ್ಷ | 24,680 |
Canara Bank ಸಾಲಕ್ಕೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಪಾಸ್ ಪೋರ್ಟ್ / ವೋಟರ್ ID
- ಭಾವಚಿತ್ರ
- ಯುಟಿಲಿಟಿ ಬಿಲ್ ಅಥವಾ ರೆಂಟ್ ಅಗ್ರಿಮೆಂಟ್
- ಕಳೆದ 3-6 ತಿಂಗಳ ಸಂಬಳ ಸ್ಲಿಪ್
- ಫಾರ್ಮ್ 16
- ಬ್ಯಾಂಕ್ ಪಾಸ್ ಬುಕ್
- ಆಸ್ತಿ ದಾಖಲೆಗಳು
- ಸ್ವಯಂ ಉದ್ಯೋಗಿಗಳು ಹೆಚ್ಚುವರಿಯಾಗಿ, IT Returns, Balance Sheet ನೀಡಬೇಕು.
ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://www.canarabank.bank.in/ ಗೆ ಭೇಟಿ ನೀಡಿ, ಮೊಬೈಲ್ ನಂಬರ್ ಹಾಕಿ ನಂತರ OTP ನಮೂದಿಸಬೇಕು. ವಯಕ್ತಿಕ ದಾಖಲೆ, ಉದ್ಯೋಗ, ಆದಾಯ ವಿವರವನ್ನು ಭರ್ತಿ ಮಾಡಬೇಕು. ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ KYC ಪೂರ್ಣಗೊಳಿಸಬೇಕು. ನಿಮಗೆ 24 ರಿಂದ 48 ಗಂಟೆಗಳಲ್ಲಿ ಸಾಲ ಮಂಜೂರಾತಿ ಪತ್ರ ಬರುತ್ತದೆ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಕೆನರಾ ಬ್ಯಾಂಕಿನ ಹೋಂ ಲೋನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕಿಗೆ ಭೇಟಿನೀಡಿ.

