Oppo Reno 15 Series: ಅನೇಕ Smartphone ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಗಾಗ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಭಾರತದಲ್ಲಿ ಒಪ್ಪೋ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಆಗಲಿದೆ. ಜನವರಿ 8 ಕ್ಕೆ ಬಿಡುಗಡೆ ಆಗಲಿರುವ Oppo Reno15 Series ನಲ್ಲಿ 3 (Reno 15, Reno 15 Pro and Reno 15 Pro Mini) ಮಾಡೆಲ್ ಗಳು ಇರಲಿದೆ. ನಾವೀಗ Oppo Reno15 ನ ಬೆಲೆ..? ಫೀಚರ್..? ಹಾಗೆ ಕ್ಯಾಮರಾ ಕ್ವಾಲಿಟಿ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
Oppo Reno15 Series
ಭಾರತದಲ್ಲಿ Oppo Reno15 Series 2026 ಜನವರಿ 8 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಆಗಲಿದೆ. Oppo Reno15 Series ನಲ್ಲಿ ಒಟ್ಟು 3 ಮಾಡೆಲ್ ಗಳು ಇರಲಿದೆ. ಅವುಗಳೆಂದರೆ Reno 15, Reno 15 Pro and Reno 15 Pro Mini. ಹೊಸ ಸ್ಮಾರ್ಟ್ ಫೋನ್ ಖರೀದಿಸಬೇಕು ಅಂದುಕೊಂಡವರಿಗೆ ಒಂದೊಳ್ಳೆ ಆಯ್ಕೆ ಅಂದರೆ ತಪ್ಪಾಗಲ್ಲ. ನಾವೀಗ ಈ ಸ್ಮಾರ್ಟ್ ಫೋನ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
Oppo Reno15 Price
ಮೂಲದಿಂದ ತಿಳಿದುಬಂದಿರುವಂತ ಮಾಹಿತಿ ಪ್ರಕಾರ Oppo Reno15 ಬೆಲೆ 50,000 ಕಿಂತ ಕಡಿಮೆ ಇರಬಹುದು. ರೆನೊ ಮಿನಿ ಮಾಡೆಲ್ ಸುಮಾರು 40 ಸಾವಿರಕ್ಕಿಂತ ಕಡಿಮೆ ಇರಬಹುದು. ಆದರೆ, ರೆನೊ ಪ್ರೊ ಮಾಡೆಲ್ ನ ಬೆಲೆ ಸ್ವಲ್ಪ ದುಬಾರಿ ಆಗಬಹುದು. Oppo Reno series ನ ಹಿಂದಿನ ಬೆಳೆಗೆ ಹೋಲಿಕೆ ಮಾಡಿದರೆ, ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಅನೇಕ ಕಲರ್ ಆಯ್ಕೆಯನ್ನು ನಾವು ನೋಡಬಹುದಾಗಿದೆ.
Oppo Reno 15 Design and Features
ಒಪ್ಪೋ ರೆನೊ 15 ಸರಣಿಯ ಎಲ್ಲಾ ಮಾಡೆಲ್ ನಲ್ಲಿ AMOLED ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಜೊತೆಗೆ Premium aluminum frame ಮತ್ತು IP66, IP67, IP68 ರೇಟಿಂಗ್ ನೊಂದಿಗೆ ಬರುತ್ತದೆ. ಇದರಿಂದ ದೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಇನ್ನು Reno 15 Pro ಮಾಡೆಲ್ ನಲ್ಲಿ 6.78 ಇಂಚು ಡಿಸ್ಪ್ಲೇ, 3600 Knots brightness, Pro mini ಮಾಡೆಲ್ ನಲ್ಲಿ 6.32 ಇಂಚು ಡಿಸ್ಪ್ಲೇ, ಹಾಗೆ ಸಾಮಾನ್ಯ ಮಾಡೆಲ್ ನಲ್ಲಿ 6.59 ಇಂಚಿನ ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ.
European Version Pro Model ನಲ್ಲಿ ಮಿಡಿಯಾಟೆಕ್ ಡೈಮೆನ್ಸಿಟಿ 8450 ಚಿಪ್ ಸೆಟ್ ಮತ್ತು 6200 mAh ಬ್ಯಾಟರಿ ಕೆಪ್ಯಾಸಿಟಿ ಪಡೆದುಕೊಂಡಿದೆ. ಇನ್ನು ಸಾಮಾನ್ಯ ಮಾಡೆಲ್ ನಲ್ಲಿ Snapdragon 7 ಜೆನ್ 4 SoC ಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು 80W ಚಾರ್ಜಿಂಗ್ ಬೆಂಬಲದೊಂದಿಗೆ 6,500 mAh ಬ್ಯಾಟರಿಯನ್ನು ಪಡೆದುಕೊಂಡಿದೆ.
Oppo Reno 15 Camera Quality
Oppo Reno Series Camera Features ಗಳಿಗೆ ಹೆಸರುವಾಸಿ ಆಗಿದೆ. ಹಾಗೆ ಈ ಬಾರಿ ಕೂಡ ಹೊಸ AI ಪ್ರೋಟ್ರೈಟ್ ಕ್ಯಾಮರಾ ವನ್ನು ಅಳವಡಿಸಲಾಗಿದೆ. 200MP ಮುಖ್ಯ ಕ್ಯಾಮರಾವನ್ನು ಪಡೆದುಕೊಂಡಿದ್ದು, 50MP Ultra-wideಮತ್ತು 50MP ಟೆಲಿಫೋಟೋ ಲೆನ್ಸ್ ಗಳೊಂದಿಗೆ ಬರುತ್ತದೆ. ಮುಂಭಾಗದಲ್ಲಿ 50MP ಕ್ಯಾಮರಾವನ್ನು ಅಳವಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

