Kia Carens Premium: ನೀವು ನಿಮ್ಮ ಕುಟುಂಬಕ್ಕಾಗಿ ವಿಶಾಲವಾದ, ನಿತ್ಯದ ಉಪಯೋಗಕ್ಕೆ ಸೂಕ್ತವಾದ ಮತ್ತು ಚಾಲನೆಗೆ ಆರಾಮದಾಯಕವಾಗಿರುವ ಕಾರನ್ನು ಹುಡುಕುತ್ತಿದ್ದರೆ, Kia Carens Premium 1.5 ಪೆಟ್ರೋಲ್ 7 ಸೀಟರ್ ನಿಮ್ಮನ್ನು ನಿರಾಶೆಗೊಳಿಸೋದಿಲ್ಲ. ಇದು ಕೇವಲ ಒಂದು ಸಾಮಾನ್ಯ MPV ಅಲ್ಲ ಬದಲಿಗೆ ಇನೊವಾಗೇ ಠಕ್ಕರ್ ನೀಡಬಲ್ಲ ಅದಕ್ಕಿಂತ ಅರ್ಧಬೆಲೆಯ ಕಾರು ಎಂದರೆ ತಪ್ಪಾಗಲಾರದು. Kia Carens ನ ವಿನ್ಯಾಸಕ್ಕೆ ಒಂದು ವಿಶಿಷ್ಟ ಆಕರ್ಷಣೆಯಿದೆ. ಇದರ ಮೊದಲು ಫ್ರಂಟ್ ಗ್ರಿಲ್ ಮತ್ತು LED DRL ಗಳು ಒಂದು ಪ್ರಿಮಿಯಂ ಲುಕ್ ನೀಡುತ್ತವೆ. ಹಾಗೆಯೆ ರೋಡ್ ಪ್ರಸೇನ್ಸ್ ಕೂಡ ಬಹಳ ಉತ್ತಮವಾಗಿದೆ. ಒಮ್ಮೆ ನೋಡಿದರೆ ತಿರುಗಿ ನೋಡಬೇಕೆಂಬ ಲುಕ್ ಹೊಂದಿದೆ ಈ ಕಾರು
ಬೆಸ್ಟ್ ಇಂಟೀರಿಯರ್
ಈ ಕಾರು 7 ಸೀಟರ್ ಆಗಿದ್ದು, ನೀವು ಕುಟುಂಬದೊಂದಿಗೆ, ಗೆಳೆಯರೊಂದಿಗೆ ಅಥವಾ ಕಾರ್ಪೊರೇಟ್ ಟ್ರಿಪ್ ಗೆ ಕೂಡ ಇದರಲ್ಲಿ ವಿಶಾಲವಾದ ಜಾಗ ದೊರೆಯುತ್ತದೆ. ಮೂರನೇ ಸಾಲಿನ ಆಸನಗಳೂ ಉಪಯೋಗಿಸಲು ಸುಲಭವಾಗಿವೆ.ಇನ್ನು ಇಂಟೀರಿಯರ್ ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಎಲ್ಲಾ ಸಾಲುಗಳಿಗೆ AC ವೆಂಟ್ ಗಳು, ಕಪ್‌ಹೋಲ್ಡರ್‌ಗಳು, ಮತ್ತು ಸಾಕಷ್ಟು ಸ್ಟೋರೇಜ್ ಜಾಗಗಳಿವೆ. ಬಿಳಿ ಮತ್ತು ಕಪ್ಪು ಟೂನ್ ಇರುವ ಇಂಟೀರಿಯರ್ ಫ್ರೆಶ್ ಮತ್ತು ಆಕರ್ಷಕವಾಗಿದೆ.
ಎಂಜಿನ್ ತುಂಬಾ ಸಾಫ್ಟ್
ಈ ಕಾರಿನ ಹೃದಯವೇ ಇದರ 1.5 ಲೀಟರ್ ಪೆಟ್ರೋಲ್ ಎಂಜಿನ್, ಇದು 113 bhp ಶಕ್ತಿ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಟಿ ಸಂಚಾರಕ್ಕೂ ಅಥವಾ ಹೈವೇ ಕ್ರೂಸಿಂಗ್‌ಗೂ ಇದು ಸರಿಯಾದ ಪರ್ಫಾರ್ಮೆನ್ಸ್ ನೀಡುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುಯಲ್ ಗಿಯರ್‌ಬಾಕ್ಸ್ ಮೃದುವಾಗಿದ್ದು, ಚಾಲನೆಯನ್ನು ಸುಲಭಗೊಳಿಸುತ್ತದೆ. ಇನ್ನು ಮೈಲೇಜ್ ಬಗ್ಗೆ ಹೇಳಬೇಕಾದರೆ, ಸುಮಾರು 15.7 km/l ಅನ್ನು ನಿರೀಕ್ಷಿಸಬಹುದು, ಇದು 7 ಸೀಟರ್ ಕಾರಿಗಾಗಿ ಒಳ್ಳೆಯದು. ಅಗತ್ಯವಿರುವ ಫೀಚರ್‌ಗಳೆಲ್ಲಾ ಕಾರಿನಲ್ಲಿವೆ,
ಇದು ಎಂಟ್ರಿ ಲೆವೆಲ್ ಪ್ರಿಮಿಯಂ ವೇರಿಯಂಟ್ ಆದರೂ, Kia ನಿಮಗೆ ಬೇಕಾದ ಹೆಚ್ಚಿನ ಫೀಚರ್‌ಗಳನ್ನು ನೀಡುತ್ತದೆ:
- 8 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ (ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿದೆ)
- ಸ್ಟೀರಿಂಗ್ ಮೇಲೆ ಕಂಟ್ರೋಲ್‌ಗಳು
- ಎಲ್ಲಾ ನಾಲ್ಕು ಪವರ್ ವಿಂಡೋಸ್
- ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು
- ಟಿಲ್ಟ್ ಸ್ಟೀರಿಂಗ್
- ಡ್ಯುಯಲ್ ಎರ್‌ಬ್ಯಾಗ್‌ಗಳು ಮತ್ತು ABS ಜೊತೆ EBD – ಸುರಕ್ಷತೆಗೆ ಪ್ರಾಮುಖ್ಯತೆ
ಯಾಕೆ ಖರೀದಿಸಬೇಕು
7 ಸೀಟರ್ ಕಾರುಗಳು ಬಹುಮಟ್ಟಿಗೆ ಬೋರ್ ಆಗಿರುವ ಅಥವಾ ತುಂಬಾ ದುಬಾರಿ ಆಗಿರುವ ಎರಡು ಎಡ್ಜ್‌ಗಳ ಮಧ್ಯೆ ಬೀಳುತ್ತವೆ. ಆದರೆ Kia Carens Premium 1.5 ಪೆಟ್ರೋಲ್ ಈ ಇಬ್ಬರ ನಡುವೆ ಒಂದು ಪರ್ಪೆಕ್ಟ್ ಕಾರ್ ಆಗಿದೆ . ಅದರ ಜೊತೆಗೆ Kia ಕಂಪನಿಯ ವಿಶ್ವಾಸಾರ್ಹತೆ ಮತ್ತು ಕಮ್ಮಿ ನಿರ್ವಹಣಾ ವೆಚ್ಚ, ಇದನ್ನು ದೀರ್ಘಕಾಲದ ಬಳಕೆಗೆ ಸೂಕ್ತವನ್ನಾಗಿ ಮಾಡುತ್ತವೆ. ಇನ್ನು ನಾವು ಈ ವರದಿಯಲ್ಲಿ ಹೇಳಿದ ಕಾರಿನ ಬೆಲೆ ಸುಮಾರು 13 ಲಕ್ಷದವರೆಗೆ ಇದೆ.