Cibil Score New Rules 2026: ಹಣಕಾಸು ಯೋಜನೆಗೆ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ. ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಬಹಳ ಮುಖ್ಯವಾಗಿದೆ. ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಎಲ್ಲದಕ್ಕೂ ಕೂಡ ಸಿಬಿಲ್ ಸ್ಕೋರ್ ಅತಿ ಅಗತ್ಯವಾಗಿದೆ. ಕಡಿಮೆ ಸ್ಕೋರ್ ಇದ್ದರೆ ಸಾಲದ ಅರ್ಜಿಗಳು ತಿರಸ್ಕಾರವಾಗಬಹುದು ಅಥವಾ ಹೆಚ್ಚಿನ ಬಡ್ಡಿದರವನ್ನು ಎದುರಿಸಬೇಕಾಗಬಹುದು. ಹಾಗಾಗಿ ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ಇದೀಗ RBI ಈಗ ಕ್ರೆಡಿಟ್ ಸ್ಕೋರ್ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ. RBI ಜಾರಿಗೆ ತಂದಿರುವ ಈ ಹೊಸ ಕಡಿಮೆ ಸಿಬಿಲ್ ಸ್ಕೊರ್ ಇದ್ದವರ ಸಮಸ್ಯೆ ಪರಿಹಾರ ಮಾಡಲಿದೆ. ಹಾಗಾದರೆ ಸಿಬಿಲ್ ಸ್ಕೊರ್ ಗಳಿಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಸ್ಕೋರ್ ಎಂದರೆ?
CIBIL ಸ್ಕೋರ್ ಅನ್ನುವುದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ 3 ಅಂಕಿಯ ಸಂಖ್ಯೆಯಾಗಿದೆ. ಇದು ಸಾಲದಾತರಿಗೆ ನೀವು ಸಾಲ ಮರುಪಾವತಿ ಮಾಡುವಲ್ಲಿ ಎಷ್ಟು ಸಕ್ರಿಯರಾಗಿದ್ದೀರಿ ಮತ್ತು ನಿಮ್ಮ ಮರುಪಾವತಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಆಧರಿಸಿ CIBIL ಸ್ಕೋರ್ ಅನ್ನು ಲೆಕ್ಕಹಾಕಲಾಗುತ್ತದೆ. ಸಿಬಿಲ್ ಸ್ಕೋರ್ 300 ರಿಂದ 900 ಪಾಯಿಂಟ್ಗಳ ನಡುವೆ ಇರುತ್ತದೆ,
750+ – ಉತ್ತಮ (ಕಡಿಮೆ ಬಡ್ಡಿ ಸಾಲ)
700 ರಿಂದ 749 – ಸಾಧಾರಣ
699 ಕ್ಕಿಂತ ಕಡಿಮೆ – ಸಾಲ ಸಿಗುವುದು ಕಷ್ಟ
ಸಿಬಿಲ್ ಸ್ಕೋರ್ ನಿಯಮದಲ್ಲಿ ಮಹತ್ವದ ಬದಲಾವಣೆ
ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಅನ್ನು ಗ್ರಾಹಕರಿಗೆ ಸರಿಯಾಗಿ ನೀಡುತ್ತಿಲ್ಲ ಈ ಹಿನ್ನೆಲೆಯಲ್ಲಿ ಎಷ್ಟೋ ಜನರಿಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಿಗುತ್ತಿಲ್ಲ. ಇದನ್ನು ಗಮನಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಿಬಿಲ್ ಸ್ಕೋರ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಮೊದಲು ತಿಂಗಳಿಗೆ ಎರಡು ಬಾರಿ ಮಾತ್ರ ಸಿಬಿಲ್ ಸ್ಕೋರ್ ಅನ್ನು ಪರಿಷ್ಕರಣೆ ಮಾಡಬೇಕಿತ್ತು ಆದರೆ ಇನ್ನುಮುಂದೆ ವಾರಕ್ಕೆ ಒಮ್ಮೆ ಸಿಬಿಲ್ ಸ್ಕೋರ್ ಅನ್ನು ಅಪ್ಡೇಟ್ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಈ ನಿಯಮ ಮುಂದಿನ ಆರ್ಥಿಕ ವರ್ಷ ಅಂದರೆ ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಹೊಸ ನಿಯಮ ಜಾರಿಗೆ ಬಂದ ನಂತರ, ಕ್ರೆಡಿಟ್ ಇನ್ಪಾರ್ಮೇಷನ್ ಸಂಸ್ಥೆಗಳು (CIC) ಗ್ರಾಹಕರ ಕ್ರೆಡಿಟ್ ಸ್ಕೋರ್ ಅನ್ನು 7 ದಿನಕೊಮ್ಮೆ ಅಪ್ಡೇಟ್ ಮಾಡಬೇಕು.
ಗ್ರಾಹಕರಿಗೆ ಏನು ಪ್ರಯೋಜನ?
- ಈ ಹಿಂದೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರ ಮುಗಿದ ಮಾಹಿತಿಯನ್ನು ಸಿಬಿಲ್ ಸ್ಕೊರ್ ನಲ್ಲಿ ಅಪ್ಡೇಟ್ ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿತ್ತು. ಇದರಿಂದ ಹೊಸ ಸಾಲ ಪಡೆದುಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಇನ್ನುಮುಂದೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರ ಮುಗಿದ ತಕ್ಷಣ ಬ್ಯಾಂಕುಗಳು ಇದರ ಮಾಹಿತಿಯನ್ನು ಕ್ರೆಡಿಟ್ ಬ್ಯುರೋ ಗೆ ವರದಿ ಮಾಡಬೇಕು.
- ಬ್ಯಾಂಕುಗಳು ಅಥವಾ NBFC ಗಳು ತಪ್ಪಾದ ಮಾಹಿತಿಯನ್ನು ನೀಡಿದರೆ, ಅದನ್ನು ಸರಿಪಡಿಸಲು ತಡಮಾಡಿದರೆ ಅಥವಾ ಅನುಮತಿ ಇಲ್ಲದೇ ಸಿಬಿಲ್ ಸ್ಕೋರ್ ಚೆಕ್ ಮಾಡಿದರೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
- ಗ್ರಾಹಕರ ಅನುಮತಿ ಇಲ್ಲದೆ ಇನ್ನುಮುಂದೆ ಬ್ಯಾಂಕುಗಳು ಅಥವಾ NBFC ಗಳು ಕ್ರೆಡಿಟ್ ವರದಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಕ್ರೆಡಿಟ್ ಸ್ಕೋರ್ ನಲ್ಲಿ ಅನಗತ್ಯ ಕಡಿಮೆಯಾಗುವುದನ್ನು ತಡೆಯಬಹುದು ಹಾಗೆ ಗ್ರಾಹಕರ ಕ್ರೆಡಿಟ್ ಪ್ರೊಫೈಲ್ ಸೇಫ್ ಆಗಿರುತ್ತದೆ.
- ಬ್ಯಾಂಕುಗಳು ಅಥವಾ NBFC ಗಳು ಹೊಸ ಕ್ರೆಡಿಟ್ ವರದಿಗಳನ್ನು ಪಡೆಯುವುದರಿಂದ, ಸಾಲದ ಬಡ್ಡಿ ದರಗಳು, ಸಾಲದ ಮೊತ್ತ ಮತ್ತು ಸಾಲದ ಅವಧಿಯನ್ನು ಸರಿಯಾಗಿ ನಿರ್ಧರಿಸಲು ಸಹಾಯಕವಾಗುತ್ತದೆ. ಒಂದು ವೇಳೆ ಯಾವುದೇ ಹಣಕಾಸು ಸಂಸ್ಥೆಗಳು, ಸಮಯಕ್ಕೆ ಸರಿಯಾಗಿ ಡೇಟಾವನ್ನು ಕಳುಹಿಸದೇ ಇದ್ದಲ್ಲಿ, CIC ಗಳು ಅದನ್ನು RBI ಯ DAKSH ಪೋರ್ಟಲ್ ನಲ್ಲಿ ವರದಿ ಮಾಡಲು ಅನುಮತಿ ನೀಡಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

