LIC Housing Loan Details: ಸ್ವಂತ ಮನೆ ನಿರ್ಮಾಣ ಪ್ರತಿಯೊಬ್ಬರ ಕನಸಾಗಿರುತ್ತದೆ ಮತ್ತು ಅದಕ್ಕಾಗಿ ಅನೇಕ ಬ್ಯಾಂಕ್ ಗಳು ಹಾಗೆ ಇತರ ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತದೆ. ಇದೀಗ ಮನೆ ನಿರ್ಮಾಣ ಮಾಡಲು ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ LIC ಹೌಸಿಂಗ್ ಪೈನಾನ್ಸ್ ಲಿಮಿಟೆಡ್ ಸಿಹಿ ಸುದ್ದಿ ನೀಡಿದೆ. ಸದ್ಯ LIC ಹೌಸಿಂಗ್ ಪೈನಾನ್ಸ್ ಲಿಮಿಟೆಡ್ ಗೃಹ ಸಾಲದ ಬಡ್ಡಿದರವನ್ನು ಕಡಿಮೆ ಮಾಡಿದೆ. ಇದು ಗ್ರಹ ಸಾಲ ಮಾಡುವವರ ಸಂತಸಕ್ಕೆ ಕಾರಣವಾಗಿದೆ. ಹಾಗಾದರೆ ನಾವೀಗ LIC ಹೌಸಿಂಗ್ ಪೈನಾನ್ಸ್ ಲಿಮಿಟೆಡ್ ಗೃಹ ಸಾಲದ ಬಡ್ಡಿದರ ಎಷ್ಟು ಕಡಿಮೆ ಮಾಡಿದೆ ಅನ್ನುವ ಬಗ್ಗೆ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
LIC ಗೃಹಸಾಲ
ಭಾರತೀಯ ಜೀವ ವಿಮಾ ನಿಗಮದ (LIC) ಅಂಗಸಂಸ್ಥೆಯಾದ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL), ವಸತಿ ಆಸ್ತಿಗಳನ್ನು ಖರೀದಿಸಲು, ನಿರ್ಮಿಸಲು, ನವೀಕರಿಸಲು ಅಥವಾ ವಿಸ್ತರಿಸಲು ವಿವಿಧ ಗೃಹ ಸಾಲ ನೀಡುತ್ತದೆ. LIC ಬೆಂಬಲದೊಂದಿಗೆ, ಇದು ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿದೆ. ಇನ್ನು ಸಾಲಗಳು ಸ್ಪರ್ಧಾತ್ಮಕ ಬಡ್ಡಿದರಗಳನ್ನು ಒಳಗೊಂಡಿರುತ್ತವೆ ಮತ್ತು ಇದರ ವಾರ್ಷಿಕ ಬಡ್ಡಿದರ 7.15% (CIBIL ಸ್ಕೋರ್ ಆಧರಿಸಿ) ನಿಂದ ಪ್ರಾರಂಭವಾಗುತ್ತದೆ. 30 ವರ್ಷಗಳ ವರೆಗೆ ಸಾಲದ ಅವಧಿ ನೀಡುತ್ತದೆ.
ಬಡ್ಡಿದರ ಕಡಿತಗೊಳಿಸಿದ LIC HFL
ಇದೀಗ LIC ಹೌಸಿಂಗ್ ಪೈನಾನ್ಸ್ ಲಿಮಿಟೆಡ್ ತನ್ನ ಗೃಹ ಸಾಲದ ಬಡ್ಡಿದರವನ್ನು 7.15% ಗೆ ಇಳಿಕೆ ಮಾಡಿದೆ. 22 ಡಿಸೆಂಬರ್ 2025 ರಿಂದ ಈ ದರ ಜಾರಿಗೆ ಬಂದಿದೆ. LIC HFL ನ ಗರಿಷ್ಠ ಸಾಲದ ಮೊತ್ತ 15 ಕೋಟಿ ಆಗಿದೆ. ಸಂಬಳ ಪಡೆಯುವ ವ್ಯಕ್ತಿಗೆ 30 ವರ್ಷಗಳ ಸಾಲದ ಅವಧಿ ಮತ್ತು ಸ್ವಯಂ ಉದ್ಯೋಗಿಗಳಿಗೆ 25 ವರ್ಷಗಳ ಸಾಲದ ಅವಧಿಯನ್ನು ನೀಡುತ್ತದೆ. LIC HFL ನ ಈ ಗೃಹ ಸಾಲದ ಬಡ್ಡಿದರ ಪಡೆದುಕೊಳ್ಳಲು ಕೆಲವು ಷರತ್ತುಗಳು ಅನ್ವಯವಾಗುತ್ತದೆ.
LIC ಗೃಹಸಾಲಕ್ಕೆ ಷರತ್ತುಗಳು
- ಉತ್ತಮವಾದ ಕ್ರೆಡಿಟ್ ಸ್ಕೋರ್ ಪಡೆದುಕೊಂಡವರು ಈ ಬಡ್ಡಿದರಕ್ಕೆ ಅರ್ಹರಾಗುತ್ತಾರೆ
- ಹೊಸ ಗೃಹ ಸಾಲಕ್ಕೆ ಮಾತ್ರ ಈ ಬಡ್ಡಿದರ ಅನ್ವಯವಾಗುತ್ತದೆ.
- ಕ್ರೆಡಿಟ್ ಸ್ಕೋರ್ 825 ಅಥವಾ ಅದಕ್ಕಿಂತ ಹೆಚ್ಚು ಇರುವವರು 5 ಕೋಟಿ ವರೆಗಿನ ಸಾಲಕ್ಕೆ ಈ ಬಡ್ಡಿದರವನ್ನು ಪಡೆದುಕೊಳ್ಳಬಹುದು.
- ಈಗಾಗಲೇ ಸಾಲ ಪಡೆದುಕೊಂಡವರು Balance Transfer ಮಾಡಿಕೊಂಡರೆ ಈ ಬಡ್ಡಿದರವನ್ನು ಪಡೆದುಕೊಳ್ಳಬಹುದು
ಬಡ್ಡಿದರ ಕಡಿತಗೊಳಿಸಲು ಕಾರಣ
ರಿಸರ್ವ್ ಬ್ಯಾಂಕ್ ಆಫ್ ಇಡಿಯಾದ (RBI) ಹಣಕಾಸು ನೀತಿ ಸಮಿತಿ ಇತ್ತೀಚಿಗೆ ತನ್ನ ರೆಪೋ ದರವನ್ನು ಕಡಿಮೆ ಮಾಡಿದ ಕಾರಣ ಕೆಲವು ಬ್ಯಾಂಕುಗಳು ಮತ್ತು LIC ಯ ಹೌಸಿಂಗ್ ಪೈನಾನ್ಸ್ ಲಿಮಿಟೆಡ್ ಗಳು ತನ್ನ ಗೃಹ ಸಾಲದ ಬಡ್ಡಿದರವನ್ನು ಕಡಿಮೆ ಮಾಡಿವೆ. ಈ ಕಡಿತ ಹೊಸ ಮನೆ ನಿರ್ಮಾಣದ ಕನಸು ಕಂಡವರಿಗೆ ಸಂತಸ ತಂದಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು, ನೀವು LIC ಶಾಖೆಗೆ ಭೇಟಿ ನೀಡಬಹುದು ಅಥವಾ https://www.lichousing.com/ ವೆಬ್ಸೈಟ್ ಗೆ ಭೇಟಿ ನೀಡಬಹುದು. ಹಾಗೆ ನಿಖರವಾದ ಮಾಸಿಕ EMI ಲೆಕ್ಕಾಚಾರಕ್ಕಾಗಿ LIC HFL ವೆಬ್ ಸೈಟ್ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

