SBI SCO Recruitment 2025 Application: ಪದವಿ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೀಗ ಒಂದೊಳ್ಳೆ ಸಿಹಿ ಸುದ್ದಿ. ನೀವು ಪದವಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕುತಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಇದೀಗ State Bank of India Wealth Management ವಿಭಾಗಕ್ಕೆ ಅರ್ಜಿಯನ್ನು ಆಹ್ವಾವಾನಿಸಿದೆ. ಬ್ಯಾಂಕಿಂಗ್ ಮತ್ತು ಪೈನಾನ್ಸ್ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರುವವರಿಗೆ ಉತ್ತಮ ಅವಕಾಶ. ಹಾಗಾದರೆ ನಾವೀಗ ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು..? ಸಂಬಳ ಎಷ್ಟು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
SBI SCO Recruitment
ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗಕ್ಕೆ ನೇಮಕಾತಿಯನ್ನು ಘೋಷಣೆ ಮಾಡಿದೆ. ಒಟ್ಟು 996 Specialist Cadre Officers ಹುದ್ದೆಗೆ ಅರ್ಜಿ ಯನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳು ವೆಲ್ತ್ ಮ್ಯಾನೇಜ್‌ಮೆಂಟ್, ಇನ್ವೆಸ್ಟ್‌ಮೆಂಟ್ ಸಲಹೆ ಮತ್ತು ಕಸ್ಟಮರ್ ಸೇವೆಗಳಿಗೆ ಸಂಬಂಧಿಸಿದೆ, ಹಾಗೆ ಈ ಹುದ್ದೆಗಳನ್ನು ಕಾಂಟ್ರಾಕ್ಟ್ ಆಧಾರದ ಮೇಲೆ ಮಾಡಲಾಗುತ್ತದೆ ಹಾಗೆ ಆಕರ್ಷಣೀಯ ವೇತನ ಮತ್ತು ಸೌಲಭ್ಯವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಕವನು ಜನವರಿ 5, 2026 ರ ವರೆಗೆ ವಿಸ್ತರಿಸಲಾಗಿದೆ.
ಹುದ್ದೆಗಳ ವಿವರ
- ವೈಸ್ ಪ್ರೆಸಿಡೆಂಟ್ ವೆಲ್ತ್ (ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್) 506 ಹುದ್ದೆಗಳು
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ವೆಲ್ತ್ (ರಿಲೇಷನ್ ಶಿಪ್ ಮ್ಯಾನೇಜರ್) 206 ಹುದ್ದೆಗಳು
- ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿಕ್ಯೂಟಿವ್ 284 ಹುದ್ದೆಗಳು
ಅರ್ಹತೆ
- ಯಾವುದಾದರು ವಿಷಯದಲ್ಲಿ ಪದವಿ / MBA / PG ಡಿಪ್ಲೊಮೊ ಪಡೆದುಕೊಂಡಿರಬೇಕು
- ಹುದ್ದೆಗೆ ಅನುಸಾರವಾಗಿ ಅನುಭವ ಅಗತ್ಯವಾಗಿ ಬೇಕು
- ವೈಸ್ ಪ್ರೆಸಿಡೆಂಟ್ ಹುದ್ದೆಗೆ 6 ರಿಂದ 8 ವರ್ಷಗ ಅನುಭವ ಅಗತ್ಯ
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗೆ ಕನಿಷ್ಠ 3 ವರ್ಷಗಳ ಅನುಭವ ಬೇಕು
- ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿಕ್ಯೂಟಿವ್ ಗೆ ಫ್ರೆಷೆರ್ ಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ.
- ಡ್ರೈವಿಂಗ್ ಲೈನ್ಸನ್ಸ್ ಅಗತ್ಯವಾಗಿ ಬೇಕು
- 20 ರಿಂದ 42 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ (ಮೇ 1, 2025 ರ ಆಧಾರದ ಮೇಲೆ)
ಸಂಬಳ ಮತ್ತು ಸೌಲಭ್ಯಗಳು
- ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ವೇತನ, HRA, ಬೋನಸ್ ಗಳು ಮತ್ತು PF, ವಿಮೆ ಅನ್ನು ನೀಡಲಾಗುತ್ತದೆ.
- ವೈಸ್ ಪ್ರೆಸಿಡೆಂಟ್ ಹುದ್ದೆಗೆ ವಾರ್ಷಿಕವಾಗಿ 30 ರಿಂದ 45 ಲಕ್ಷದವರೆಗೆ ಸಂಬಳವನ್ನು ನೀಡಲಾಗುತ್ತದೆ.
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗೆ ವಾರ್ಷಿಕವಾಗಿ 20 ರಿಂದ 30 ಲಕ್ಷದವರೆಗೆ ಸಂಬಳವನ್ನು ನೀಡಲಾಗುತ್ತದೆ.
- ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿಕ್ಯೂಟಿವ್ ಗೆ 4 ರಿಂದ 6 ಲಕ್ಷ ನೀಡಲಾಗುತ್ತದೆ.
- ಇದರ ಜೊತೆಗೆ ಪ್ರದರ್ಶನ ಆಧಾರಿತ ಇನ್ಸೆಂಟಿವ್ ಹಾಗೆ ಇತರ ಸೌಲಭ್ಯಗಳು.
- 5 ವರ್ಷ ಕಾಂಟ್ರಾಕ್ಟ್ ಇರುತ್ತದೆ, ಉತ್ತಮ ಪ್ರದರ್ಶನದ ಮೇಲೆ ವಿಸ್ತರಣೆ ಮಾಡಬಹುದು.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- SBI ನ ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
- ಮೊದಲು https://sbi.bank.in/web/careers ಗೆ ಭೇಟಿ ನೀಡಿ
- ನಂತರ https://sbi.bank.in/web/careers/current-openings ನಲ್ಲಿ Advertisement Number – CRPD/SCO/2025-26/17 ಅಡಿಯಲ್ಲಿ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೊಂದಣಿ ಮಾಡಿಕೊಂಡು ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆ ಮತ್ತು Resume ಅಪ್ಲೋಡ್ ಮಾಡಬೇಕು
- ಇದಾದ ನಂತರ ಅರ್ಜಿ ಶುಲ್ಕ 750 ರೂಪಾಯಿ (ಸಾಮಾನ್ಯ / OBC / EWS ಗೆ, SC / ST / PwBD ಗೆ ವಿನಾಯಿತಿ ಲಭ್ಯ) ಪಾವತಿ ಮಾಡಬೇಕು
- ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಳ್ಳಬೇಕು.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ ಇಲ್ಲ ಯೋಗ್ಯತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ 100 ಅಂಕಕ್ಕೆ ಇಂಟರ್ವ್ಯೂ ಮಾಡಲಾಗುತ್ತದೆ.* ಇಂಟರ್ವ್ಯೂ ನಲ್ಲಿ Domain knowledge, communication skills ಹಾಗೆ ಅನುಭವವನ್ನು ಪರೀಕ್ಷೆ ಮಾಡಲಾಗುತ್ತದೆ.
- ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಹೆಚ್ಚಿನ ಮಾಹಿತಿಗಾಗಿ https://onlinesbi.sbi.bank.in/ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

