SBI 30 Lakh Home Loan EMI Details: ಮನೆ ನಿರ್ಮಾಣದ ಕನಸು ನನಸಾಗಿಸಲು ಗೃಹಸಾಲ ಉತ್ತಮ ಆಯ್ಕೆ ಆಗಿದೆ. ವಿವಿಧ ಬ್ಯಾಂಕ್ ಗಳು ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿವೆ. ಎಲ್ಲ ಬ್ಯಾಂಕ್ ನಲ್ಲಿ ಕೂಡ ಗೃಹ ಸಾಲದ ಬಡ್ಡಿದರ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಬ್ಯಾಂಕ್ ನಲ್ಲಿ ಬಡ್ಡಿದರ ಕಡಿಮೆ ಇರುತ್ತದೆ. ಈ ಕಾರಣದಿಂದ ನೀವು ಎಲ್ಲ ಬ್ಯಾಂಕ್ ನಲ್ಲಿ ಮಾಹಿತಿ ಪಡೆದು, ನಂತರ ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದೀಗ ನಾವು ನಿಮಗೆ ಗೃಹಸಾಲ ಪಡೆದುಕೊಳ್ಳಲು SBI ನಲ್ಲಿ 30 ಲಕ್ಷ ಗೃಹ ಸಾಲ ಪಡೆದುಕೊಂಡರೆ, ತಿಂಗಳಿಗೆ ಎಷ್ಟು EMI ಪಾವತಿ ಮಾಡಬೇಕು ಮತ್ತು ತಿಂಗಳ ಸಂಬಳ ಎಷ್ಟಿದ್ದರೆ 30 ಲಕ್ಷ ರೂಪಾಯಿ ತನಕ ಗೃಹಸಾಲ ಪಡೆದುಕೊಳ್ಳಬಹುದು ಅನ್ನುವ ಬಗ್ಗೆ ವಿವರವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
SBI Home Loan
2025 ರಲ್ಲಿ SBI ನ ಗೃಹ ಸಾಲದ ಬಡ್ಡಿದರ 7.25% ನಿಂದ 8.45% ಆಗಿದೆ. ಈ ಬಡ್ಡಿದರ ಕ್ರೆಡಿಟ್ ಸ್ಕೋರ್, ಸಾಲದ ಮೊತ್ತದ ಮೇಲೆ ಬದಲಾವಣೆ ಆಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನೀವು ತೆಗೆದುಕೊಂಡ ಸಾಲದ ಬಡ್ಡಿದರ ಕೂಡ ಕಡಿಮೆ ಆಗುತ್ತದೆ. ನಿಮ್ಮ ಮಾಸಿಕ ಸಂಬಳದ ಆಧಾರದ ಮೇಲೆ ಬ್ಯಾಂಕ್ ಗೃಹ ಸಾಲವನ್ನು ನೀಡುತ್ತದೆ. ನಿಮ್ಮ ಸಂಬಳದ 50% ನಿಂದ 60% ವರೆಗೆ EMI ಅನ್ನು ಪಾವತಿ ಮಾಡಬೇಕಾಗುತ್ತದೆ.
30 ಲಕ್ಷ ಗೃಹ ಸಾಲಕ್ಕೆ ಮಾಸಿಕ EMI ಎಷ್ಟು?
SBI ನಲ್ಲಿ 30 ಲಕ್ಷ ಗೃಹ ಸಾಲವನ್ನು 8.5% ಬಡ್ಡಿದರದಲ್ಲಿ 20 ವರ್ಷ ಅವಧಿಗೆ ತೆಗೆದುಕೊಂಡರೆ ಮಾಸಿಕವಾಗಿ 26,000 EMI ಅನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಕನಿಷ್ಠ ಸಂಬಳ 45 ರಿಂದ 50 ಸಾವಿರವರೆಗೆ ಇರಬೇಕು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಬಡ್ಡಿ ಕಡಿಮೆ ಆಗುತ್ತದೆ. ಹಾಗೆ ಮಾಸಿಕ EMI ಕೂಡ ಕಡಿಮೆ ಆಗುತ್ತದೆ.
ಅವಧಿ ಮತ್ತು ಸಂಬಳಕ್ಕೆ ಅನುಗುಣವಾಗಿ EMI ಲೆಕ್ಕಾಚಾರ
ಹೆಚ್ಚುವರಿ ಅವಧಿಯನ್ನು ಆಯ್ಕೆ ಮಾಡಿದರೆ ಮಾಸಿಕ EMI ಕಡಿಮೆ ಆಗುತ್ತದೆ. ಆದರೆ ಒಟ್ಟು ಬಡ್ಡಿ ಹೆಚ್ಚಾಗುತ್ತದೆ. ಇದೀಗ ನಾವು ವಿವಿಧ ಅವಧಿ ಮತ್ತು ಸಂಬಳಕ್ಕೆ ಅನುಗುಣವಾಗಿ EMI ಲೆಕ್ಕಾಚಾರ ನೋಡೋಣ.
- ಕನಿಷ್ಠ 40,000 ಸಂಬಳ ಪಡೆದುಕೊಳ್ಳುವವರು, 30 ವರ್ಷ ಅವಧಿಗೆ ಸಾಲ ತೆಗೆದುಕೊಂಡರೆ ತಿಂಗಳಿಗೆ ಸುಮಾರು 23,000 EMI ಪಾವತಿ ಮಾಡಬೇಕಾಗುತ್ತದೆ.
- 50,000 ಸಂಬಳ ಪಡೆದುಕೊಳ್ಳುವವರು, 20 ವರ್ಷ ಅವಧಿಗೆ ಸಾಲ ತೆಗೆದುಕೊಂಡರೆ ತಿಂಗಳಿಗೆ ಸುಮಾರು 26,000 EMI ಪಾವತಿ ಮಾಡಬೇಕಾಗುತ್ತದೆ.
- ಕನಿಷ್ಠ 55,000 ರಿಂದ 60,000 ಸಂಬಳ ಪಡೆದುಕೊಳ್ಳುವವರು, 15 ವರ್ಷ ಅವಧಿಗೆ ಸಾಲ ತೆಗೆದುಕೊಂಡರೆ ತಿಂಗಳಿಗೆ ಸುಮಾರು 29,000 EMI ಪಾವತಿ ಮಾಡಬೇಕಾಗುತ್ತದೆ.
SBI ಗೃಹಸಾಲದ ಅರ್ಹತೆ
- ಭಾರತದ ನಿವಾಸಿ ಆಗಿರಬೇಕು
- 18 ರಿಂದ 70 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.
- ಕನಿಷ್ಠ ನಿವ್ವಳ ಮಾಸಿಕ ಆದಾಯ 25,000 (ವಾರ್ಷಿಕವಾಗಿ 3 ಲಕ್ಷ)
- ಗರಿಷ್ಠ ಸಾಲದ ಅವಧಿ 30 ವರ್ಷಗಳು ಆಗಿರುತ್ತದೆ, ಹಾಗೆ ಮರುಪಾವತಿ ಅವಧಿ 70 ವರ್ಷಗಳು ಆಗಿರುತ್ತದೆ.
ಗೃಹ ಸಾಲಕ್ಕೆ ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಸಂಬಳ ಪಡೆಯುವವರು, ಫಾರ್ಮ್ 16 ಮತ್ತು 3 ತಿಂಗಳ ಸಂಬಳದ ಸ್ಲಿಪ್ ನೀಡಬೇಕು
- ಸ್ವಂತ ಉದ್ಯೋಗ ಮಾಡುವವರು, ITR 3 ವರ್ಷ, GST ರಿಟರ್ನ್ಸ್
- ಆಸ್ತಿ ದಾಖಲೆಗಳು (ಸೇಲ್ ಅಗ್ರಿಮೆಂಟ್, Encumbrance ಸರ್ಟಿಫಿಕೇಟ್)
ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೊದಲು ಆನ್ಲೈನ್ ನಲ್ಲಿ SBI YONO ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಂತರ ಸಾಲಗಳು ವಿಭಾಗಕ್ಕೆ ಹೋಗಿ ಗೃಹ ಸಾಲವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ವಯಕ್ತಿಕ ವಿವರಗಳು, ಆದಾಯದ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

