SIM Card CNAP Rules 2026: ಭಾರತದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಸೈಬರ್ ವಂಚನೆಯಿಂದ ಅನೇಕ ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿ ಅಥವಾ ಸರ್ಕಾರೀ ಇಲಾಖೆಯ ಅಧಿಕಾರಿಯಂತೆ ನಟಿಸಿ ಹಣವನ್ನು ದೋಚುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗುತ್ತಿದೆ. ಈ ಅಕ್ರಮವನ್ನು ತಡೆಯಲು ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ಭಾರತೀಯ ದೂರಸಂಪರ್ಕ ಇಲಾಖೆ (DoT) ಮತ್ತು TRAI ಭಾರತದಲ್ಲಿ ನೆಡೆಯುತ್ತಿರುವ ವಂಚನೆಯನ್ನು ತಡೆಯಲು ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ 2026 ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದೆ.
ಸೈಬರ್ ವಂಚನೆ ತಡೆಗೆ ಹೊಸ ವ್ಯವಸ್ಥೆ
ಇದೀಗ ವಾಟ್ಸಾಪ್ ನಂತಹ ಆಪ್ ನಲ್ಲಿ ಭಾರತೀಯ ನಂಬರ್ ಗಳನ್ನ ಬಳಸಿ ವಂಚನೆ ಮಾಡಿ ನಂತರ ಸಿಮ್ ಕಾರ್ಡ್ ಗಳನ್ನ ಟ್ರೇಸ್ ಆಗದಂತೆ ಬಿಸಾಕುತ್ತಾರೆ. ಇದೀಗ ಇಂತಹ ವಂಚನೆಯನ್ನು ತಡೆಯಲು ಭಾರತೀಯ ದೂರಸಂಪರ್ಕ ಇಲಾಖೆ (DoT) ಮತ್ತು TRAI ಹೊಸ CNAP ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾಗಾದರೆ ನಾವೀಗ CNAP ಎಂದರೆ ಏನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ..? ಇದರಿಂದ ಜನರಿಗೆ ಏನು ಪ್ರಯೋಜನ..? ಅನ್ನುವ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.
CNAP ಎಂದರೆ?
Calling Name Presentation (CNAP), ಇದು ಅಪರಿಚಿತ ಸಂಖ್ಯೆಯಲ್ಲಿ ಕರೆ ಬಂದಾಗ ಕರೆ ಮಾಡುವವರ ಹೆಸರನ್ನು ಸ್ಕ್ರೀನ್ ನಲ್ಲಿ ತೋರಿಸುತ್ತದೆ. TRAI ಜಾರಿಗೆ ತಂದ ಭಾರತದ ಹೊಸ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆಯನ್ನು 2026 ರ ಆರಂಭದಲ್ಲಿ ಜಾರಿಗೆ ತರಲಾಗುತ್ತದೆ. CNAP ಸಿಮ್ ಖರೀದಿ ಮಾಡುವಾಗ ನೀಡಿದ KYC ಮಾಹಿತಿಯ ಆಧಾರದ ಮೇಲೆ ಕರೆ ಬಂದಾಗ ಕರೆ ಮಾಡಿದವರ ಹೆಸರನ್ನು ಸ್ಕ್ರೀನ್ ಮೇಲೆ ತೋರಿಸುತ್ತದೆ. ಇದರಿಂದ ಅನಾಮದೇಯ ಕರೆಗಳು ಕಡಿಮೆ ಆಗಿ ವಂಚಕರು ಸುಲಭವಾಗಿ ಗುರುತಿಸಲ್ಪಡುತ್ತಾರೆ.
ಸಿಮ್ ಬೈಂಡಿಂಗ್
ಸಿಮ್ ಬೈಂಡಿಂಗ್ ಎಂದರೆ ನಿಮ್ಮ ಮೊಬೈಲ್ ಸಂಖ್ಯೆ ಯನ್ನು ನಿಮ್ಮ ಫೋನ್ ನಲ್ಲಿರುವ ನಿರ್ದಿಷ್ಟ ಸಿಮ್ ಕಾರ್ಡ್ ಗೆ ಸುರಕ್ಷಿತವಾಗಿ ಲಿಂಕ್ ಮಾಡುವ ಒಂದು ತಂತ್ರಜ್ಞಾನವಾಗಿದೆ. ಇದು ವಾಟ್ಸಾಪ್, ಟೆಲಿಗ್ರಾಮ್ ನಂತಹ ಆಪ್ ಗಳಲ್ಲಿ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೊಸ ನಿಯಮದ ಪ್ರಕಾರ, ನೀವು ನೋಂದಣಿ ಮಾಡಿದ ಸಿಮ್ ಕಾರ್ಡ್ ಅನ್ನು ಫೋನ್ ನಿಂದ ತೆಗೆದರೆ ಅಥವಾ ಬದಲಿಸಿದರೆ ಆ ಅಪ್ಲಿಕೇಶನ್ ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದು ಡಿಜಿಟಲ್ ವಂಚನೆಯನ್ನು ತಡೆಯಲು ಭಾರತ ಸರ್ಕಾರ ಜಾರಿಗೆ ತರುತ್ತಿದೆ. ಫೆಬ್ರವರಿ 2026 ರ ವೇಳೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ.
ಹೊಸ ಯೋಜನೆಯ ಪರಿಣಾಮ
- ಈ ಹೊಸ ನಿಯಮದಿಂದ ವಂಚನೆಯ ಕರೆ ಹಾಗೆ ಸಂದೇಶಗಳು ಕಡಿಮೆ ಆಗುತ್ತದೆ.
- ಡಿಜಿಟಲ್ ಸುರಕ್ಷತೆ ಹೆಚ್ಚಾಗುತ್ತದೆ
- ವಿದೇಶ ಪ್ರಯಾಣ ಮಾಡುವವರು ಅಥವಾ ವೆಬ್ ವರ್ಷನ್ ಬಳಸುವವರಿಗೆ ಸ್ವಲ್ಪ ಕಷ್ಟ ಆಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

