Best 5 Star Cars Under 15 Lakh: ಇತ್ತೀಚಿಗೆ ಶ್ರೀಮಂತರ ಹಾಗೆ ಬಡವರು ಕೂಡ ಕಾರುಗಳನ್ನು ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಕಾರ್ ಕೇವಲ ಐಷಾರಾಮಿ ಜೀವನ ನೆಡೆಸಲು ಮಾತ್ರ ಅಲ್ಲ. ತುರ್ತು ಪರಿಸ್ಥಿತಿಗೂ ಕೂಡ ಕಾರ್ ಅವಶ್ಯವಾಗುತ್ತದೆ. ಹಾಗೆ ಸ್ವಂತ ಕಾರ್ ಇದ್ದರೆ ಕುಟುಂಬದ ಜೊತೆ ಪ್ರಯಾಣ ಮಾಡಲು ಉತ್ತಮವಾಗಿದೆ. ಇದೀಗ ಕುಟುಂಬದ ಜೊತೆ ಪ್ರಯಾಣ ಮಾಡಲು 5 ಸ್ಟಾರ್ ರೇಟಿಂಗ್ ಕಾರ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇದೀಗ ನಾವು ನಿಮಗೆ 15 ಲಕ್ಷದೊಳಗೆ ಸಿಗುವ 5 ಸ್ಟಾರ್ ರೇಟಿಂಗ್ ಕಾರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡುತ್ತೇವೆ.
15 ಲಕ್ಷದೊಳಗೆ ಸಿಗುವ 5 ಸ್ಟಾರ್ ರೇಟಿಂಗ್ ಕಾರ್
Tata Punch
ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡುವವರಿಗೆ Tata Punch ಉತ್ತಮ ಆಯ್ಕೆ ಆಗಿದೆ. Tata Punch ಭಾರತದ ಜನಪ್ರಿಯ ಮೈಕ್ರೋ SUV ಆಗಿದ್ದು ಒಂದು ಲೀಟರ್ ಗೆ 20.09 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ ಗಳು, ಹೈಯರ್ ವೇರಿಯಂಟ್ ಗಳಲ್ಲಿ 6 ಏರ್ ಬ್ಯಾಗ್ ಗಳನ್ನೂ ಅಳವಡಿಸಲಾಗಿದೆ. ಒಳಭಾಗದಲ್ಲಿ 7 ಅಥವಾ 10.25 ಇಂಚು Touchscreen infotainment ಹಾಗೆ ಹೈಯರ್ ವೆರಿಯಂಟ್ ನಲ್ಲಿ ಸನ್ ರೂಫ್, ಹಾಗೆ ಇನ್ನಿತರ ವೈಶಿಷ್ಟಗಳನ್ನ ಅಳವಡಿಸಲಾಗಿದೆ. Tata Punch ಮೈಕ್ರೋ SUV ಬೆಲೆ 6 ಲಕ್ಷದಿಂದ 10 ಲಕ್ಷ ಆಗಿದೆ. ಈ ಕಾರಿನಲ್ಲಿ Pure, Adventure, Accomplished ಮತ್ತು Creative ವೇರಿಯಂಟ್ ಗಳು ಲಭ್ಯವಾಗಿದೆ. Global NCAP ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
Tata Nexon
Tata Nexon ಭಾರತದ ಮೊದಲ 5 ಸ್ಟಾರ್ Global NCAP ಕಾರ್ ಆಗಿದೆ. ವೈಶಿಷ್ಟ್ಯಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್ ಟೆಕ್ ಮತ್ತು ಫಾಸ್ಟ್ ಚಾರ್ಜಿಂಗ್ (40 ನಿಮಿಷಗಳಲ್ಲಿ 10-100% DC ಚಾರ್ಜಿಂಗ್) ಸೇರಿವೆ. ಸುರಕ್ಷತೆಗಾಗಿ 5-ಸ್ಟಾರ್ ರೇಟಿಂಗ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ಫೀಚರ್‌ಗಳು ಇವೆ. ಪೆಟ್ರೋಲ್, ಡೀಸೆಲ್ ಮತ್ತು EV ಆಯ್ಕೆಗಳೊಂದಿಗೆ ಉತ್ತಮ ಪರ್ಫಾರ್ಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ. ಪೆಟ್ರೋಲ್ ಮಾದರಿಯಲ್ಲಿ 18 ಕಿಲೋಮೀಟರ್ ಮೈಲೇಜ್, ಡೀಸೆಲ್ ಮಾದರಿಯಲ್ಲಿ 22 ರಿಂದ 24 ಕಿಲೋಮೀಟರ್ ಮೈಲೇಜ್ ನೀಡುತ್ತದೆ. Tata Nexon ಎಕ್ಸ್ ಶೋರೂಮ್ ಬೆಲೆ ಸುಮಾರು 8 ಲಕ್ಷದಿಂದ 15 ಲಕ್ಷ ಆಗಿದೆ.
Mahindra XUV 3XO
ಮಹೀಂದ್ರ XUV 3XO ತನ್ನ ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ, ಮತ್ತು ಕೈಗೆಟುಕುವ ಬೆಲೆಯಿಂದ ಭಾರತದಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ಜನಪ್ರಿಯವಾಗಿದೆ. Mahindra XUV 3XO 10.25-ಇಂಚಿನ ಟಚ್‌ಸ್ಕ್ರೀನ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು ಮತ್ತು Level-2 ADAS ವೈಶಿಷ್ಟ್ಯವನ್ನು ನೀಡುತ್ತದೆ. Mahindra XUV 3XO ಎಕ್ಸ್ ಶೋರೂಮ್ ಬೆಲೆ ಸುಮಾರು 8 ಲಕ್ಷದಿಂದ 15 ಲಕ್ಷ ಆಗಿದೆ. ಇನ್ನು Mahindra XUV 3XO ಪೆಟ್ರೋಲ್ ಮಾದರಿಯಲ್ಲಿ 18 ರಿಂದ 20 ಕಿಲೋಮೀಟರ್ ಮೈಲೇಜ್ ಹಾಗೆ ಡಿಸೇಲ್ ಮಾದರಿಯಲ್ಲಿ 20 ರಿಂದ 21 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
Tata Altroz
Tata Altroz 5 ಸ್ಟಾರ್ Bharat NCAP ರೇಟಿಂಗ್ ಪಡೆದುಕೊಂಡಿದೆ. 10.25 ಇಂಚ್ ಟಚ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಹೀಗೆ ಹಲವಾರು ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಇನ್ನು ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS with EBD, ESP, 360 ಡಿಗ್ರಿ ಕ್ಯಾಮೆರಾ ಮತ್ತು ISOFIX ಅಳವಡಿಸಲಾಗಿದೆ. Tata Altroz ಎಕ್ಸ್ ಶೋರೂಮ್ ಬೆಲೆ 6.5 ಲಕ್ಷದಿಂದ 11 ಲಕ್ಷ ಆಗಿದೆ. ಪೆಟ್ರೋಲ್ ಮಾದರಿಯಲ್ಲಿ18 ರಿಂದ 19 ಕಿಲೋಮೀಟರ್ ಮೈಲೇಜ್, ಹಾಗೆ ಡೀಸೆಲ್ ಮಾದರಿಯಲ್ಲಿ 23 ರಿಂದ 24 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
Volkswagen Taigun
Volkswagen Taigun ಭಾರತದಲ್ಲಿ ಅತ್ಯಂತ ಸುರಕ್ಷಿತ SUV ಗಳಲ್ಲಿ ಒಂದಾಗಿದೆ. ಇದರ ಎಕ್ಸ್ ಶೋರೂಮ್ ಬೆಲೆ 11.7 ಲಕ್ಷದಿಂದ 20 ಲಕ್ಷ ಆಗಿದೆ. ಇನ್ನು ಪೆಟ್ರೋಲ್ ಮಾದರಿಯಲ್ಲಿ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ವೈಶಿಷ್ಟ್ಯಗಳಲ್ಲಿ 10 ಇಂಚ್ ಟಚ್ ಸ್ಕ್ರೀನ್, ಡಿಜಿಟಲ್ ಕ್ಲಸ್ಟರ್, ವೈರ್ ಲೆಸ್ ಚಾರ್ಜಿಂಗ್ ಹೀಗೆ ಹಲವು ಪಿಚರ್ ಗಳು ಲಭ್ಯವಿದೆ. ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ESC, ABS with EBD, TPMS, ಹಿಲ್ ಹೋಲ್ಡ್ ಮತ್ತು ರಿಯರ್ ಕ್ಯಾಮೆರಾ ಅಳವಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

