Royal Challengers Bangalore Team Major Changes: ನಿನ್ನೆ ನಡೆದ IPL ಪಂದ್ಯದಲ್ಲಿ RCB ತಂಡ ಹೀನಾಯವಾಗಿ ಸೋಲು ಅನುಭವಿಸಿತು ಎಂದು ಹೇಳಬಹುದು. ನಿನ್ನೆ ಮಳೆಯ ಕಾರಣ ತಡವಾಗಿ ಆರಂಭವಾದ RCB ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ 14 ಓವರ್ ಗಳಿಗೆ ಸೀಮಿತ ಮಾಡಲಾಗಿತ್ತು. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ RCB ವಿರುದ್ಧ ಭರ್ಜರಿ 5 ವಿಕೆಟ್ ಗಳ ಗೆಲುವು ಸಾಧಿಸುವುದರ ಮೂಲಕ IPL 2025 ರ ಪಾಯಿಂಟ್ ಟೇಬಲ್ ನಲ್ಲಿ ಒಂದು ಹೆಜ್ಜೆ ಮೇಲಕ್ಕೆ ಹೋಗಿದೆ ಎಂದು ಹೇಳಬಹುದು. ನಿನ್ನೆ RCB ತಂಡ ನೀಡಿದ ಹೀನಾಯ ಪ್ರದರ್ಶನಕ್ಕೆ RCB ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದಾರೆ. ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ RCB ಮೊದಲು ಬ್ಯಾಟಿಂಗ್ ಮಾಡಿತ್ತು, ಆರಂಭದಲ್ಲೆ ಮುಗ್ಗರಿಸಿದ RCB 35 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಆರಂಭದಲ್ಲೆ ಮುಗ್ಗರಿದ RCB
ಟಾಸ್ ಸೋತು ಬ್ಯಾಟಿಂಗ್ ಪಡೆದ ರ್ಕಬ್ ಆರಂಭದಲ್ಲೇ ಎಲ್ಲಾ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಳ್ಳುವುದರ ಮೂಲಕ ಹಿನ್ನೆಡೆ ಅನುಭವಿಸಿತು ಎಂದು ಹೇಳಬಹುದು. 50 ರನ್ ಒಳಗೇನೇ ಎಲ್ಲಾ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡ RCB ನಂತರ ಟೀಮ್ ಡೇವಿಡ್ ಅವರ ಅಮೋಘವಾದ ಆಟದ ಮೂಲಕ 14 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಹೊಡೆದು ಪಂಜಾಬ್ ತಂಡಕ್ಕೆ 96 ರನ್ನಿನ ಗುರಿ ನೀಡಿತ್ತು. RCB ನೀಡಿದ ಸುಲಭ ಗುರಿಯನ್ನು ಪಂಜಾಬ್ ತಂಡ 5 ವಿಕೆಟ್ 12 ಓವರ್ ಗಳಲ್ಲಿ ಗೆಲುವು ಸಾಧಿಸಿತು. ನಿನ್ನೆ RCB ತಂಡದ ಆಡಿದ ರೀತಿಯನ್ನು ಕಂಡು RCB ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದಾರೆ.
ಅವರಿಬ್ಬರು ತಂಡದಿಂದ ಹೊರಗಿದ್ದರೆ ಮಾತ್ರ ಗೆಲ್ಲಬಹುದು
RCB ಸೋಲಿನ ನಂತರ ಬೇಸರ ಹೊರಹಾಕಿದ ಅಭಿಮಾನಿಗಳು ತಂಡದಲ್ಲಿ ಈ ಕೆಲವು ಬದಲಾವಣೆ ಮಾಡಿದರೆ ಮಾತ್ರ RCB ತಂಡ ಮುಂದಿನ ಪಂದ್ಯಗಳಲ್ಲಿ ಗೆಲ್ಲಬಹುದು ಎಂದು ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಹೊರಹಾಕುತ್ತಿದ್ದಾರೆ. ಇನ್ನು ಅಭಿಮಾನಿಗಳ ಅಭಿಪ್ರಾಯದ ಪ್ರಕಾರ, RCB ತಂಡದ ಮಧ್ಯಮ ಕ್ರಮಾಂಕದ ಆಟಗಾರದ Liam Livingstone ಮತ್ತು Glenn Maxwell ತಂಡದಿಂದ ಹೊರಗಿದ್ದರೆ ಮಾತ್ರ RCB ಮುಂದಿನ ಪಾಂಡುವೂ ಗೆಲ್ಲಬಹುದು ಎಂದು ಅಭಿಮಾನಿಗಳು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಮಂಕಾದ Liam Livingstone ಮತ್ತು Glenn Maxwell
ಐಪಿಎಲ್ ಆರಂಭ ಆದಾಗಿನಿಂದ Liam Livingstone ಮತ್ತು Glenn Maxwell ಅವರು ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದಾರೆ ಎಂದು ಹೇಳಬಹುದು. ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಎಡವುತ್ತಿರುವ Liam Livingstone ಮತ್ತು Glenn Maxwell ಅವರನ್ನು ತಂದಿಂದ ಹೊರಗಿಟ್ಟು ಬೇರೆ ಆಟಗಾರರಿಗೆ ಅವಕಾಶ ಕೊಡುವುದು ಉತ್ತಮ ಅನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯ ಆಗಿದೆ. RCB ತಂಡದಲ್ಲಿ ಇನ್ನಷ್ಟು ಮಧ್ಯಮ ಕ್ರಮಾಂಕದ ಆಟಗಾರರು ಇದ್ದು ಅವರಿಗೆ ಅವಕಾಶ ಕೊಟ್ಟು Liam Livingstone ಮತ್ತು Glenn Maxwell ಅವರನ್ನು ಹೊರಗೆ ಇಟ್ಟರೆ ಮಾತ್ರ ಮುಂದಿನ ಪಂದ್ಯಗಳನ್ನು ಗೆಲ್ಲಬಹುದಾಗಿದೆ.
ವಿರಾಟ್ ಕೊಹ್ಲಿ ಒನ್ ಡೌನ್ ಬರಬೇಕು
ವಿರಾಟ್ ಕೊಹ್ಲಿ ಅವರು ಸಾಲ್ಟ್ ಅವರ ಜೊತೆ ಆರಂಭಿಕವಾಗಿ ಅಂಕಣಕ್ಕೆ ಇಳಿಯುವ ಬದಲು ಒನ್ ಡೌನ್ ಬರುವುದು ಉತ್ತಮ ಅನ್ನುವುದು ಇನ್ನೂ ಕೆಲವು ಜನರ ಅಭಿಪ್ರಾಯವಾಗಿದೆ. ಓಪನಿಂಗ್ ನಲ್ಲಿ ವಿರಾಟ್ ಕೊಹ್ಲಿ ಅವರು ಸರಿಯಾಗಿ ಪ್ರದರ್ಶನ ನೀಡುತ್ತಿಲ್ಲ ಮತ್ತು ಅವರು ಒನ್ ಡೌನ್ ಆದನಂತರ ಬಂದರೆ ತಂಡಕ್ಕೆ ಇನ್ನಷ್ಟು ಉಪಯೋಗ ಆಗಲಿದೆ. RCB ṭಅಂಡದಲ್ಲಿ ಕೆಲವು ಮೇಜರ್ ಸರ್ಜರಿ ಮಾಡಿದರೆ ಮಾತ್ರ ಮುಂದಿನ ಪಂದ್ಯಗಳನ್ನು ಗೆಲ್ಲಬಹುದು.