Ancestral Property Law: ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಉಂಟಾಗುತ್ತದೆ. ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲರಿಗೂ ಕೂಡ ಸಮನಾದ ಪಾಲು ಇರುತ್ತದೆ. ಆದರೆ ತಂದೆ ಅಥವಾ ತಾತ ಸ್ವಂತ ದುಡಿಮೆಯಿಂದ ಮಾಡಿದ ಆಸ್ತಿ ಆಗಿದ್ದರೆ ಮಕ್ಕಳಿಗೆ ಆ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ. ಹಾಗಾದರೆ ನಾವೀಗ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಸಿಗದೇ ಇರುವುದಕ್ಕೆ ಕಾರಣ ಏನು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಹಿಂದೂ ಉತ್ತರಾಧಿಕಾರ ಕಾಯಿದೆ
ಹಿಂದೂ ಉತ್ತರಾಧಿಕಾರ ಕಾಯಿದೆ ಪ್ರಕಾರ, ಆಸ್ತಿ ಹಂಚಿಕೆಯಲ್ಲಿ ಹಲವು ವಿಧಗಳು ಇರುವುದನ್ನು ನಾವು ಗಮನಿಸಬಹುದು. ಆಸ್ತಿಯಲ್ಲಿ ಎರಡು ವಿಧಾನಗಳು ಮತ್ತು ಒಂದು ಪಿತ್ರಾರ್ಜಿತ ಆಸ್ತಿ, ಇನ್ನೊಂದು ಸ್ವಯಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ, ಪೂರ್ವಜರಿಂದ ಬಂದ ಆಸ್ತಿಯಾಗಿರುತ್ತೆ. ಸ್ವಯಾರ್ಜಿತ ಆಸ್ತಿ ಅಂದರೆ ತಂದೆ ಅಥವಾ ತಾಯಿ ತನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಯಾಗಿರುತ್ತದೆ.
ಸ್ವಯಾರ್ಜಿತ ಆಸ್ತಿ ಎಂದರೆ?
ಸ್ವಯಾರ್ಜಿತ ಆಸ್ತಿ ಅಂದರೆ ತಂದೆಯಾದವನು ತನ್ನ ಸ್ವಂತ ಹಣದಲ್ಲಿ ಸಂಪಾದನೆ ಮಾಡಿದ ಆಸ್ತಿಯಾಗಿರುತ್ತದೆ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೂ ಕೂಡ ಪಾಲು ಕೇಳುವ ಅಧಿಕಾರ ಇರುವುದಿಲ್ಲ. ತಂದೆಯಾದವನು ತಾನು ಸಂಪಾದನೆ ಮಾಡಿದ ಆಸ್ತಿಯಲ್ಲಿ ಯಾರಿಗೆ ಬೇಕಾದರು ಗಿಫ್ಟ್ ಮೂಲಕ ಕೊಡಬಹುದು ಅಥವಾ ವಿಲ್ ಬರೆಯಬಹುದು. ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಪಡೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ, ಅದು ಹೆಣ್ಣಾಗಲಿ ಅಥವಾ ಗಂಡಾಗಲಿ.
ಪಿತ್ರಾರ್ಜಿತ ಆಸ್ತಿ ಎಂದರೆ?
ಪಿತ್ರಾರ್ಜಿತ ಆಸ್ತಿ ಎಂದರೆ ಮೂರು-ನಾಲ್ಕು ತಲೆಮಾರುಗಳಿಂದ ಬಂದು, ವಿಭಾಗವಾಗದೇ ಇರುವ ಆಸ್ತಿ. ಹಿಂದೂ ಕಾಯಿದೆಯಲ್ಲಿ ಇದು ಕುಟುಂಬದ ಸಂಯುಕ್ತ ಆಸ್ತಿಯಾಗಿರುತ್ತದೆ. 2005 ಕ್ಕೂ ಮೊದಲು ಗಂಡು ಮಕ್ಕಳಿಗೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಿತ್ತು, ಆದರೆ 2005 ರ ತಿದ್ದುಪಡಿಯ ನಂತರ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಪಡೆದುಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗಲ್ಲ
2005 ಕ್ಕಿಂತ ಮೊದಲೇ ಆಸ್ತಿ ವಿಭಾಗ ಆಗಿದ್ದರೆ
2005 ಕ್ಕಿಂತ ಮೊದಲು ಪಿತ್ರಾರ್ಜಿತ ಆಸ್ತಿ ವಿಭಾಗ ಆಗಿದ್ದರೆ ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. 2005 ರ ತಿದ್ದುಪಡಿ ಮತ್ತು 2020 ರ ಸುಪ್ರೀಮ್ ಕೋರ್ಟ್ Vineeta sharma ಅವರ ತೀರ್ಪಿನ ಪ್ರಕಾರ, ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಜನ್ಮ ಸಿದ್ದ ಹಕ್ಕನ್ನು ಪಡೆಯುತ್ತಾರೆ. ಆದರೆ 2005 ರ ತಿದ್ದುಪಡಿಗಿಂತ ಮೊದಲು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ.
ವಿಲ್ ಬರೆದಿಟ್ಟಿದ್ದರೆ
ತಂದೆ ಜೀವಂತ ಇರುವಾಗಲೇ ಮಗಳನ್ನು ಬಿಟ್ಟು ರಿಜಿಸ್ಟರ್ಡ್ ವಿಲ್ ಬರೆದಿಟ್ಟಿದ್ದರೆ, ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ.
ಬೇರೆ ಧರ್ಮಕ್ಕೆ ಮತಾಂತರ ಆಗಿದ್ದರೆ
ಹಿಂದೂ ಕುಟುಂಬದ ಮಗಳು ಕ್ರಿಶ್ಚಿಯನ್ ಅಥವಾ ಬೇರೆ ಧರ್ಮಕ್ಕೆ ಮತಾಂತರ ಆಗಿದ್ದರೆ, ಹಿಂದೂ ಉತ್ತರಾಧಿಕಾರಿ ಕಾಯ್ದೆ ಅನ್ವಯಿಸುವುದಿಲ್ಲ. ಕ್ರಿಶ್ಚಿಯನ್, ಮುಸ್ಲಿಂ, ಇತರೆ ಧರ್ಮದ ಅಸ್ತಿ ಹಂಚಿಕೆಯ ಕಾನೂನು ಬೇರೆ ಬೇರೆ ಆಗಿರುತ್ತದೆ.
ಮೃತ ಮಗಳ ಮಕ್ಕಳ ಹಕ್ಕು
ಮಗಳು ಮರಣ ಹೊಂದಿದರೆ, ಆಕೆಯ ಮಕ್ಕಳು ಆಕೆಗೆ ಸಿಗಬೇಕಾದ ಪಾಲನ್ನು ಕೇಳಬಹುದು. ಆದರೆ ಕೆಲವು ಸಂದರ್ಭದಲ್ಲಿ ಪಾಲು ಸಿಗದೇ ಇರಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

