2026 ರ ಹೊಸ ಆದಾಯ ತೆರಿಗೆ ಕಾಯ್ದೆ ಬದಲಾವಣೆಗಳು
ಸ್ಲ್ಯಾಬ್ ದರಗಳು
- 0 ಯಿಂದ 4 ಲಕ್ಷಕ್ಕೆ ತೆರಿಗೆ ಶೂನ್ಯವಾಗಿದೆ
- 4 ರಿಂದ 8 ಲಕ್ಷಕ್ಕೆ ಶೇಕಡಾ 5 ರಷ್ಟು ತೆರಿಗೆ ಪಾವತಿಮಾಡಬೇಕು
- 8 ರಿಂದ 12 ಲಕ್ಷಕ್ಕೆ ಶೇಕಡಾ 10 ರಷ್ಟು ತೆರಿಗೆ ಪಾವತಿಮಾಡಬೇಕು
- 12 ರಿಂದ 16 ಲಕ್ಷಕ್ಕೆ ಶೇಕಡಾ 15 ರಷ್ಟು ತೆರಿಗೆ ಪಾವತಿಮಾಡಬೇಕು
- 16 ರಿಂದ 20 ಲಕ್ಷಕ್ಕೆ ಶೇಕಡಾ 20 ರಷ್ಟು ತೆರಿಗೆ ಪಾವತಿಮಾಡಬೇಕು
- 20 ರಿಂದ 24 ಲಕ್ಷಕ್ಕೆ ಶೇಕಡಾ 25 ರಷ್ಟು ತೆರಿಗೆ ಪಾವತಿಮಾಡಬೇಕು
- 24 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ಪಾವತಿಮಾಡಬೇಕು
ಈ ಬದಲಾವಣೆಗಳಿಂದ ಮಧ್ಯಮ ವರ್ಗಕ್ಕೆ ವಾರ್ಷಿಕ 35,000 ದಿಂದ 1 ಲಕ್ಷಕ್ಕೂ ಹೆಚ್ಚು ಉಳಿತಾಯವಾಗುತ್ತದೆ.
ತೆರಿಗೆದಾರರ ಮೇಲೆ ಪರಿಣಾಮ
- ಸಾಮಾನ್ಯ ವೇತನಧಾರಿಗಳು ಮತ್ತು ವ್ಯಾಪಾರಿಗಳಿಗೆ ತೆರಿಗೆ ಫೈಲಿಂಗ್ ಸುಲಭವಾಗುತ್ತದೆ
- ಹಳೆಯ ‘Assessment Year’ ಮತ್ತು ‘Previous Year’ ಪದಗಳ ಬದಲು ‘Tax year’ ಎಂಬ ಏಕೈಕ ಪದ ಬರುತ್ತದೆ
- ವರ್ಚುವಲ್ ಡಿಜಿಟಲ್ ಅಸೆಟ್‌ಗಳು (ಕ್ರಿಪ್ಟೋ) ತೆರಿಗೆ ವ್ಯಾಪ್ತಿಗೆ ಸ್ಪಷ್ಟವಾಗಿ ಬರುತ್ತವೆ
- ಸಿಗರೇಟ್ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸುಂಕಗಳು ಬರಬಹುದು
- ಜಿಎಸ್‌ಟಿ ಮತ್ತು ಕಸ್ಟಮ್ಸ್ ಡ್ಯೂಟಿಯಲ್ಲಿ ದೊಡ್ಡ ಬದಲಾವಣೆ ಇಲ್ಲ
ಗಮನಿಸಬೇಕಾದ ಕೆಲವು ಅಂಶಗಳು
- ಹೊಸ ಕಾಯ್ದೆ ಅಡಿಯಲ್ಲಿ Faceless ಪ್ರಕ್ರಿಯೆಗಳು ಮತ್ತು Digital Filing ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
- ವಿವಾದಗಳು ಕಡಿಮೆಯಾಗಿ, ತೆರಿಗೆದಾರರಿಗೆ ಭಯ ಕಡಿಮೆಯಾಗುತ್ತದೆ
- Updated return file ಮಾಡಲು ಸಮಯವನ್ನು 2 ವರ್ಷದಿಂದ 4 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ
- ಒಟ್ಟಾರೆಯಾಗಿ ಇದು ಸಾಮಾನ್ಯ ಜನರಿಗೆ ಲಾಭದಾಯಕವಾಗಿದೆ
- ತೆರಿಗೆ ಪಾವತಿ ಮಾಡುವ ಮುನ್ನ ಈ ಅಂಶವನ್ನು ಗಮನಿಸಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

