Bank Holidays January 2026: ಹೊಸ ವರ್ಷ ಆರಂಭವಾಗುತ್ತಿದಂತೆ ಅನೇಕ ಹೊಸ ಹೊಸ ನಿಯಮಗಳು ದೇಶದಲ್ಲಿ ಜಾರಿಯಾಗುತ್ತಿರುತ್ತದೆ. ಇದೀಗ 2026 ರ ಜನವರಿ ತಿಂಗಳು ಆರಂಭವಾಗಿದೆ. ಬ್ಯಾಂಕ್ ನೌಕರರು ಮತ್ತು ಗ್ರಾಹಕರು ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಅವಶ್ಯಕವಾಗಿರುತ್ತದೆ. ಕರ್ನಾಟಕದಲ್ಲಿ ಬ್ಯಾಂಕ್ ರಜೆಗಳು ರಾಷ್ಟ್ರೀಯ ಹಾಗೂ ಸ್ಥಳೀಯ ಹಬ್ಬಗಳ ಆಧಾರದ ಮೇಲೆ ನಿರ್ಧಾರವಾಗುತ್ತವೆ. ಹಾಗೆ RBI ನಿಯಮಗಳ ಪ್ರಕಾರ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದೀಗ ನಾವು ಜನವರಿ 2026 ರಲ್ಲಿ ಬ್ಯಾಂಕ್ ಎಷ್ಟು ದಿನ ಮುಚ್ಚಿರುತ್ತದೆ ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಜನವರಿಯಲ್ಲಿ ಕರ್ನಾಟಕದ ಬ್ಯಾಂಕ್ ಗಳು ಎಷ್ಟು ದಿನ ಮುಚ್ಚಿರುತ್ತದೆ?
ಹೊಸ ವರ್ಷ ಆರಂಭವಾಗುತ್ತಿದಂತೆ ಹಣಕಾಸು ನಿಯಮದಲ್ಲಿ ಕೂಡ ಬದಲಾವಣೆ ಆಗುತ್ತದೆ. ಸರ್ಕಾರ ಜಾರಿಗೆ ತರುವ ಹೊಸ ನಿಯಮ, ಬ್ಯಾಂಕ್ ಲೋನ್ ಮಾಡಲು, ಹಣ ಡೆಪಾಸಿಟ್ ಮಾಡಲು ಹೀಗೆ ಇತ್ಯಾದಿ ಕೆಲಸಗಳನ್ನು ಮಾಡಲು ಗ್ರಾಹಕರು ಬ್ಯಾಂಕ್ ಗಳಿಗೆ ಭೇಟಿ ನೀಡಬೇಕಾಗುತ್ತದೆ. ಈ ಬ್ಯಾಂಕ್ ಕೆಲಸಗಳನ್ನು ಪೂರೈಸಲು ಗ್ರಾಹಕರು ಬ್ಯಾಂಕ್ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಕರ್ನಾಟಕದಲ್ಲಿ ಒಟ್ಟು ವಾರಾಂತ್ಯದ ರಜೆಗಳು ಸೇರಿ 9 ದಿನ ಬ್ಯಾಂಕ್ ಮುಚ್ಚಿರುತ್ತದೆ. ಹಾಗಾದರೆ ಯಾವೆಲ್ಲ ದಿನ ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ರಜಾ ದಿನಗಳ ಸಂಪೂರ್ಣ ವಿವರ
- ಜನವರಿ 1 ಗುರುವಾರ – ಹೊಸ ವರ್ಷದ ಕಾರಣ ಕೆಲವು ರಾಜ್ಯದಲ್ಲಿ ರಜೆ ಇರುತ್ತದೆ
- ಜನವರಿ 4 ಭಾನುವಾರ – ಸರ್ಕಾರೀ ರಜೆ
- ಜನವರಿ 10 ಎರಡನೇ ಶನಿವಾರ – ಸರ್ಕಾರೀ ರಜೆ
- ಜನವರಿ 11 ಭಾನುವಾರ – ಸರ್ಕಾರೀ ರಜೆ
- ಜನವರಿ 15 ಗುರುವಾರ – ಮಕರ ಸಂಕ್ರಾಂತಿ ಕಾರಣ ರಜೆ ಇರುತ್ತದೆ
- ಜನವರಿ 18 ಭಾನುವಾರ – ಸರ್ಕಾರೀ ರಜೆ
- ಜನವರಿ 24 ನಾಲ್ಕನೇ ಶನಿವಾರ – ಸರ್ಕಾರೀ ರಜೆ
- ಜನವರಿ 25 ಭಾನುವಾರ – ಸರ್ಕಾರೀ ರಜೆ
- ಜನವರಿ 26 ಸೋಮವಾರ – ಗಣರಾಜ್ಯೋತ್ಸವ ಕಾರಣ ದೇಶಾದ್ಯಂತ ರಜೆ
ಮಕರ ಸಂಕ್ರಾಂತಿ ವಿಶೇಷ
ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಬ್ಬದಂದು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ಮಾಡಿ ಹಂಚುತ್ತಾರೆ. ಹಾಗೆ “ಎಳ್ಳು ಬೆಲ್ಲ ತಿನ್ನಿ ಮತ್ತು ಒಳ್ಳೆಯ ಮಾತಾಡಿ” ಎಂದು ಹಾರೈಸುತ್ತಾರೆ. ಮನೆಗಳನ್ನು ರಂಗೋಲಿಯಿಂದ ಅಲಂಕರಿಸುತ್ತಾರೆ. ಹೊಸ ಬಟ್ಟೆ ಧರಿಸಿ, ಸಿಹಿ ತಿನ್ನುತ್ತಾರೆ. ಜನವರಿ 15 ರಂದು ಮಕರ ಸಂಕ್ರಾಂತಿ ಕಾರಣ ಕರ್ನಾಟಕದ ಎಲ್ಲ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಆದರೆ UPI, ನೆಟ್ ಬ್ಯಾಂಕಿಂಗ್, ATM ಗಳು ಸಾಮಾನ್ಯವಾಗಿ ಕೆಲಸ ಮಾಡುತ್ತವೆ.
ಗಣರಾಜ್ಯೋತ್ಸವದ ಮಹತ್ವ
ಜನವರಿ 26 ರಂದು ಭಾರತದ ಸಂವಿಧಾನ ಜಾರಿಗೆ ಬಂದ ದಿನ. ದೇಶಾದ್ಯಂತ ಬ್ಯಾಂಕ್ ಗಳು ರಜೆ. ಆದರೆ ಆನ್ಲೈನ್ ಬ್ಯಾಂಕಿಂಗ್, UPI, ATM ಗಳು ಕಾರ್ಯ ನಿರ್ವಹಿಸುತ್ತದೆ.
ಈ ಮಾಹಿತಿ ಏಕೆ ಅವಶ್ಯಕ
ಬ್ಯಾಂಕ್ ಗೆ ಸಂಬಂಧಿಸಿದ ಕೆಲಸಗಳಿಗಾಗಿ ಶಾಖೆಗೆ ಭೇಟಿ ನೀಡುವಾಗ ರಜೆಯ ದಿನಗಳ ಬಗ್ಗೆ ತಿಳಿದಿರದಿದ್ದರೆ ನಿಮ್ಮ ಸಮಯ ವ್ಯರ್ಥವಾಗಬಹುದು. ಈ ಎಲ್ಲ ಕಾರಣದಿಂದ ಬ್ಯಾಂಕ್ ಗಳು ಮುಚ್ಚಿರುತ್ತದೆ ಆದರೆ ATM ಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಬ್ಯಾಂಕ್ ರಜೆಯಲ್ಲಿ ಮುಚ್ಚಿದ್ದರು ಬ್ಯಾಂಕ್ ಆಪ್ ಮೂಲಕ ಅಥವಾ UPI ಗಳ ಮೂಲಕ ನಿಮ್ಮ ಹಣಕಾಸು ಸೇವೆಯನ್ನು ಮಾಡಿಕೊಳ್ಳಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

