Reservation Merit Rules 2026: ಇದೀಗ ನೀವು SC / ST / OBC ವರ್ಗಕ್ಕೆ ಸೇರಿದವರಾಗಿದ್ದು, ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಗಳಿಸಿದ್ದರೂ ಕೂಡ ನಿಮಗೆ ಸೀಟ್ ಸಿಗುತ್ತಿಲ್ಲ ಎಂದು ಯೋಜನೆ ಮಾಡುತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇನ್ನುಮುಂದೆ ಹೆಚ್ಚು ಅಂಕ ಗಳಿಸುವ ಮೀಸಲಾತಿ ವರ್ಗದ ಅಭ್ಯರ್ಥಿಗಳನ್ನು ಯಾರೂ ತಡೆಯುವಂತಿಲ್ಲ, ಮೆರಿಟ್ ನಲ್ಲಿ ಸಾಮಾನ್ಯ ವರ್ಗದ ಸರ್ಕಾರಿ ಹುದ್ದೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಹೊರಡಿಸಿದೆ. ಹಾಗಾದರೆ ಸರ್ಕಾರೀ ಹುದ್ದೆಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ತೀರ್ಪು ಏನು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೆರಿಟ್ ಆಧಾರದ ಮೇಲೆ ಸಾಮಾನ್ಯ ಹುದ್ದೆ
ಮೆರಿಟ್ ಮೇಲೆ ಸಾಮಾನ್ಯ ಹುದ್ದೆಗಳು ಎಂದರೆ ಯಾವುದೇ ಮೀಸಲಾತಿ ಇಲ್ಲದೆ ಕೇವಲ ಅರ್ಹತೆ ಮತ್ತು ಪರೀಕ್ಷೆ ಅಥವಾ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕವಾಗುವ ಹುದ್ದೆಗಳು. ಅಂದರೆ ಇನ್ನುಮುಂದೆ ಮೀಸಲಾತಿ ಅಭ್ಯರ್ಥಿಗಳಿಗೆ ಮೆರಿಟ್ ನಲ್ಲಿ ಸಾಮಾನ್ಯ ವರ್ಗದ ಸರ್ಕಾರಿ ಹುದ್ದೆಗಳ ಅವಕಾಶ ನೀಡಲಾಗುತ್ತದೆ.
ಸುಪ್ರೀಮ್ ಕೋರ್ಟ್ ತೀರ್ಪು
ಇದೀಗ ಸುಪ್ರೀಮ್ ಕೋರ್ಟ್ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯ ಬಗ್ಗೆ ದೊಡ್ಡ ಬದಲಾವಣೆ ಜಾರಿಗೆ ತಂದಿದೆ. ಜನವರಿ 2026 ರಲ್ಲಿ ನೀಡಿದ ತೀರ್ಪಿನ ಪ್ರಕಾರ, SC / ST / OBC ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕಟ್ ಆಫ್ ಮಾರ್ಕ್ ಗಳಿಸಿದರೆ ಇನ್ನುಮುಂದೆ ಸಾಮಾನ್ಯ ಹುದ್ದೆಗಳನ್ನು ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ. ಇದು ಮೆರಿಟ್ ಆಧಾರಿತ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಆಗಿದೆ. ಹಿಂದೆ ಕೆಲವು ನೇಮಕಾತಿಗಳಲ್ಲಿ ಈ ಅಭ್ಯರ್ಥಿಗಳನ್ನು ಕೇವಲ ಮೀಸಲಾತಿ ವರ್ಗಕ್ಕೆ ಸೀಮಿತಗೊಳಿಸುತ್ತಿದ್ದರು, ಆದರೆ ಈಗ ಮೆರಿಟ್ ಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ
ಈ ತೀರ್ಪು ರಾಜಸ್ಥಾನ ಹೈಕೋರ್ಟ್ ನ ನೇಮಕಾತಿ ಪ್ರಕ್ರಿಯೆಯಲ್ಲಿ ಉದ್ಭವಿಸಿದ ವಿವಾದದಿಂದ ಬಂದಿದೆ. Justice Dipankar Dutta ಮತ್ತು Justice Augustine George Masih ಅವರ ಬೆಂಚ್ ಈ ನಿರ್ಧಾರವನ್ನು ಕೈಗೊಂಡಿದೆ. ಇನ್ನುಮುಂದೆ ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲರಿಗೂ ತೆರೆದಿರುತ್ತವೆ. ಯಾವುದೇ ಜಾತಿ ಅಥವಾ ವರ್ಗಕ್ಕೆ ಮೀಸಲಿಲ್ಲ, ಕೇವಲ ಮೆರಿಟ್ ಮೇಲೆ ನಿರ್ಧಾರ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಮೆರಿಟ್ ಆಧಾರಿತ ನೇಮಕಾತಿ ಕಾರ್ಯವಿಧಾನ
ಲಿಖಿತ ಪರೀಕ್ಷೆಯಲ್ಲಿ ಮೀಸಲಾತಿ ಅಭ್ಯರ್ಥಿಗಳನ್ನು ಸಾಮಾನ್ಯ ಕಟ್ ಆಫ್ ಗಿಂತ ಹೆಚ್ಚು ಮಾರ್ಕ್ ಗಳಿಸಿದರೆ ಸಾಮಾನ್ಯ ವರ್ಗದ ಅಡಿಯಲ್ಲಿ ಇಂಟರ್ವ್ಯೂ ಗೆ ಕರೆಯಲಾಗುತ್ತದೆ. ಅಂತಿಮ ಮೆರಿಟ್ ನಲ್ಲಿ ಸಾಮಾನ್ಯ ಕಟ್ ಆಫ್ ಕಡಿಮೆಯಾದರೆ, ಅವರನ್ನು ಮೀಸಲಾತಿ ವರ್ಗಕ್ಕೆ ಹಿಂದಿರುಗಿಸಿ ಪ್ರಯೋಜನ ನೀಡಬಹುದು.
ಪ್ರಯೋಜನಗಳು
- ಉನ್ನತ ಮಾರ್ಕ್ ಗಳಿಸುವ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಉತ್ತಮವಾಗಿದೆ.
- ತಮ್ಮ ಸಾಮರ್ಥ್ಯದಿಂದ ಸಾಮಾನ್ಯ ಹುದ್ದೆ ಪಡೆಯಬಹುದು.
- ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲರಿಗೂ ತೆರೆದಿರುವಂತೆ ಮಾಡುತ್ತದೆ
- ಇದು ಸಮಾನತೆ ಮತ್ತು ನ್ಯಾಯದ ತತ್ವಕ್ಕೆ ಹೊಂದಿಕೊಳ್ಳುತ್ತದೆ
- ಭವಿಷ್ಯದ ನೇಮಕಾತಿಗಳಲ್ಲಿ ಈ ನಿಯಮ ಅನ್ವಯವಾಗಲಿದೆ
- ಮೆರಿಟ್‌ಗೆ ಶ್ರಮ ಹಾಕುವ ಎಲ್ಲ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶಗಳು ಬರಲಿದೆ
Disclaimer: This information is provided for awareness purposes only. For personalised legal advice, consult a qualified professional and refer to official government notifications.

