Post India Franchise 2026: ಸ್ವಂತ ವ್ಯವಹಾರ ಮಾಡಬೇಕು ಅನ್ನುವುದು ಹಲವರ ಕನಸಾಗಿರುತ್ತದೆ. ಆದರೆ ಹಣಕಾಸು ಮತ್ತು ಯೋಜನೆಯ ಮಾಹಿತಿ ಇಲ್ಲದೆ ಸುಮ್ಮನಾಗುತ್ತಾರೆ. ಇದೀಗ ಇಂಡಿಯಾ ಪೋಸ್ಟ್ ಪ್ರಾಂಚೈಸಿ ಸ್ವಂತ ಉದ್ಯೋಗದ ಕನಸು ಕಂಡವರಿಗೆ ಒಂದೊಳ್ಳೆ ಅವಕಾಶವನ್ನು ನೀಡಿದೆ. ಕಡಿಮೆ ಹೂಡಿಕೆಯಲ್ಲಿ ಸುರಕ್ಷಿತ ಮತ್ತು ಲಾಭದಾಯಕ ಆದಾಯಗಳಿಸಲು ಪೋಸ್ಟ್ ಆಫೀಸ್ ಪ್ರಾಂಚೈಸಿ ಉತ್ತಮ ಆಯ್ಕೆಯಾಗಿದೆ. ಈ ಮೂಲಕ ನೀವು ಪೋಸ್ಟಲ್ ಸೇವೆಗಳನ್ನು ಜನರಿಗೆ ತಲುಪಿಸಿ, ಕಮಿಷನ್ ಮೂಲಕ ಆದಾಯ ಗಳಿಸಬಹುದಾಗಿದೆ. ಹಾಗಾದರೆ ಪೋಸ್ಟ್ ಆಫೀಸ್ ಫ್ರಾಂಚೈಸಿ ತೆರೆಯುವುದು ಹೇಗೆ ಮತ್ತು ಬೇಕಾದ ದಾಖಲೆ ಮತ್ತು ಲಾಭ ಎಷ್ಟು ಗಳಿಸಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ಫ್ರಾಂಚೈಸ್ ಎಂದರೇನು?
ಪೋಸ್ಟ್ ಆಫೀಸ್ ಫ್ರಾಂಚೈಸ್ ಎಂದರೆ ಭಾರತೀಯ ಅಂಚೆ ಇಲಾಖೆಯ ಸೇವೆಗಳನ್ನು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಪ್ರದೇಶದಲ್ಲಿ ಒದಗಿಸುವ ಸ್ವಯಂ ಉದ್ಯೋಗ ಅವಕಾಶವಾಗಿದ್ದು, ಯುವಕರಿಗೆ ಉದ್ಯೋಗ ಕಲ್ಪಿಸಲು “ಹೊಸ ಫ್ರಾಂಚೈಸಿ ಯೋಜನೆ 2.0” ಅಡಿಯಲ್ಲಿ ಅವಕಾಶ ನೀಡಲಾಗುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಂಚೆ ಜಾಲವನ್ನು ವಿಸ್ತರಿಸುವುದು ಇದರ ಮುಖ್ಯ ಉದ್ದೇಶ ಆಗಿದೆ.
ಫ್ರಾಂಚೈಸಿ ವಿಧಗಳು
1 ) ಅಂಚೆ ಏಜೆಂಟ್ – ಅಂಚೆ ಚೀಟಿಗಳು, ಲೇಖನ ಸಾಮಗ್ರಿಗಳ ಮಾರಾಟ ಮತ್ತು ಇತರ ಸೇವೆಗಳನ್ನು ಒದಗಿಸುವುದು.
2 ) ಫ್ರಾಂಚೈಸ್ ಕೌಂಟರ್ – ಪೋಸ್ಟ್ ಆಫೀಸ್ ತೆರೆಯಲು ಸಾಧ್ಯವಿಲ್ಲದ ಕಡೆ ಕೌಂಟರ್ ಸೇವೆಗಳನ್ನು ಒದಗಿಸುವುದು. ಫ್ರಾಂಚೈಸ್ ಔಟ್ಲೆಟ್ ಗಳು Speed Post, Registered Post, Money Order, Savings Account ತೆರೆಯುವುದು ಮುಂತಾದ ಸೇವೆಗಳನ್ನು ನೀಡುತ್ತವೆ. ಇದು ಸಂಪೂರ್ಣ ಪೋಸ್ಟ್ ಆಫೀಸ್ ನಂತೆ ಕಾರ್ಯನಿರ್ವಹಿಸುತ್ತದೆ.
ಪೋಸ್ಟ್ ಆಫೀಸ್ ಫ್ರಾಂಚೈಸ್ ತೆರೆಯಲು ಅರ್ಹತೆ
- 18 ವರ್ಷ ಮೇಲ್ಪಟ್ಟ ವ್ಯಕ್ತಿ
- ಫ್ರಾಂಚೈಸ್ ಔಟ್ಲೆಟ್ ಗೆ ಕನಿಷ್ಠ 8 ನೇ ತರಗತಿ ಪಾಸ್ ಆಗಿರಬೇಕು
- ಪೋಸ್ಟಲ್ ಏಜೆಂಟ್ ಗೆ ಶಿಕ್ಷಣ ಅಗತ್ಯವಿಲ್ಲ
- ಮೂಲಭೂತ ಕಂಪ್ಯೂಟರ್ ತಿಳುವಳಿಕೆ
- ಪೋಸ್ಟ್ ಆಫೀಸ್ ಉದ್ಯೋಗಿಗಳ ಕುಟುಂಬ ಸದಸ್ಯರು ಅದೇ ಪ್ರದೇಶದಲ್ಲಿ ಅರ್ಹರಲ್ಲ
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಮೊದಲು https://indiapost.gov.in/ ನಿಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ.
- ವೈಯಕ್ತಿಕ ವಿವರ, ಸ್ಥಳ ವಿವರ ಮತ್ತು ಉದ್ಯೋಗದ ವಿವರವನ್ನು ಭರ್ತಿ ಮಾಡಿ
- ಸ್ಥಳೀಯ ಡಿವಿಷನಲ್ ಹೆಡ್ ಪೋಸ್ಟ್ ಆಫೀಸ್ ಗೆ ಸಲ್ಲಿಸಿ
- ಆಯ್ಕೆಯಾದರೆ ಇಂಟರ್ವ್ಯೂ ಅಥವಾ ಪರಿಶೀಲನೆ ನಡೆಯುತ್ತದೆ
- ಅಂತಿಮವಾಗಿ ಅಗ್ರೀಮೆಂಟ್ ಸೈನ್ ಮಾಡಿ, ಟ್ರೈನಿಂಗ್ ಪಡೆದುಕೊಳ್ಳಿ
ಪೋಸ್ಟ್ ಆಫೀಸ್ ಫ್ರಾಂಚೈಸ್ ತೆರೆಯಲು ಬೇಕಾದ ಮುಖ್ಯ ದಾಖಲೆಗಳು
- ಆಧಾರ್ ಕಾರ್ಡ್ ಅಥವಾ ವಿಳಾಸ ಪುರಾವೆ
- ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60
- ಬರ್ತ್ ಸರ್ಟಿಫಿಕೇಟ್
- ಶಿಕ್ಷಣ ಪ್ರಮಾಣಪತ್ರ
- 4 ರಿಂದ 6 ಭಾವಚಿತ್ರ
- ಸ್ಥಳದ ಒಡೆತನ ಅಥವಾ ರೆಂಟ್ ಅಗ್ರೀಮೆಂಟ್
- ಬ್ಯಾಂಕ್ ಪಾಸ್ ಬುಕ್
ಪೋಸ್ಟ್ ಆಫೀಸ್ ಫ್ರಾಂಚೈಸ್ ತೆರೆಯಲು ಹೂಡಿಕೆ
ಪ್ರಾಂಚೈಸಿ ಔಟ್ಲೆಟ್ ಗೆ 5000 ರೂಪಾಯಿ. ಇನ್ನು ಕಂಪ್ಯೂಟರ್, ಫರ್ನಿಚರ್, ಸೈನ್ ಬೋರ್ಡ್ ಗೆ 30,000 ದಿಂದ 1 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ಕಡಿಮೆ ಹೂಡಿಕೆಯಲ್ಲಿ ಆದಾಯಗಳಿಸಲು ಉತ್ತಮವಾಗಿದೆ. ಪೋಸ್ಟಲ್ ಎಜೇಂಟ್ ಗೆ ಹೂಡಿಕೆ ಅಗತ್ಯ ಇಲ್ಲ.
ಪೋಸ್ಟ್ ಆಫೀಸ್ ಫ್ರಾಂಚೈಸ್ ಲಾಭ
ಕಮಿಷನ್ ಆಧಾರಿತ ಲಾಭ ಪಡೆದುಕೊಳ್ಳಬಹುದು. ಮಾಸಿಕವಾಗಿ 20,000 ರಿಂದ 60,000 ವರೆಗೆ ಲಾಭ ಗಳಿಸಿಕೊಳ್ಳಬಹುದು. ನಗರದಲ್ಲಿ ಹೆಚ್ಚಿನ ಆದಾಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ಥಿರ ಆದಾಯವನ್ನು ಪಡೆದುಕೊಳ್ಳಬಹುದು.
- Speed Post booking ಗೆ 5 ರಿಂದ 10 ರೂಪಾಯಿ
- Registered Post ಗೆ 3 ರಿಂದ 5 ರೂಪಾಯಿ
- Stamp Sale ಗೆ 5 %
- Savings Account ತೆರೆಯಲು 20 ರಿಂದ 50 ರೂಪಾಯಿ
- PLI / RPLI ಪಾಲಿಸಿಗಳಿಗೆ ಹೆಚ್ಚು ಕಮಿಷನ್ ಪಡೆದುಕೊಳ್ಳಬಹುದಾಗಿದೆ
Disclaimer: This information is provided for awareness purposes only. For personalised legal advice, consult a qualified professional and refer to official government notifications.

