Income Tax Payment Through E-Pay: ಆದಾಯ ತೆರಿಗೆ (Income Tax) ಸರಿಯಾದ ದಿನಾಂಕದ ಒಳಗೆ ಸಲ್ಲಿಸುವುದು ಅತೀ ಅಗತ್ಯವಾಗಿದೆ. ಹೌದು, ಪ್ರಸ್ತಿತ ವರ್ಷದ ಆದಾಯ ತೆರಿಗೆ ಸಲ್ಲಿಸಲು ಜೂಲೈ 31 ಕೊನೆಯ ದಿನಾಂಕ ಆಗಿದೆ. ಇನ್ನು ಈ ವರ್ಷದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಹೌದು, ಹೊಸ ನಿಯಮದ ಅಡಿಯಲ್ಲಿ ಆದಾಯ ತೆರಿಗೆ ಸಲ್ಲಿಸುವವರಿಗೆ ಹೊಸ ಆದಾಯ ತೆರಿಗೆ ಪದ್ದತಿಯನ್ನು ಪಾಲನೆ ಮಾಡಬೇಕು ಮತ್ತು ಹಳೆಯ ತೆರಿಗೆ ನಿಯಮದ ಅಡಿಯಲ್ಲಿ ಆದಾಯ ತೆರಿಗೆ ಸಲ್ಲಿಸುವವರು ಹಳೆಯ ತೆರಿಗೆ ನಿಯಮವನ್ನು ಪಾಲನೆ ಮಾಡಬೇಕಾಗಿದೆ. ಇದರ ನಡುವೆ ಈಗ ತೆರಿಗೆ ಸಲ್ಲಿಸುವವರಿಗೆ ಸಹಕಾರಿಯಾಗಲಿ ಅನ್ನುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಪಾವತಿ ಮಾಡಲು ಹೊಸ ವಿಧಾನವನ್ನು ಜಾರಿಗೆ ತಂದಿದೆ.
ಈಗ ಆದಾಯ ತೆರಿಗೆಯನ್ನು E-Pay ಮೂಲಕ ಮಾಡಬಹುದು
ಹೌದು, ಈಗ ಆದಾಯ ತೆರಿಗೆ ಸಲ್ಲಿಕೆ ಮಾಡುವವರು E-Pay ಮೂಲಕ ಆದಾಯ ತೆರಿಗೆ ಪೇಮೆಂಟ್ ಮಾಡಬಹುದು. E-Pay ಆದಾಯ ತೆರಿಗೆ ಪಾವತಿ ಮಾಡುವವರಿಗೆ ಪೇಮೆಂಟ್ ಮಾಡಲು ಸುಲಭವಾದ ವಿಧಾನ ಎಂದು ಹೇಳಿದರೆ ತಪ್ಪಾಗಲ್ಲ. ನೀವು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, NEFT ಸೇರಿದಂತೆ ಇತರೆ ಪೇಮೆಂಟ್ ವಿಧಾನದ ಮೂಲಕ ಆದಾಯ ತೆರಿಗೆ ಸಲ್ಲಿಕೆ ಮಾಡುವ ಬದಲು E-Pay ಮೂಲಕ ಮಾಡಿದರೆ ತಕ್ಷಣ ನಿಮ್ಮ ಪಾವತಿ ಆದಾಯ ತೆರಿಗೆ ಇಲಾಖೆಗೆ ಸಲ್ಲುತ್ತದೆ.
ಸುಲಭ ವಿಧಾನದ ಮೂಲಕ ಆದಾಯ ತೆರಿಗೆ ಪಾವತಿ ಮಾಡಲು E-Pay ಬೆಸ್ಟ್ ಅನ್ನುವ ಆದಾಯ ತೆರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಇತರೆ ಪೇಮೆಂಟ್ ವಿಧಾನದ ಮೂಲಕ ನೀವು ಆದಾಯ ತೆರಿಗೆ ಪಾವತಿ ಮಾಡಿದರೆ ತಕ್ಷಣ ನೀವು ಸಲ್ಲಿಸುವ ಹಣ ಆದಾಯ ತೆರಿಗೆ ಇಲಾಖೆಗೆ ಹೋಗುವುದಿಲ್ಲ, ಆದರೆ E-Pay ಮೂಲಕ ಮಾಡಿದರೆ ತಕ್ಷಣ ನೀವು ಮಾಡಿದ ಪೇಮೆಂಟ್ ಆದಾಯ ತೆರಿಗೆ ಇಲಾಖೆಯ ಖಾತೆಗೆ ಹೋಗುತ್ತದೆ. ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಆಯ್ಕೆಯಲ್ಲಿ E-Pay ಸಿಸ್ಟಮ್ ಕಾಣಬಹುದು.
ನೀವು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ನಲ್ಲಿ ಲಾಗಿನ್ ಆದನಂತರ ನೀವು ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಮೊಬೈಲ್ OTP ಮೂಲಕ ನಮೂದಿಸಬೇಕಾಗುತ್ತದೆ. ಮೊಬೈಲ್ OTP ನಮೂದಿಸಿದ ನಂತರ ನೀವು E-Pay ಸಿಸ್ಟಮ್ ನಲ್ಲಿ ಇನ್ಕಮ್ ಟ್ಯಾಕ್ಸ್ ಪೇಮೆಂಟ್ ಮಾಡಬಹುದು. ಇನ್ನು ನೀವು E-Pay ಮೂಲಕ ಆದಾಯ ತೆರಿಗೆ ಪಾವತಿ ಮಾಡಿದರೆ ನೀವು ಸಲ್ಲಿಸಿದ ಆದಾಯ ತೆರಿಗೆ ನೇರವಾಗಿ ಆದಾಯ ತೆರಿಗೆ ಇಲಾಖೆಗೆ ಸಲ್ಲುತ್ತದೆ ಮತ್ತು ನಿಮ್ಮ ಪೇಮೆಂಟ್ ಸುರಕ್ಷಿತ ಕೂಡ ಆಗಿರುತ್ತದೆ.