Sim Card Rules: ರಿಚಾರ್ಜ್ ಮಾಡದೆ ಸಿಮ್ ಎಷ್ಟು ದಿನ ಆಕ್ಟಿವ್ ಆಗಿ ಇಟ್ಟುಕೊಳ್ಳಬಹುದು, ಇಲ್ಲಿದೆ ನಿಯಮ

Airtel And Jio Sim Active Rules: ದೇಶದಲ್ಲಿ 2025 ರ ವರ್ಷದಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ಹೇಳಬಹುದು. ಹೌದು, ಬ್ಯಾಂಕಿಂಗ್ ಕ್ಷೇತ್ರ ಆಗಿರಬಹುದು, ವಾಣಿಜ್ಯ ಕ್ಷೇತ್ರ ಆಗಿರಬಹದು, ಕೃಷಿ ಕ್ಷೇತ್ರ ಆಗಿರಬಹುದು ಮತ್ತು ಟೆಲಿಕಾಂ ಕ್ಷೇತ್ರದಲ್ಲಿ ಆಗಿರಬಹುದು, ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕೆಲವು ಬದಲಾವಣೆ ಆಗಿರುವುದುನ್ನು ನಾವು ಗಮನಿಸಬಹುದು. ಇದರ ನಡುವೆ ಈಗ ಏರ್ಟೆಲ್ ಮತ್ತು ಜಿಯೋ ರಿಚಾರ್ಜ್ ಬೆಲೆ ಕೂಡ ಅಧಿಕವಾಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು ಮೂರೂ ಬಾರಿ ಏರ್ಟೆಲ್ ಮತ್ತು ಜಿಯೋ ರಿಚಾರ್ಜ್ ದರದವನ್ನು ಏರಿಕೆ ಮಾಡಿದೆ.

WhatsApp Group Join Now
Telegram Group Join Now

ಇದರ ನಡುವೆ ಸಿಮ್ ಆಕ್ಟಿವ್ ಆಗಿರಬೇಕು ಅಂದರೂ ಕೂಡ ನಾವು ರಿಚಾರ್ಜ್ ಮಾಡಿರಲೇಬೇಕು. ಈ ಹಿಂದೆ ರಿಚಾರ್ಜ್ ಇಲ್ಲದೆ ಇದ್ದಿದ್ದರೂ ಕೂಡ ಸಿಮ್ ಆಕ್ಟಿವ್ ಆಗಿ ಇರುತ್ತಿತ್ತು, ಆದರೆ ಈಗ ರಿಚಾರ್ಜ್ ಇಲ್ಲದೆ ಇದ್ದರೆ ಸಿಮ್ ಆಕ್ಟಿವ್ ಆಗಿ ಇರಲ್ಲ. ಇದರ ನಡುವೆ ಸಾಕಷ್ಟು ಜನರು ಏರ್ಟೆಲ್ ಮತ್ತು ಜಿಯೋ ಕಂಪನಿ ಬಳಿ ರಿಚಾರ್ಜ್ ಇಲ್ಲದೆ ಸಿಮ್ ಆಕ್ಟಿವ್ ಆಗ್ಗಿ ಇರಿಸಿಕೊಳ್ಳಬಹುದಾ ಅನ್ನುವುದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಹಾಗಾದರೆ ರಿಚಾರ್ಜ್ ಮಾಡದೆ ಸಿಮ್ ಆಕ್ಟಿವ್ ಆಗಿ ಇಟ್ಟುಕೊಳ್ಳಬಹುದಾ ಮತ್ತು ಇದರ ಬಗ್ಗೆ ಜಿಯೋ ಹಾಗು ಏರ್ಟೆಲ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ ಸಿಮ್ ರಿಚಾರ್ಜ್ ಮಾಡದೆ ಸಿಮ್ ಎಷ್ಟು ದಿನ ಆಕ್ಟಿವ್ ಇರಲಿದೆ…?
ನೀವು ಜಿಯೋ ಸಿಮ್ ಬಳಕೆದಾರರು ಆಗಿದ್ದರೆ, ನೀವು ರಿಚಾರ್ಜ್ ಮಾಡದೆ ಸಿಮ್ ಎಷ್ಟು ದಿನಗಳ ಕಾಲ ಆಕ್ಟಿವ್ ಇರಿಸಿಕೊಳ್ಳಬಹುದು ಅನ್ನುವುದರ ಬಗ್ಗೆ ಜಿಯೋ ಈಗ ಮಾಹಿತಿ ನೀಡಿದೆ. ಇನ್ನು ಜಿಯೋ ನೀಡಿರುವ ಮಾಹಿತಿಯ ಪ್ರಕಾರ, ಜಿಯೋ ಬಳಕೆದಾರರು ಸಿಮ್ ರಿಚಾರ್ಜ್ ಮಾಡದೆ 7 ದಿನಗಳ ಕಾಲ ಸಿಮ್ ಆಕ್ಟಿವ್ ಆಗಿ ಇರಿಸಿಕೊಳ್ಳಬಹಹುದಾಗಿದೆ. ಇನ್ನು ನೀವು ರಿಚಾರ್ಜ್ ಮಾಡದೆ ಇದ್ದರೆ ಹೊರಹೋಗುವ ಕರೆಗಳನ್ನು ಸ್ಥಗಿತ ಮಾಡಲಾಗುತ್ತದೆ.

ನಿಮ್ಮ ಸಿಮ್ ರಿಚಾರ್ಜ್ ಖಾಲಿಯಾದರೆ ನಿಮಗೆ 7 ದಿನ ಅವಕಾಶ ನೀಡಲಾಗುತ್ತದೆ ಮತ್ತು 7 ದಿನಗಳ ಯೋಜನೆ ಮುಕ್ತಾಯವಾದ ನಂತರ ನಿಮ ಹೊರಹೋಗುವ ಕರೆಗಳನ್ನು ಸ್ಥಗಿತ ಮಾಡಲಾಗುತ್ತದೆ. ಇನ್ನು 90 ದಿನಗಳ ಕಾಲ ನೀವು ರಿಚಾರ್ಜ್ ಮಾಡದೆ ಇದ್ದರೆ ನಿಮ್ಮ ನಿಮ್ ನಿಷ್ಕ್ರಿಯ ಮಾಡಲಾಗುತ್ತದೆ. 90 ದಿನಗಳ ಕಾಲ ನೀವು ರಿಚಾರ್ಜ್ ಮಾಡದೆ ಇದ್ದರೆ ನಿಮ್ಮ ಸಿಮ್ ಸುರಕ್ಷಿತವಾಗಿಲ್ಲ ಎಂದು ಜಿಯೋ ಪದೇಪದೇ ನಿಮಗೆ SMS ಕಳುಹಿಸುತ್ತದೆ ಮತ್ತು ನಿಮ್ಮ ಒಳಬರುವ ಎಲ್ಲಾ ಕರೆಗಳನ್ನು ಸ್ಥಗಿತ ಮಾಡುತ್ತದೆ.

ಏರ್ಟೆಲ್ ಸಿಮ್ ರಿಚಾರ್ಜ್ ಮಾಡದಿದ್ದರೆ ಎಷ್ಟು ದಿನ ಸಿಮ್ ಆಕ್ಟಿವ್ ಆಗಿರಲಿದೆ…?
ಏರ್ಟೆಲ್ ನಿಯಮದ ಪ್ರಕಾರ, ನೀವು ನಿಮ್ಮ ಸಿಮ್ ರಿಚಾರ್ಜ್ ಮುಗಿದ 15 ದಿನಗಳ ವರೆಗೆ ನಿಮಗೆ ಒಳಬರುವ ಕರೆಗಳಿಗೆ ಬೆಂಬಲ ನೀಡಲಾಗುತ್ತದೆ. ನೀವು ಏರ್ಟೆಲ್ ಸಿಮ್ ಬಳಕೆದಾರರಾಗಿದ್ದು ನೀವು 60 ಅಥವಾ 90 ದಿನಗಳ ಸಿಮ್ ಬಳಕೆ ಮಾಡದೆ ಇದ್ದರೆ ನಿಮ್ಮ ಸಿಮ್ ನಿಷ್ಕ್ರಿಯ ಮಾಡಲಾಗುತ್ತದೆ. ನಿಮ್ಮ ಸಿಮ್ ನಿಷ್ಕ್ರಿಯ ಮಾಡುವ ಮೊದಲು ಏರ್ಟೆಲ್ ನಿಮಗೆ ಪದೇಪದೇ SMS ಮೂಲಕ ಎಚ್ಚರಿಕೆ ನೀಡುತ್ತದೆ.

ಟೆಲಿಕಾಂ ನಿಯಮಗಳ ಪ್ರಕಾರ, ನಿಮ್ಮ ಸಿಮ್ ಆಕ್ಟಿವ್ ಆಗಿರಬೇಕು ಅಂದರೆ 90 ದಿನಗಳ ಒಳಗೆ ರಿಚಾರ್ಜ್ ಮಾಡುವುದು ಅಗತ್ಯವಾಗಿದೆ. 90 ದಿನಗಳ ಒಳಗೆ ನೀವು ಯಾವುದೇ ರಿಚಾರ್ಜ್ ಮಾಡದೆ ಇದ್ದರೆ ನಿಮ್ಮ ಸಿಮ್ ಸಿಮ್ ನಿಷ್ಕ್ರಿಯ ಮಾಡಲಾಗುತ್ತದೆ ಮತ್ತು ಆ ಸಿಮ್ ಆಕ್ಟಿವ್ ಆಗಿಲ್ಲ ಎಂದು ಶಾಶ್ವತವಾಗಿ ಕ್ಲೋಸ್ ಮಾಡುವ ಸದ್ಯ ಕೂಡ ಇರುತ್ತದೆ.

Leave a Comment