Private Schools: ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್, ರಾಜ್ಯದಲ್ಲಿ ಹೊಸ ರೂಲ್ಸ್ ಜಾರಿ

Private School Admission Rules Karnataka: ಈಗಿನ ಕಾಲದಲ್ಲಿ ಸರ್ಕಾರೀ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಹೇಳಬಹುದು. ಸರ್ಕಾರೀ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಸಿಗುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಕೆಲಸ ಸಿಗುವುದಿಲ್ಲ ಅನ್ನುವ ಕಾರಣಕ್ಕೆ ಸಾಕಷ್ಟು ಪೋಷಕರು ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದನ್ನು ಕಾಣಬಹುದು. ಇನ್ನು ಇದಕ್ಕೆ ಬಂಡವಾಳವಾಗಿ ಮಾಡಿಸಿಕೊಂಡ ಖಾಸಗಿ ಶಾಲೆಗಳು ಪ್ರಸ್ತುತ ವರ್ಷದಲ್ಲಿ ಶಾಲಾ ಮಕ್ಕಳ ಶುಲ್ಕವನ್ನು ಹೆಚ್ಚಳ ಮಾಡುವುದರ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸುವ ಎಲ್ಲ ಪೋಷಕರಿಗೆ ಆಘಾತ ನೀಡಿದೆ. ಈ ಕಾರಣಗಳಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದೋ ಅಥವಾ ಬೇಡವೋ ಅನ್ನುವ ಗೊಂದಲಕ್ಕೆ ಜನರು ಒಳಗಾಗಿದ್ದಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಶಾಲಾ ಮಕ್ಕಳ ಶುಲ್ಕ ಹೆಚ್ಚಳ ಮಾಡಿದ ಖಾಸಗಿ ಶಾಲೆಗಳು
ಹೌದು, ಖಾಸಗಿ ಶಾಲೆಗಳು ಮಕ್ಕಳ ವಾರ್ಷಿಕ ಶುಲ್ಕ ಹೆಚ್ಚಳ ಮಾಡುವುದು ಮಾತ್ರವಲ್ಲದೆ ಇತರೆ ಶುಲ್ಕಗಳನ್ನು ಕೂಡ ಪೋಷಕರಿಂದ ವಸೂಲಿ ಮಾಡುತ್ತಿದೆ. ಖಾಸಗಿ ಶಾಲೆಗಳಿಗೆ ಹಣವನ್ನು ಕೊಟ್ಟು ಪೋಷಕರು ಹೈರಾಣಾಗಿ ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಖಾಸಗಿ ಶಾಲೆಗಳಿಗೆ ಈ ದಬ್ಬಾಳಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗ ಮಹತ್ವದ ತೀರ್ಮಾನವನ್ನು ತಗೆದುಕೊಂಡಿದೆ ಎಂದು ಹೇಳಬಹುದು. ಖಾಸಗಿ ಶಾಲೆಗಳು ರಾಜಾರೋಷವಾಗಿ ಮಕ್ಕಳ ಪೋಷಕರಿಂದ ಹಣವನ್ನು ವಸೂಲಿ ಮಾಡುತ್ತಿರುವ ಕಾರಣ ರಾಜ್ಯ ಸರ್ಕಾರ ಈಗ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ
ಖಾಸಗಿ ಶಾಲೆಗಳು ಪೋಷಕರಿಂದ ಹಣ ವಸೂಲಿ ಮಾಡುತ್ತಿರುವ ಕಾರಣ 2025 -26 ನೇ ಖಾಸಗಿ ಮತ್ತು ಅನುದಾನಿಯ ಶಾಲೆಗಳ ಮಕ್ಕಳ ದಾಖಲಾತಿಯಲ್ಲಿ ಈಗ ಸರ್ಕಾರ ಬದಲಾವಣೆ ಮಾಡಿದೆ. ರಾಜ್ಯದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ನಿಯಮ ಪಾಲನೆ ಮಾಡದ ಶಾಲೆಗಳ ಮೇಲೆ ಕಠಿಣ ಕ್ರಮ ತಗೆದುಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಹಾಗಾದರೆ ಖಾಸಗಿ ಶಾಲೆಗಳಿಗೆ ಜಾರಿಗೆ ಬಂದಿರುವ ಹೊಸ ನಿಯಮಗಳು ಏನೆಂದು ನಾವೀಗ ತಿಳಿಯೋಣ.

* ಖಾಸಗಿ ಶಾಲೆಗಳಿಗೆ ಶೇಕಡಾ 50 ರಷ್ಟು ಸೀಟ್ ಗಳನ್ನೂ ಬಾಲಕಿಯರಿಗೆ ಮೀಸಲು ಇಡಬೇಕು ಮತ್ತು ಇನ್ನುಳಿದ ಸೀಟ್ ಗಳನ್ನೂ ಬಾಲಕರಿಗೆ ಹಂಚಬೇಕು.

* SC ಮತ್ತು ST ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದು ಕಡ್ಡಾಯ.

* OBC ವಿದ್ಯಾರ್ಥಿಗಳಿಗೂ ಕೂಡ ಅವರದ್ದೇ ಆದ ಮೀಸಲಾತಿ ನೀಡಬೇಕು ಮತ್ತು ಮೀಸಲಾತಿಯಲ್ಲಿ ಯಾವುದೇ ಮೋಸ ಮಾಡುವಂತಿಲ್ಲ.

* ಶಾಲೆಯ ಶೈಕ್ಷಣಿಕ ವರ್ಷದ ಶುಲ್ಕದ ವಿವರವನ್ನು ಮುಂಚಿತವಾಗಿ ಪ್ರಕಟಿಸಬೇಕು ಮತ್ತು ಶುಲ್ಕ ಹೊರತುಪಡಿಸಿ ಹೆಚ್ಚು ಹಣವನ್ನು ಪೋಷಕರಿಂದ ಪಡೆಯುವಂತಿಲ್ಲ.

* ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವ ಶಾಲೆಗಳ ವಿರುದ್ಧ ಕ್ರಮ ಕೈಕೊಳ್ಳಲು ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಲಾಗಿದೆ. ಯಾವುದೇ ಶುಲ್ಕ ಪಡೆದರೆ ಅದಕ್ಕೆ ಸರಿಯಾದ ಕಾರಣ ಮತ್ತು ರಸೀದಿ ನೀಡುವುದು ಕಡ್ಡಾಯ.

* ಶಾಲಾ ಮಕ್ಕಳ ದಾಖಲಾತಿ ಸಮಯದಲ್ಲಿ ಮಕ್ಕಳು ಮತ್ತು ಅವರ ಪೋಷಕರನ್ನು ಸಂದರ್ಶನ ಮಾಡುವುದು ನಿಷೇಧ ಮಾಡಲಾಗಿಲ್ಲ ಮತ್ತು ಎಂದಿನಂತೆ ಜಾರಿಯಲ್ಲಿದೆ.

* CBSE ಮತ್ತು ICSE ಪಠ್ಯಕ್ರಮ ಪಾಲನೆ ಮಾಡುವ ಶಾಲೆಗಳು ಮಂಡಳಿಯ ನಿಯಮಗಳ ಜೊತೆ ಸರ್ಕಾರೀ ನಿಯಮ ಕೂಡ ಪಾಲನೆ ಮಾಡಬೇಕು.

* ಶಾಲೆಯ ಶುಲ್ಕವ ವಿವರವನ್ನು ಕಡ್ಡಾಯವಾಗಿ ಶಾಲೆಯ ವೆಬ್ಸೈಟ್ ಅಥವಾ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು.

* ಶಾಲಾ ಮಂಡಳಿ ನಿಗದಿಪಡಿಸಿದ ಶುಲ್ಕ ಹೊರತುಪಡಿಸಿ ಇತರೆ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡುವಂತಿಲ್ಲ.

* ಶೇಕಡಾ 25 ರಷ್ಟು RET ಸೀಟ್ ಗಳನ್ನೂ ಮಿಡಲು ಇಡಬೇಕು

* ಶೇಕಡಾ 50 ರಷ್ಟು ಸೀಟ್ ಗಳನ್ನೂ SC ಮತ್ತು ST ವಿದ್ಯಾರ್ಥಿಗಳಿಗೆ ಮೀಸಲು ಇಡಬೇಕು.

Leave a Comment