What Is Indus Water Treaty: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಿಂದ ಹಲವು ಪ್ರಾಣ ಕಳೆದುಕೊಂಡಿದ್ದಾರೆ. ಹೌದು, ಮೊನ್ನೆ ಪಾಕಿಸ್ತಾನದ ಉಗ್ರರವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಕ್ಕೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದಾಳಿಮಾಡಿ ಕೇವಲ ಹಿಂದೂ ಪುರುಷರನ್ನು ಬಲಿ ತಗೆದುಕೊಂಡಿದ್ದಾರೆ. ಪಾಕಿಸ್ತಾನದ ಉಗ್ರರ ಈ ಹೀನ ಕೃತ್ಯಕ್ಕೆ ಬರಿ ಭಾರತ ಮಾತ್ರವಲ್ಲದೆ ಹಲವು ದೇಶದವರು ಸಂತಾಪವನ್ನು ಸೂಚಿಸಿದ್ದಾರೆ. ಇದರ ನಡುವೆ ಭಾರತ ಸರ್ಕಾರ ಈಗ ಭದ್ರತಾ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತಗೆದುಕೊಂಡಿದೆ ಮತ್ತು ಸಿಂಧೂ ನದಿ ಒಪ್ಪಂದವನ್ನು ರದ್ದುಮಾಡಲು ತೀರ್ಮಾನವನ್ನು ತಗೆದುಕೊಂಡಿದೆ. ಹಾಗಾದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡುವೆ ಈ ಇಂಡಸ್ ನದಿ ಒಪ್ಪಂದ ಏನು ಮತ್ತು ಏಕೆ ಒಪ್ಪಂದ ಮಾಡಿಕೊಳಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಭಾರತ ಪಾಕಿಸ್ತಾನದ ಸಿಂಧೂ ನದಿ ಒಪ್ಪಂದ (Indus Water Treaty)
1960 ನೇ ಇಸವಿಯಲ್ಲಿ ಭಾರತ ಸರ್ಕಾರ ಮತ್ತು ಪಾಕಿಸ್ತಾನ ಸರ್ಕಾರ ಈ ಸಿಂಧೂ ನದಿ ಒಪ್ಪಂದ ಮಾಡಿಕೊಂಡಿದೆ. ಸಿಂಧೂ ನದಿ ಚೀನಾ ದೇಶದಲ್ಲಿ ಹುಟ್ಟಿ ನಂತರ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಈ ಸಿಂಧೂ ನದಿ ಒಪ್ಪಂದ ಆದರೆ, ಭಾರತದಿಂದ ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿಯುವ ಕಾರಣ 1960 ನೆಹರು ಮತ್ತು ಅಯೂಬ್ ಖಾನ್ ಅವರ ಮಧ್ಯಸ್ಥಿಕೆಯಲ್ಲಿ ಈ ಇಂಡಸ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಿಂಧೂ ನದಿ ಪಾಕಿಸ್ತಾನದ ಜೀವನದಿ ಆಗಿದೆ ಮತ್ತು ಸಿಂಧೂ ನದಿಯಿಂದಲೇ ಪಾಕಿಸ್ತಾನದ ಹಲವು ಕೆಲಸ ನಡೆಯುತ್ತಿದೆ.
ಸಿಂಧೂ ನದಿ ಒಪ್ಪಂದ ರದ್ದಾದರೆ ಏನಾಗುತ್ತದೆ
ಪಾಕಿಸ್ತಾನಕ್ಕೆ ಸಿಂಧೂ ನಾಡು ಜೀವನದಿಯಾಗಿದೆ ಮತ್ತು ಪಾಕಿಸ್ತಾನ ಪ್ರಮುಖವಾಗಿ ಸಿಂಧೂ ನದಿ ನೀರಿನ ಮೇಲೆ ಅವಲಂಭಿತವಾಗಿದೆ ಎಂದು ಹೇಳಬಹುದು. ಇನ್ನು ಪಾಕಿಸ್ತಾನದಲ್ಲಿರುವ ಬಹುತೇಕ ಎಲ್ಲ ಮನೆಗಳಿಗೆ, ಕಾರ್ಖಾನೆಗಳಿಗೆ ಮತ್ತು ವಿದ್ಯುತ್ ಸ್ಥಾವರಗಳಿಗೆ ಈ ಸಿಂಧೂ ನದಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಸಿಂಧೂ ನದಿ ನೀರು ಹಲವು ಉಪನದಿಗಳ ಮೂಲಕ ಬಹುತೇಕ ಪಾಕಿಸ್ತಾನಕ್ಕೆ ಹರಿಯುತ್ತದೆ ಮತ್ತು ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಾರದೆ ಇದ್ದರೆ ಅಲ್ಲಿನ ಜನರು ಮನೆ ಬಳೆಕೆಗೆ, ಕೃಷಿಗೆ ಮತ್ತು ಕಾರ್ಖಾನೆಗಳು ನೀರಿಲ್ಲದೆ ಪರದಾಡುತ್ತಾರೆ.
ಪಾಕಿಸ್ತಾನದಲ್ಲಿ ಹೆಚ್ಚು ಭತ್ತ, ಗೋದಿ ಮತ್ತು ಹತ್ತಿಯನ್ನು ಬೆಳೆಯಲಾಗುತ್ತದೆ ಮತ್ತು ಈ ಬೆಳೆಗಳಿಗೆ ಶೇಕಡಾ 76 ರಷ್ಟು ನೀರನ್ನು ಸಿಂಧೂ ನದಿಯಿಂದಲೇ ಪಡೆಯಲಾಗುತ್ತದೆ. ಭಾರತದ ಸರ್ಕಾರ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ರದ್ದುಮಾಡಿದ ಕಾರಣ ಅಲ್ಲಿನ ಲಕ್ಷಾಂತರ ಜನರು ನೀರಿಗಾಗಿ ಪರದಾಡುವುದು ಖಚಿತ. 1960 ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಅಂದಿನ ಭಾರತದ ಪ್ರಧಾನಿ ನೆಹರು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರ ಮುಖಾಮುಖಿಯಲ್ಲಿ ಈ ಸಿಂಧೂ ನದಿ ಒಪ್ಪಂದ ಮಾಡಿಕೊಳ್ಳಲಾಗಿದೆ.
1960 ರಿಂದ ಇಲ್ಲಿಯ ತನಕ ಪಾಕಿಸ್ತಾನ ಸಿಂಧೂ ನದಿ ನೀರು ಪಡೆಯುತ್ತ ಬಂದಿದೆ. ಭಾರತ ಶೇಕಡಾ 20 ರಷ್ಟು ನೀರನ್ನು ಸಿಂಧೂ ನದಿಯಿಂದ ಪಡೆದರೆ ಶೇಕಡಾ 80 ರಷ್ಟು ನೀರನ್ನು ಪಾಕಿಸ್ತಾನ ಪಡೆದುಕೊಳ್ಳುತ್ತದೆ. ಪಾಕಿಸ್ತಾನದಲ್ಲಿ ವಾರ್ಷಿಕವಾಗಿ ಶೇಕಡಾ 220mm ಮಳೆಯಾಗುತ್ತದೆ ಮತ್ತು ಪಾಕಿಸ್ತಾನದ ಒಂದು ಬರಪೀಡಿತ ಬಡ ದೇಶ ಎಂದು ಹೇಳಿದರೆ ತಪ್ಪಾಗಲ್ಲ. ಪಾಕಿಸ್ತಾನದಲ್ಲಿ ಹೇರಳವಾದ ನೀರಿನ ಸಮಸ್ಯೆ ಇರುವ ಕಾರಣ ಈ ಚೀನಾ ದೇಶದಿಂದ ಭಾರತಕ್ಕೆ ಬಂದು ನಂತರ ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿಯುವ ಕಾರಣ ಭಾರತ ಮತ್ತು ಪಾಕಿಸ್ತಾನ ಈ ಸಿಂಧೂ ನದಿ ಒಪ್ಪಂದ ಮಾಡಿಕೊಂಡಿದೆ.
ಪಾಕಿಸ್ತಾನದ ಎಷ್ಟೇ ಬಾರಿ ಪಾಕಿಸ್ತಾನದ ಮೇಲೆ ದಾಳಿ ಮಾಡಿದರು ಕೂಡ ಭಾರತ ಸಿಂಧೂ ನದಿ ಒಪ್ಪಂದವನ್ನು ಹಿಂದಕ್ಕೆ ತಗೆದುಕೊಂಡಿರಲಿಲ್ಲ ಮತ್ತು ಅದಕ್ಕೆ ಕಾರಣ ಭಾರತಕ್ಕೆ ಪಾಕಿಸ್ತಾನದ ಜನರ ಮೇಲೆ ಇರುವ ಕನಿಕರ ಆಗಿದೆ. ಆದರೆ ಪಾಕಿಸ್ತಾನ ಈಗ ಭಾರತದ ಜನರನ್ನು ಹೀನವಾಗಿ ಬಲಿ ತಗೆದುಕೊಂಡ ಕಾರಣ ನರೇಂದ್ರ ಮೋದಿ ಸರ್ಕಾರ ಈಗ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡುವ ತೀರ್ಮಾನ ಮಾಡಿದೆ. ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಎಷ್ಟೇ ಕನಿಕರ ತೋರಿದರೂ ಕೂಡ ಪಾಕಿಸ್ತಾನ ಇಂತಹ ನೀಚ ಕೃತ್ಯ ಮಾಡುತ್ತಿರುವ ಕಾರಣ ಭಾರತ ಸರ್ಕಾರ ವಿಧಿಯಿಲ್ಲದೆ ಈಗ ಸಿಂಧೂ ನದಿ ಒಪ್ಪಂದ ಮುರಿಯುವ ತೀರ್ಮಾನ ಮಾಡಿದೆ.