Pakistan Google Seacrh History: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (Pahalgam) ನಲ್ಲಿ ಉಗ್ರರ ದಾಳಿಗೆ ಸುಮಾರು 28 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆ ಕುಟುಂಬದ ಜೊತೆ ಹೋದವರು, ಹನಿಮೂನ್ ಗಾಗಿ ಹೋದ ದಂಪತಿಗಳು ಸೇರಿದಂತೆ ಹಲವು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ನಡುವೆ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸಿಂಧು ನದಿ ಒಪ್ಪಂದ ಸೇರಿದಂತೆ ಹಲವು ರಾಜಕೀಯ ಒಪ್ಪಂದವನ್ನು ರದ್ದು ಮಾಡಿದೆ. ಭಾರತದ ಮೇಲೆ ಸದಾ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಈಗ ತಕ್ಕ ಶಾಸ್ತಿಯನ್ನು ನೀಡಲು ಮುಂದಾಗಿದೆ ಭಾರತ ಸರ್ಕಾರ ಎಂದು ಹೇಳಬಹುದು. ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ನಂತರ ಹೆಚ್ಚು ಪಾಕಿಸ್ತಾನಿಯರು ಹುಡುಕಾಡಿದ್ದು ಎಂದು ಅನ್ನುವುದರ ಬಗ್ಗೆ ಗೂಗಲ್ (Google) ಮಾಹಿತಿಯನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ನಡೆದ ನಂತರ ಪಾಕಿಸ್ತಾನಿಯರು ಗೂಗಲ್ ನಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಗ್ರರ ದಾಳಿ ನಂತರ ಪಾಕಿಸ್ತಾನದ ಜನರ ಗೂಗಲ್ ಸರ್ಚ್ ಏನು…?
ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಪಾಕಿಸ್ತಾನಕ್ಕೆ ಈಗ ನಡುಕ ಉಂಟಾಗಿದೆ ಎಂದು ಹೇಳಬಹುದು. ವಿಶ್ವದ ಅನೇಕ ದೇಶಗಳು ಈಗ ಭಾರತದ ಪರವಾಗಿ ನಿಂತಿದೆ ಮತ್ತು ಪಾಕಿಸ್ತಾನಕ್ಕೆ ಚೀಮಾರಿ ಹಾಕುತ್ತಿದೆ. ಇದರ ನಡುವೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಅನೇಕ ರಾಜಕೀಯ ಒಪ್ಪಂದವನ್ನು ರದ್ದು ಮಾಡುವುದರ ಮೂಲಕ ಪಾಕಿಸ್ತಾನಿ ಸರ್ಕಾರಕ್ಕೆ ಆಘಾತ ನೀಡಿದೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ನಂತರ ಪಾಕಿಸ್ತಾನಿಯರು ಹೆಚ್ಚು ಗೂಗಲ್ ನಲಿ ಮೋದಿಯವರ ಬಗ್ಗೆ ಸರ್ಚ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರವು ದಾಳಿ ಮಾಡಿ ಭಾರತೀಯರ ಪ್ರಾಣ ಕಸಿದುಕೊಂಡ ನಂತರ ಹೆಚ್ಚು ಹೆಚ್ಚು ಪಾಕಿಸ್ತಾನಿಯರು ಗೂಗಲ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗೂಗಲ್ ನಲ್ಲಿ ಹೆಚ್ಚು ಹುಡುಕಾಟ ಮಾಡಿದ್ದಾರೆ. ಇನ್ನು ಗೂಗಲ್ ನೀಡಿದ ವರದಿಯ ಪ್ರಕಾರ, ಪಾಕಿಸ್ತಾನಿಯರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ, ನರೇಂದ್ರ ಮೋದಿ, ಭಾರತ ಮತ್ತು ಪಾಕಿಸ್ತಾನದ ಸಿಂಧೂ ಒಪ್ಪಂದ, ಭಾರತೀಯ ವಾಯುಪಡೆ, ಭಾತದ ಸೇಡು ಸೇರಿದಂತೆ ಅನೇಕ ಬಗೆಯ ವಿಚಾರಗಳನ್ನು ಪಾಕಿಸ್ತಾನಿಯರು ಸರ್ಚ್ ಮಾಡುತ್ತಿದ್ದಾರೆ ಎಂದು ಗೂಗಲ್ ವರದಿಯಿಂದ ತಿಳಿದುಬಂದಿದೆ.
ಇನ್ನು ಪಾಕಿಸ್ತಾನದ ದೇಶದಲ್ಲಿ ಬಹುತೇಕ ಜನರು ಪಹಲ್ಗಾಮ್ ಅನ್ನುವ ಪದವನ್ನು ಗೂಗಲ್ ನಲ್ಲಿ ಅತೀ ಸರ್ಚ್ ಮಾಡಿದ್ದಾರೆ. ಇನ್ನು ಕೇವಲ Google ಮಾತ್ರವಲ್ಲದೆ ಟ್ವಿಟ್ಟರ್, ಇನ್ಸ್ಟಾಗ್ರಾಮ್, Facebook ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ವಿಷಯ ಬಹಳ ಚರ್ಚೆಗೆಯಾಗುತ್ತಿದೆ. ಅದೇ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದ ಅಮಿತ್ ಶಾ ಅವರ ಬಗ್ಗೆ ಸಾಕಷ್ಟು ಸರ್ಚ್ ಗಳು ನಾವು ಗೂಗಲ್ ನಡೆದಿರುವುದನ್ನು ಕಾಣಬಹುದು. ಅದೇ ರೀತಿಯಲ್ಲಿ ಸಿಂಧು ನದಿ ಒಪ್ಪಂದ ಅಂದರೆ ಎಂದು ಮತ್ತು ಸಿಂಧು ನದಿ ನೀರು ಪಾಕಿಸ್ತಾನಕ್ಕೆ ಬರದಿದ್ದರೆ ಏನಾಗುತ್ತದೆ ಎಂದು ಗೂಗಲ್ ನಲ್ಲಿ ಪಾಕಿಸ್ತಾನಿಯರು ಹೆಚ್ಚು ಹುಡುಕಾಟ ನಡೆಸಿದ್ದಾರೆ.