India and Pakistan trade relations: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ಡಾಲೊಯಲ್ಲಿ ಸುಮಾರು 28 ಮಂದಿ ಭಾರತೀಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆ ಬಂದವರು, ಹನಿಮೂನ್ ಗಾಗಿ ಬಂದವರು ಸೇರಿದಂತೆ ಸುಮಾರು 28 ಮಂದಿ ಪುರುಷರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ ಭಾರತ ಸರ್ಕಾರ ಈ ಹೀನ ಕೃತ್ಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಪ್ರತಿಜ್ಞೆ ಕೂಡ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹಲವು ವ್ಯಾಪಾರ ಸಂಬಂಧ ಈಗಾಗಲೇ ರದ್ದಾಗಿದ್ದು ಇದು ಪಾಕಿಸ್ತಾನದ ಮೇಲೆ ನೇರವಾಗಿ ಬಹಳ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸಿಂಧೂ ನದಿ ಒಪ್ಪಂದ ರದ್ದು ಮಾಡಿದ ಭಾರತ ಸರ್ಕಾರ
ಪಾಕಿಸ್ತಾನದ ಜೀವನದಿ ಅನಿಸಿಕೊಂಡಿದ್ದ ಸಿಂಧು ನದಿ ಒಪ್ಪಂದವನ್ನು ಭಾರತ ಸರ್ಕಾರ ರದ್ದು ಮಾಡುವುದರ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಆಘಾತ ನೀಡಿದೆ. 1960 ರಲ್ಲಿ ನೆಹರು ಸರ್ಕಾರದ ಆಡಳಿತದಲ್ಲಿ ಸಿಂಧು ನದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು, ಆದರೆ ಪಾಕಿಸ್ತಾನ ಪದೇಪದೇ ಭಾರತೀಯರ ಮೇಲೆ ಉಗ್ರರರ ದಾಳಿ ಮಾಡಿರುತ್ತಿರುವುದರ ಕಾರಣ ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕು ಅನ್ನುವ ಉಸ್ದ್ದೇಶದಿಂದ ಭಾರತ ಸರ್ಕಾರ ಸಿಂಧೂ ನದಿ ಒಪ್ಪಂದ ರದ್ದು ಮಾಡಿದೆ. ಇದರ ನಡುವೆ ಭಾರತ ಸರ್ಕಾರ ಪಾಕಿಸ್ತಾನದ ಜೊತೆಗೆ ಇರುವ ಎಲ್ಲಾ ವ್ಯಾಪಾರ ಸಂಬಂಧವನ್ನು ನಿಲ್ಲಿಸುವ ತೀರ್ಮಾನವನ್ನ ಮಾಡುತ್ತಿದೆ.
ಪಾಕ್ ವ್ಯಾಪಾರ ಸಂಬಂಧ ನಿಲ್ಲಿಸಿದರೆ ಯಾವ ವಸ್ತುಗಳು ದುಬಾರಿ ಆಗಲಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಸರ್ಕಾರ ಪಾಕಿಸ್ತಾನದ ಜೊತೆಗೆ ಇರುವ ವ್ಯಾಪಾರ ಸಂಬಂಧವನ್ನು ಇಲ್ಲಿಗೆ ನಿಲ್ಲಿಸುವ ತಾರಾಯಿ ಮಾಡುತ್ತಿದೆ. ಭಾರತ ಪಾಕಿಸ್ತಾನದ ಜೊತೆ ವ್ಯಾಪಾರ ಸಂಬಂಧ ನಿಲ್ಲಿಸಿದರೆ ಪಾಕಿಸ್ತಾನದ ಅರ್ಧಕ್ಕೆ ಅರ್ಧದಷ್ಟು ವಿನಾಶ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಭಾರತ ಪಾಕಿಸ್ತಾನದ ಜೊತೆ ವ್ಯಾಪಾರ ಸಂಬಂಧ ನಿಲ್ಲಿಸಿದರೆ ಭಾರತದಲ್ಲಿ ಕೆಲವು ವಸ್ತುಗಳ ಮೇಲೆ ಬೆಲೆ ಕೊಂಚ ಏರಿಕೆ ಆಗಲಿದೆ, ಆದರೆ ಇದರಿಂದ ಭಾರತಕ್ಕೆ ಯಾವುದೇ ನಷ್ಟ ಆಗುವುದಿಲ್ಲ.
* ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಕೆಲವು ಬಗೆಯ ಡ್ರೈ ಫ್ರೂಟ್ಸ್ ಗಳನ್ನೂ ಪಾಕಿಸ್ತಾನದದಿಂದ ಆಮದು ಮಾಡಿಕೊಳ್ಳುತ್ತದೆ, ಬಾದಾಮಿ, ಪಿಸ್ತಾ ಸೇರಿದಂತೆ ಕೆಲವು ಬಗೆಯ ಡ್ರೈ ಫ್ರೂಟ್ಸ್ ಗಳನ್ನೂ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಪಾಕಿಸ್ತಾನದಿಂದ ಡ್ರೈ ಫ್ರೂಟ್ಸ್ ಆಮದು ಮಾಡಿಕೊಳ್ಳುವುದು ರದ್ದಾದರೆ ಡ್ರೈ ಫ್ರೂಟ್ಸ್ ಬೆಲೆ ಕೊಂಚ ಏರಿಕೆ ಆಗಲಿದೆ, ಆದರೆ ಭಾರತ ಬೇರೆ ಬೇರೆ ದೇಶದಿಂದ ಡ್ರೈ ಫ್ರೂಟ್ಸ್ ಆಮದು ಮಾಡಿಕೊಳ್ಳುವ ಕಾರಣ ಇದರಿಂದ ಭಾರತಕ್ಕೆ ಅಷ್ಟೇನು ನಷ್ಟ ಆಗುವುದಿಲ್ಲ.
* ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಹೆಚ್ಚು ಹೆಚ್ಚು ಕಲ್ಲು ಉಪ್ಪುಗಳನ್ನು ಆಮದು ಮಾಡಿಕೊಳ್ಳುತ್ತದೆ. ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ವ್ಯಾಪಾರ ನಿಂತರೆ ಕಲ್ಲು ಉಪ್ಪಿನ ಬೆಲೆ ಕೊಂಚ ಅಧಿಕ ಆಗುವ ಸಾಧ್ಯತೆ ಇದೆ, ಆದರೆ ಭಾರತದಲ್ಲಿ ಕೂಡ ಕಲ್ಲು ಉಪ್ಪನ್ನು ಉತ್ಪಾದನೆ ಮಾಡಲಾಗುತ್ತದೆ.
* ಪಾಕಿಸ್ತಾನದಿಂದ ಭಾರತ ಆಪ್ಟಿಕಲ್ ಲೆನ್ಸ್ ಗಳನ್ನೂ ಆಮದು ಮಾಡಿಕೊಳ್ಳುತ್ತದೆ. ಈ ಆಪ್ಟಿಕಲ್ ಲೆನ್ಸ್ ಗಳನ್ನೂ ಕನ್ನಡಕಗಳಲ್ಲಿ ನಾವು ಕಾಣಬಹುದು. ಇನ್ನು ಈ ಆಪ್ಟಿಕಲ್ ಲೆನ್ಸ್ ಗಳನ್ನೂ ನಮ್ಮ ಭಾರತದಲ್ಲಿ ಕೂಡ ತಯಾರು ಮಾಡಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ವ್ಯಾಪಾರ ಸಂಬಂಧ ನಿಂತರೆ ಭಾರತದಲ್ಲಿ ಕೆಲವು ಸಮಯದ ವರೆಗೆ ಆಪ್ಟಿಕಲ್ ಲೆನ್ಸ್ ಬೆಲೆ ಕೊಂಚ ಏರಿಕೆ ಆಗಲಿದೆ.
* ಸಿಮೆಂಟ್, ಸುಣ್ಣ, ಹತ್ತಿ, ಸಾವಯುವ ರಾಸಾಯನಿಕಗಳು, ಕೆಲವು ಲೋಹದ ವಸ್ತುಗಳನ್ನು ಭಾರತ ಸರ್ಕಾರ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ಕಾರಣ ಕೆಲವು ಸಮಯಗಳ ವರೆಗೆ ಈ ವಸ್ತುಗಳ ಮೇಲೆ ಕೂಡ ಅಧಿಕವಾಗುವ ಸಾಧ್ಯತೆ ಇದೆ.