Gruha Lakshmi Pending Money Release: ಕಳೆದ ಮೂರೂ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ರಾಜ್ಯದ ಯಾವುದೇ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಹೌದು, ಸರ್ಕಾರದ ಕೆಲವು ತಾಂತ್ರಿಕ ದೋಷ ಮತ್ತು ಹೊಸ ಹಣಕಾಸು ವರ್ಷ ಆರಂಭದ ಕಾರಣ ಕಳೆದ ಮೂರೂ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ರಾಜ್ಯದ ಮಹಿಳೆಯರ ಖಾತೆಗೆ ಜಮಾ ಮಾಡಲು ರಾಜ್ಯ ಸರ್ಕಾರ ಕೈಯ್ಯಲ್ಲಿ ಸಾಧ್ಯವಾಗಿಲ್ಲ. ಈನಡುವೆ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಮುಂದಿನ ದಿನಗಳಲ್ಲಿ ನಮ್ಮ ಖಾತೆಗೆ ಜಮಾ ಆಗುತ್ತಾ ಅಥವಾ ಇಲ್ಲವಾ ಅನ್ನುವ ಅನುಮಾನವನ್ನು ಹೊರಹಾಕುತ್ತಿದ್ದಾರೆ. ಇನ್ನು ಈಗ ರಾಜ್ಯದ ಮಹಿಳೆಯರ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯದ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ನೀಡುವುದರ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಮಹಿಳೆಯರ ಖಾತೆಗೆ ನೇರವಾಗಿ 6000 ರೂ ಜಮಾ
ಹೌದು, ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿರುವ ರಾಜ್ಯದ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಮೂರೂ ತಿಂಗಳಲ್ಲಿ ಒಟ್ಟಾಗಿ ಮಹಿಳೆಯರ ಖಾತೆಗೆ ಜಮಾ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ ಮತ್ತು ಕೆಲವು ತಾಂತ್ರಿಕ ದೋಷಗಳು ಮತ್ತು ಹೊಸ ಹಣಕಾಸು ನೀತಿಯ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿದುಕೊಂಡಿದೆ. ಸದ್ಯ ಎಲ್ಲಾ ಸಮಸ್ಯೆ ನಿವಾರಣೆ ಆಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋನನೆಯ ಬಾಕಿ ಇರುವ ಮುತು ತಿಂಗಳ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.
ಮೇ ತಿಂಗಳ ಎರಡನೆಯ ವಾರದಲ್ಲಿ ಹಣ ಜಮಾ
ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ ಅನ್ನುವ ಪ್ರಶ್ನೆಗೆ ಉತ್ತರ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೇ ತಿಂಗಳ ಎರಡನೆಯ ವಾರದಲ್ಲಿ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮುಂದಿನ ದಿನಗಳಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ (Akka Co-Operative Society) ಮೂಲಕ ರಾಜ್ಯ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಅದೇ ರೀಯಲ್ಲಿ ಮಹಿಳೆಯರು ಬ್ಯಾಂಕ್ ಖಾತೆಯಲ್ಲಿ ಏನಾದರು ದೋಷಗಳು ಇದ್ದರೆ ತಕ್ಷಣ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಮಹಿಳೆಯರು ಬ್ಯಾಂಕ್ ಖಾತೆಯ ದೋಷ ಬಗೆಹರಿಸಿಕೊಳ್ಳಿ
ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಬ್ಯಾಂಕ್ ಖಾತೆಯಲ್ಲಿ ಏನಾದರು ದೋಷಗಳು ಇದ್ದರೆ ಅದನ್ನು ತಕ್ಷಣ ಬಗೆಹರಿಸಿಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
* ಬ್ಯಾಂಕ್ ಖಾತೆಗೆ KYC ಅಪ್ಡೇಟ್ ಮಾಡದ ಮಹಿಳೆಯರು ತಕ್ಷಣ KYC ಅಪ್ಡೇಟ್ ಮಾಡಿಸಿಕೊಳ್ಳಬೇಕು.
* ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸದ ಮಹಿಳೆಯರು ತಕ್ಷಣ NPCI ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.
* ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್, ಪಾನ್ ಸಂಖ್ಯೆ ಲಿಂಕ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು ತಕ್ಷಣ ಆ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬೇಕು.