ATM Rules Changes May 1st: ಏಪ್ರಿಲ್ ತಿಂಗಳು ಕಳೆದು ಮೇ ತಿಂಗಳು ಆರಂಭ ಆಗುತ್ತಿದೆ. ತಿಂಗಳು ಕಳೆದಂತೆ ಕೆಲವು ಬ್ಯಾಂಕಿಂಗ್ ನಿಯಮದಲ್ಲಿ ಹೊಸ ಅಪ್ಡೇಟ್ ಮತ್ತು ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗುತ್ತಿದೆ. ಅದೇ ರೀತಿಯಲ್ಲಿ ಈಗ SBI, HDFC ಮತ್ತು ICICI ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್ ಜಾರಿಗೆ ಬಂದಿದೆ ಮತ್ತು ಈ ನಿಯಮ ಎಲ್ಲಾ ಖಾತೆದಾರರಿಗೆ ಅನ್ವಯ ಆಗಲಿದೆ ಎಂದು ಹೇಳಬಹುದು. ಬ್ಯಾಂಕಿಂಗ್ ನಿಯಮದಲ್ಲಿ ಮೇ 1 ನೇ ತಾರೀಕಿನಿಂದ ಹೊಸ ರೂಲ್ಸ್ ಜಾರಿಗೆ ಬರುತ್ತಿದ್ದು ಇದು SBI, HDFC ಮತ್ತು ICICI ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಹೇಳಬಹುದು. SBI, HDFC ಮತ್ತು ICICI ಬ್ಯಾಂಕಿನಲ್ಲಿ ಖಾತೆ ಇದ್ದವರು ಮೇ 1 ನೇ ತಾರೀಕಿನಿಂದ ಹೊಸ ನಿಯಮ ಪಾಲನೆ ಮಾಡಬೇಕಾಗಿದೆ.
SBI, HDFC ಮತ್ತು ICICI ನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್
RBI ಈಗ ATM ನಿಯಮಗಳಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಮುಖ್ಯವಾಗಲಿ SBI, HDFC ಮತ್ತು ICICI ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಇದರ ಪರಿಣಾಮ ನೇರವಾಗಿ ಆಗಲಿದೆ ಎಂದು ಹೇಳಬಹುದು. ಮೇ 1 ನೇ ತಾರೀಕಿನಿಂದ ATM ಬಳಕೆಯ ಶುಲ್ಕದಲ್ಲಿ ಏರಿಕೆ ಆಗಲಿದೆ ಇದು ಬ್ಯಾಂಕ್ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ. SBI, HDFC ಮತ್ತು ICICI ಬ್ಯಾಂಕಿನ ATM ಇದ್ದವರು ಇನ್ನುಮುಂದೆ ಉಚಿತ ಮಿತಿಗಿಂತ ಅಧಿಕ ಬಾರಿ ATM ಮೂಲಕ ಹಣವನ್ನು ಹಿಂಪಡೆದರೆ ಮೊದಲಿಗಿಂತ ಅಧಿಕ ಶುಲ್ಕವನ್ನು ಪಾವತಿ ಮಾಡಬೇಕು.
SBI, HDFC ಮತ್ತು ICICI ಬ್ಯಾಂಕಿನ ATM ಶುಲ್ಕ ಹೆಚ್ಚಳ
ಈ ಹಿಂದೆ ಏಟಿಎಂ ಬಳಕೆದಾರರು ಉಚಿತ ಮಿತಿಗಿಂತ ಅಧಿಕ ಬಾರಿ ಏಟಿಎಂ ಬಳಕೆ ಮಾಡಿದರೆ ಪ್ರತಿ ವಹಿವಾಟಿನ ಮೇಲೆ 21 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿತ್ತು, ಆದರೆ ಮೇ 1 ನೇ ತಾರೀಕಿನಿಂದ ಅಧಿಕ ಶುಲ್ಕ ಪಾವತಿ ಮಾಡಬೇಕು. ಮೇ 1 ರಿಂದ ATM ಶುಲ್ಕ ಹೆಚ್ಚಳ ಆಗಲಿದೆ ಮತ್ತು ಪ್ರತಿ ವಹಿವಾಟಿನ ಮೇಲೆ 2 ಅಧಿಕ ಶುಲ್ಕ ಪಾವತಿ ಮಾಡಬೇಕು. ಗ್ರಾಹಕರು ಮಾಸಿಕ ಮಿತಿಯನ್ನು ಮೀರಿದ ನಂತರ ಅಧಿಕ ಶುಲ್ಕ ಪಾವತಿ ಮಾಡುವುದು ಕಡ್ಡಾಯ. ಹಿಂದೆ ಮಾಸಿಕ ಮಿತಿ ಮೀರಿದ ನಂತರ 21 ರೂ ಶುಲ್ಕ ಪ್ರತಿ ವಹಿವಾಟಿಗೆ ಪಾವತಿ ಮಾಡಬೇಕಾಗಿತ್ತು, ಆದರೆ ಮೇ 1 ನೇ ತಾರೀಕಿನಿಂದ 23 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿದೆ.
ಮೇ 1 ರಿಂದಲೇ ಈ ನಿಯಮ ದೇಶಾದ್ಯಂತ ಜಾರಿ
RBI ನೀಡಿರುವ ಮಾಹಿತಿಯ ಪ್ರಕಾರ ಮೇ 1 ನೇ ತಾರೀಕಿನಿಂದ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮೇ 1 ರಿಂದ ATM ಬಳಸುವ ಬ್ಯಾಂಕುಗಳ ಗ್ರಾಹಕರು ಮಿತಿಗಿಂತ ಅಧಿಕ ಬಾರಿ ATM ಮೂಲಕ ಹಣ ಪಡೆದರೆ ಅಥವಾ ATM ಮೂಲಕ ಯಾವುದೇ ರೀತಿಯ ವಹಿವಾಟು ಮಾಡಿದರೆ ಪ್ರತಿ ವಹಿವಾಟಿನ ಮೇಲೆ 23 ರೂಪಾಯಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು RBI ತನ್ನ ಆದೇಶದಲ್ಲಿ ತಿಳಿಸಿದೆ. ಅದೇ ರೀತಿಯಲ್ಲಿ ಮೆಟ್ರೋ ಪ್ರದೇಶ, ನಗರ ಪ್ರದೇಶ, ಗ್ರಾಮೀಣ ಪ್ರದೇಶ ಮತ್ತು ಹಳ್ಳಿ ಪ್ರದೇಶದ ಗ್ರಾಹಕರು ಉಚಿತ ಮಿತಿಯಲ್ಲಿ ಬದಲಾವಣೆ ಇದ್ದು ಗ್ರಾಹಕರು ಅದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ.