India Pakistan War: ಭಾರತ ಮತ್ತು ಪಾಕಿಸ್ತಾನ ಯುದ್ಧ ಬಗ್ಗೆ ಭವಿಷ್ಯ ನುಡಿದ ಕೊಡಿ ಶ್ರೀಗಳು, ಆತಂಕದಲ್ಲಿ ಜನರು

Kodi Mutt Swamiji About India And Pakistan War: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು (Kodi Mutt Shivananda Shivayogi Rajendra Swamiji) ಭವಿಷ್ಯ ನುಡಿಯುವುದರಲ್ಲಿ ಬಹಳ ಹೆಸರುವಾಸಿ ಎಂದು ಹೇಳಬಹುದು. ಕರೋನ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಸಮಯದಲ್ಲಿ ಭವಿಷ್ಯ ನುಡಿಯುವುದರ ಮೂಲಕ ಬಹಳ ಹೆಸರುವಾಸಿಯಾಗಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನಂತರ ಜಲಪ್ರಳಯ ಮತ್ತು ರಾಜ್ಯ ರಾಜಕಾರಣ ಮತ್ತು ದೇಶದ ರಾಜಕಾರಣದ ವಿಷಯವಾಗಿ ಭವಿಷ್ಯ ನುಡಿಯುವುದರ ಮೂಲಕ ಇನ್ನಷ್ಟು ಫೇಮಸ್ ಆಗಿದ್ದರು. ಇದರ ನಡುವೆ ಈಗ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದರ ಬಗ್ಗೆ ಮಾತನಾಡಿದ್ದು ದೊಡ್ಡ ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭಾರತ ಮತ್ತು ಪಾಕಿಸ್ತಾನದ ಯುದ್ಧದ ಬಗ್ಗೆ ನುಡಿದ ಭವಿಷ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯುದ್ಧ ಬಗ್ಗೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮಿಗಳು
ಹೌದು, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭಾರತ ಮತ್ತು ಪಾಕಿಸ್ತಾನದ ಯುದ್ಧ ನಡೆಯುತ್ತಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇನ್ನು ಯುದ್ಧ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ, ” ನಮ್ಮ ದೇಶದಲ್ಲಿ ಇಂದಿಗೂ ಮತ್ತು ಯಾವತ್ತೂ ಕೂಡ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು, ರಾಷ್ಟಪ್ರೇಮ ಮತ್ತು ದೇಶಪ್ರೇಮ ಮೌಲ್ಯಯುತವಾದದ್ದು. ಸರ್ಕಾರಗಳು ಮಾನವೀಯ ಮೌಲ್ಯಗಳಿಗೆ ಯಾವತ್ತೂ ಕೂಡ ವಿರುದ್ಧವಾಗಬಾರದು, ಸರ್ಕಾರ ಯಾವುದೇ ನಿರ್ಧಾರ ತಗೆದುಕೊಳ್ಳುವ ಮುನ್ನ ಸಮಸ್ತ ಭಾರತೀಯ ಜನರ ಒಪ್ಪಿಗೆ ತಗೆದುಕೊಂಡು ನಿರ್ಧಾರ ತಗೆದುಕೊಳ್ಳಬೇಕು” ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಾಧ್ಯಮದ ಮುಂದೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕೊಡಿ ಮಠದ ಶ್ರೀಗಳು, ಹಿಂದೆ ರಾಜರ ಕಾಲದಲ್ಲಿ ರಾಜರ ಅಕ್ಕ ಪಕ್ಕದಲ್ಲಿ ಗುರುಗಳು ಇರುತ್ತಿದ್ದರು ಮತ್ತು ಅವರ ಸಲಹೆಯ ಮೇಲೆ ರಾಜರು ಕೆಲವು ಅಗತ್ಯ ನಿರ್ಧಾರಗಳನ್ನು ತಗೆದುಕೊಳ್ಳುತ್ತಿದ್ದರು. ಈ ಕಾರಣಗಳಿಂದ ರಾಜರ ಕಾಲದ ಶಿಸ್ತು ಮತ್ತು ಶಾಂತಿ ಇರುತ್ತಿತ್ತು, ಆದರೆ ಈಗಿನ ಕಾಲದ ರಾಜಕೀಯದಲ್ಲಿ ಯಾವುದೇ ಗುರುಗಳು ಇಲ್ಲ, ಗುರುಗಳು ಇದ್ದರೂ ಅವರ ಅಭಿಪ್ರಾಯಕ್ಕೆ ಬೆಲೆ ಕೊಡುವವವರು ಕೆಲವರು ಮಾತ್ರ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಹೇಳಿದ್ದಾರೆ.

ಇನ್ನು ಯುದ್ಧದ ಬಗ್ಗೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ತಾವು ಶಾಂತಿಪರ ಎಂದು ಹೇಳಿದ್ದಾರೆ. ಭಾರತದಲ್ಲಿ ವಸ ಮಾಡುತ್ತಿರುವ ನಾವು ಮಾನವೀಯ ಮೌಲ್ಯಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ. ಜನರ ಹಿತಕ್ಕಾಗಿ ಧ್ಯಾನ ಮತ್ತು ಪೂಜೆ ಮಾಡುವುದು ಅನಿವಾರ್ಯ ಎಂದು ಸ್ವಾಮಿಗಳು ಹೇಳಿದ್ದಾರೆ. ಮಾನವ ಸಮಾಜದಲ್ಲಿ ಶಾಂತಿ ಇಲ್ಲದೆ ಇದ್ದರೆ ಗಾಳಿ, ಬಿರುಗಳು, ಪ್ರಕೃತಿ ವಿಕೋಪ ಮತ್ತು ಸುಮಾನಿಗಳು ಹೆಚ್ಚಾಗುತ್ತದೆ ಎಂದು ಸ್ವಾಮಿಗಳು ಹೇಳಿದ್ದಾರೆ. ಅದೇ ರೀತಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಭವಿಷ್ಯ ನುಡಿದಿದ್ದಾರೆ.

Leave a Comment