Railways Rules: AC ಮತ್ತು ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ದಂಡ ಖಚಿತ

New Railway Rules: ಏಪ್ರಿಲ್ ತಿಂಗಳು ಕಳೆದು ಮೇ ತಿಂಗಳು ಆರಂಭ ಆಗಿದೆ. ಇದರ ನಡುವೆ ದೇಶದಲ್ಲಿ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಹೌದು, ಮೇ 1 ನೇ ತಾರೀಕಿನಿಂದ ದೇಶದಲ್ಲಿ ಹಲವು ಬದಲಾವಣೆ ಜಾರಿಗೆ ಬರುತ್ತಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸದ್ಯ ಮೇ 1 ನೇ ತಾರೀಕಿನಿಂದ ರೈಲ್ವೆ ನಿಯಮಗಳಲ್ಲಿ ಕೂಡ ಕೆಲವು ಬದಲಾವಣೆ ಆಗುತ್ತಿದ್ದು ಜನರು ಅದರ ಕಡೆ ಗಮನ ಕೊಡುವುದು ಅನಿವಾರ್ಯವಾಗಿದೆ. ಮೇ 1 ನೇ ತಾರೀಕಿನಿಂದ ದೇಶದಲ್ಲಿ ರೈಲು ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ ಜಾರಿಗೆ ಬರುತ್ತಿದ್ದು ಇದು ರೈಲ್ವೇಸ್ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಾಗಾದರೆ ಮೇ 1 ನೇ ತಾರೀಕಿನಿಂದ ರೈಲ್ವೆ ನಿಯಮದಲ್ಲಿ ಆಗುತ್ತಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮೇ 1 ರಿಂದ ರೈಲು ಟಿಕೆಟ್ ನಿಯಮದಲ್ಲಿ ಬದಲಾವಣೆ
ನೀವು ಕೂಡ ಹೆಚ್ಚು ಹೆಚ್ಚು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ ನೀವು ನೀವು ರೈಲ್ವೆ ಟಿಕೆಟ್ ನಿಯಮದಲ್ಲಿ ಆದ ಈ ಬದಲಾವಣೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಉತ್ತಮ ಎಂದು ಹೇಳಬಹುದು. ಸ್ಲೀಪರ್ ಕೋಚ್ ಮತ್ತು AC ಕೋಚ್ ನಿಯಮದಲ್ಲಿ ಈಗ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೆಲವು ಪ್ರಯಾಣಿಕರು ವೈಟಿಂಗ್ ಲಿಸ್ಟ್ ಟಿಕೆಟ್ ಇಟ್ಟುಕೊಂಡು AC ಕೋಚ್ ಮತ್ತು ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಮಾಡುತ್ತಿದ್ದರು, ಆದರೆ ಇನ್ನುಮುಂದೆ AC ಕೋಚ್ ಮತ್ತು ಸ್ಲೀಪರ್ ಕೋಚ್ ನಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ.

ಇನ್ನುಮುಂದೆ ವೈಟಿಂಗ್ ಲಿಸ್ಟ್ ಇದ್ದರೆ ನೋ ಎಂಟ್ರಿ
ಹೌದು, ಇನ್ನುಮುಂದೆ ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದುಕೊಂಡು ಸ್ಲೀಪರ್ ಕೋಚ್ ಮತ್ತು AC ಕೋಚ್ ನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ಮೇ 1 ನೇ ತಾರೀಕಿನಿಂದ ದೇಶದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಲಿದೆ ಮತ್ತು ಜಾರಿಗೆ ಬರಲಿರುವ ನಿಯಮಗಳ ಪ್ರಕಾರ, AC ಕೋಚ್ ಮತ್ತು ಸ್ಲೀಪರ್ ಕೋಚ್ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಅವರಿಗೆ ದೊಡ್ಡ ಮೊತ್ತದ ದಂಡ ಹಾಕಲಾಗುತ್ತದೆ.

ಟಿಕೆಟ್ ಇಲ್ಲದಿದ್ದರೆ ಎಷ್ಟು ದಂಡ ವಿಧಿಸಲಾಗುತ್ತದೆ ಗೊತ್ತಾ…?
ಸಾಕಷ್ಟು ಜನರು ವೈಟಿಂಗ್ ಲಿಸ್ಟ್ ಟಿಕೆಟ್ ಇಟ್ಟುಕೊಂಡು ಸ್ಲೀಪರ್ ಕೋಚ್ ಮತ್ತು AC ಕೋಚ್ ನಲ್ಲಿ ಪ್ರಯಾಣ ಮಾಡುವವರಿಗೆ 1000 ರೂ ದಂಡ ಹಾಕಲು ಈಗ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಅದೇ ರೀತಿಯಲ್ಲಿ 1000 ರೂ ದಂಡ ಮಾತ್ರವಲ್ಲದೆ ಅಂತಹ ಪ್ರಯಾಣಿಕರನ್ನು ಜನರಲ್ ಭೋಗಿಗೆ ಕಳುಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದುಕೊಂಡು ಸಾಕಷ್ಟು ಜನರು ಇತರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸಾಕಷ್ಟು ಜನರು ರೈಲ್ವೆ ಇಲಾಖೆಗೆ ದೂರು ನೀಡಿದ್ದಾರೆ. ಈ ಕಾರಣಗಳಿಂದ ರೈಲ್ವೆ ಇನ್ನುಮುಂದೆ ವೈಟಿಂಗ್ ಲಿಸ್ಟ್ ಮತ್ತು ಜನರಲ್ ಟಿಕೆಟ್ ಪಡೆದುಕೊಂಡವರು AC ಕೋಚ್ ಅಥವಾ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಮಾಡುವಂತೆ ಇಲ್ಲ ಎಂದು ಆದೇಶ ಹೊರಡಿಸಿದೆ.

Leave a Comment