Rohit Sharma: ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟ್ ಆದನಂತರ ರೋಹಿತ್ ಮಾಡಿದ್ದೇನು ಗೊತ್ತಾ…? ನಿಜಕ್ಕೂ ಗ್ರೇಟ್

Rohit Sharma And Vaibhav Suryavanshi: ವೈಭವ್ ಸೂರ್ಯವಂಶಿ (Vaibhav Suryavanshi) ಸದ್ಯ ದೇಶದಲ್ಲಿ ಬಹಳ ಸುದ್ದಿಯಲ್ಲಿ ಇರುವ ಯುವಕ ಎಂದು ಹೇಳಬಹುದು. ಹೌದು, ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರನಾದ ವೈಭವ್ ಸೂರ್ಯವಂಶಿ ಅವರು ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 35 ಎಸೆತದಲ್ಲಿ 100 ರನ್ ಹೊಡೆಯುವುದರ ಮೂಲಕ IPL ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇನ್ನು ನಿನ್ನೆ ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಮುಂಬೈ ಇಂಡಿಯನ್ (Mumabi Indians) ನಡುವೆ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಶೂನ್ಯ ರನ್ ಗಳಿಗೆ ಔಟ್ ಆಗಿದ್ದಾರೆ, ಇದು ವೈಭವ್ ಸೂರ್ಯವಂಶಿ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ ಎಂದು ಹೇಳಬಹುದು. ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ 100 ರನ್ ಗಳ ಸೋಲು ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಬಂದಿದೆ.

WhatsApp Group Join Now
Telegram Group Join Now

ಶೂನ್ಯಕ್ಕೆ ಔಟ್ ವೈಭವ್ ಸೂರ್ಯವಂಶಿ
ಹೌದು, ಕಳೆದ ಪಂದ್ಯದಲ್ಲಿ ಶತಕ ಹೊಡೆದಿದ್ದ ವೈಭವ್ ಸೂರ್ಯವಂಶಿ ಅವರು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಶೂನ್ಯ ರನ್ನುಗಳಿಗೆ ಔಟ್ ಆಗುವುದರ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದಾರೆ. ಇನ್ನು ವೈಭವ್ ಸೂರ್ಯವಂಶಿ ಅವರು ಶೂನ್ಯ ರನ್ನುಗಳಿಗೆ ಔಟ್ ಆದ ನಂತರ ಭಾರತ ತಂಡದ ನಾಯಕ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ನಡೆದುಕೊಂಡ ರೀತಿ ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ. ವೈಭವ್ ಸೂರ್ಯವಂಶಿ ಅವರು ಔಟ್ ಆದನಂತರ ವೈಭವ್ ಸೂರ್ಯವಂಶಿ ಬಳಿ ಹೋದ ರೋಹಿತ್ ಶರ್ಮಾ ಒಂದೆರಡು ಮಾತುಗಳನ್ನು ಆಡಿದ್ದಾರೆ.

ಮೆಚ್ಚುಗೆಗೆ ಕಾರಣದ ರೋಹಿತ್ ಶರ್ಮಾ
ಹೌದು, ವೈಭವ್ ಸೂರ್ಯವಂಶಿ ಅವರು ವೈಭವ್ ಸೂರ್ಯವಂಶಿ ಔಟ್ ಆದನಂತರ 14 ವರ್ಷದ ಬಾಲಕನ ಬಳಿ ಮಾತನಾಡಿದ ರೋಹಿತ್ ಶರ್ಮಾ (Rohit Sharma) ಅವರು ಸಮಾಧಾನದ ಮಾತುಗಳನ್ನು ಮತ್ತು ಪ್ರೋತ್ಸಹದ ಮಾತುಗಳನ್ನು ಆಡಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರು ನಡೆದುಕೊಂಡ ರೀತಿಯನ್ನು ನೋಡಿದ ರವಿ ಶಾಸ್ತ್ರಿಯವರು ವೈಭವ್ ಸೂರ್ಯವಂಶಿಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಿಯುತ್ತಾರೆ ಎಂದು ಹೇಳಿದ್ದಾರೆ. ವೈಭವ್ ಸೂರ್ಯವಂಶಿ ಇನ್ನೂ ಕೂಡ ಯುವ ಆಟಗಾರ ಮತ್ತು ಆತ ಕಲಿಯಬೇಕಾದದ್ದು ಸಾಕಷ್ಟು ಇದೆ ಎಂದು ರವಿ ಶಾಸ್ತ್ರೀ ಕೂಡ ಹೇಳಿದ್ದಾರೆ.

ನಿಜವಾಯ್ತು ಸುನಿಲ್ ಗವಾಸ್ಕರ್ ಹೇಳಿದ ಮಾತು
ವೈಭವ್ ಸೂರ್ಯವಂಶಿ ಅವರ ಕೆಲವು ಸಮಯದಿಂದ ಮಾತನಾಡಿದ್ದ ಭಾರತದ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ಯಾರನ್ನು ಕೂಡ ಆಕಾಶಕ್ಕೆ ಏರಿಸಬಾರದು ಮತ್ತು ಅವರಿಗೆ ತರಬೇತಿ ಇನ್ನಷ್ಟು ಬೇಕು ಎಂದು ವೈಭವ್ ಸೂರ್ಯವಂಶಿ ಬಗ್ಗೆ ಕೆಲವು ಕಿವಿಮಾತು ಹೇಳಿದ್ದರು. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಸೊನ್ನೆ ಸುತ್ತಿ ಔಟ್ ಆದನಂತರ ಸುನಿಲ್ ಗವಾಸ್ಕರ್ ಅವರ ಮಾತುಗಳು ನಿಜವಾಗಿದೆ ಎಂದು ಸಾಕಷ್ಟು ಜನರು ಮಾತನಾಡಿದ್ದಾರೆ.

Leave a Comment