Vibhav Suryavanshi Gifted Car: ವೈಭವ್ ಸೂರ್ಯವಂಶಿ (Vaibhav Suryavanshi) ಸದ್ಯ ದೇಶದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇರುವ ಯುವ ಕ್ರಿಕೆಟ್ ಆಟಗಾರ ಎಂದು ಹೇಳಬಹುದು. ಹೌದು, ಗುಜರಾತ್ ನಡುವೆ ನಡೆದ ಪಂದ್ಯದಲ್ಲಿ ಕೇವಲ 35 ಎಸೆತಗಳಿಗೆ ಶತಕ ಭಾರಿಸುವುದರ ಮೂಲಕ ದೊಡ್ಡ ಸಾಧನೆ ಮಾಡಿದ್ದ ವೈಭವ್ ಸೂರ್ಯವಂಶಿ ಅವರು ಸದ್ಯ ಚಿಕ್ಕ ವಯಸ್ಸಿನಲ್ಲಿಯೇ ಕೋಟಿ ಕೋಟಿ ರೂ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ಅವರು ವಯಸ್ಸಿನ ವಿಷಯವಾಗಿ ಕೆಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ವೈಭವ್ ಸೂರ್ಯವಂಶಿ ಅವರು 13 ಕ್ಕೆ ಅಂಡರ್ 19 ಏಷ್ಯಾ ಕಪ್ ಪಂದ್ಯದಲ್ಲಿ ಕಾಣಿಸಿಕೊಂಡು ಸಾಕಷ್ಟು ಫೇಮಸ್ ಆಗಿದ್ದರು. ಇದರ ನಡುವೆ 1.1 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಪಾಲಾಗಿದ್ದ ವೈಭವ್ ಸೂರ್ಯವಂಶಿ ಅವರು ನಂತರ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಈಗ ಕೋಟಿ ಕೋಟಿ ಹಣವನ್ನು ಸಂಪಾಧನೆ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ನಿಜವಾದ ವಯಸ್ಸು ಎಷ್ಟು…?
ವೈಭವ್ ಸೂರ್ಯವಂಶಿ ಅವರು ತನ್ನ ವಯಸ್ಸು 14 ವರ್ಷ ಎಂದು ಎಲ್ಲಾ ಕಡೆಯಲ್ಲಿ ಹೇಳಿಕೊಂಡು ಬಂದಿದ್ದಾರೆ. ಆದರೆ ವೈಭವ್ ಸೂರ್ಯವಂಶಿ ಅವರಿಗೆ 16 ವರ್ಷ ವಯಸ್ಸು ಎಷ್ಟು ಸಾಕಷ್ಟು ಜನರು ಆರೋಪ ಮಾಡುತ್ತಿದ್ದಾರೆ. ಹೌದು, ಕಳೆದ ಎರಡು ವರ್ಷಗಳ ಹಿಂದೆ ವೈಭವ್ ಸೂರ್ಯವಂಶಿ ಅವರು ಒಂದು ವಿಡಿಯೋದಲ್ಲಿ ತನಗೆ 14 ವರ್ಷ ಹೇಳಿದ್ದರು, ಎರಡು ವರ್ಷದ ಹಿಂದೆ ಆತನಿಗೆ 14 ವರ್ಷವಾದ ಕಾರಣ ಈಗ ಆತನ ವಯಸ್ಸು 16 ವರ್ಷ ಎಂದು ಸಕಷ್ಟು ಜನರು ವೈಭವ್ ಸೂರ್ಯವಂಶಿ ಸುಳ್ಳು ಹೇಳಿದ್ದಾನೆ ಎಂದು ಆರೋಪ ಮಾಡಿದ್ದಾರೆ.
65 ಲಕ್ಷದ ಕಾರ್ ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿ
ಹೌದು, ವೈಭವ್ ಸೂರ್ಯವಂಶಿ ಅವರು ಗುಜರಾತ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ನಂತರ ವೈಭವ್ ಸೂರ್ಯವಂಶಿ ಅವರು ತಂಡದ ಮಾಲೀಕರಿಂದ 65 ಲಕ್ಷದ ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಷ್ಟು ದೊಡ್ಡ ಸಾಧನೆ ಮಾಡಿದ ಕಾರಣ ವೈಭವ್ ಸೂರ್ಯವಂಶಿ ಅವರು ಮುಂದಿನ ಅಂಡರ್ 19 ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ 65 ಲಕ್ಷದ ಕಾರ್ ಉಡುಗೊರೆಯಾಗಿ ಪಡೆದುಕೊಂಡ ವೈಭವ್ ಸೂರ್ಯವಂಶಿ ಒಂದು ಆಘಾತ ಎದುರಾಗಿದೆ.
ವೈಭವ್ ಸೂರ್ಯವಂಶಿ ಅವರಿಗೆ ಇನ್ನೂ ಕೂಡ 14 ವರ್ಷ ವಯಸ್ಸಾದ ಕಾರಣ 65 ಲಕ್ಷದ ಕಾರ್ ಉಡುಗೊರೆಯಾಗಿ ಪಡೆದುಕೊಂಡರು ಕೂಡ ಅದನ್ನು ಚಲಾನೆ ಮಾಡುವಂತೆ ಇಲ್ಲ. 18 ವರ್ಷಕ್ಕಿಂತ ಕೆಳಗಿನ ಜನರು ಭಾರತದಲ್ಲಿ ವಾಹನ ಚಾಲನೆ ಮಾಡುವುದು ನಿಷೇದ ಆಗಿದೆ. ಈ ಕಾರಣಗಳಿಂದ ವೈಭವ್ ಸೂರ್ಯವಂಶಿ ಅವರು ಕಾರ್ ಇದ್ದರೂ ಕೂಡ ಚಾಲನೆ ಮಾಡುವಂತೆ ಇಲ್ಲ. ಇನ್ನು ಸಾಕಷ್ಟು ಜನರು ಇಷ್ಟು ಚಿಕ್ಕ ಬಾಲಕನಿಗೆ ಅಷ್ಟು ದೊಡ್ಡ ಮೊತ್ತ ಕಾರ್ ಉಡುಗೊರೆ ಕೊಟ್ಟು ಆತನ ಪ್ರತಿಭೆ ಅಳೆದಿದ್ದು ಸರಿ ಅಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.