Kagiso Rabada Ban: ಕಗಿಸೊ ರಬಾಡ (Kagiso Rabada) ವಿಶ್ವದ ಖ್ಯಾತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಅನಿಸಿಕೊಂಡಿರುವ ಕಗಿಸೊ ರಬಾಡ ಅವರು ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಸುಮಾರು 10 ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದ ಕಗಿಸೊ ರಬಾಡ ಅವರು ಕೆಲವು ಪಂದ್ಯಗಳನ್ನು ಆಡಿದ ನಂತರ ಐಪಿಎಲ್ ನಿಂದ ಹಿಂದಕ್ಕೆ ಸರಿದು ತನ್ನ ದೇಶಕ್ಕೆ ಮರಳಿದ್ದಾರೆ. ಕಗಿಸೊ ರಬಾಡ ಅವರು ಏಕೆ ಐಪಿಎಲ್ ತೊರೆದರು ಮತ್ತು ಅವರಿಗೆ ಆಗಿದ್ದೇನು ಅನ್ನುವ ಪ್ರಶ್ನೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳ ತಲೆಯಲ್ಲಿ ಇತ್ತು. ಇನ್ನು ಈಗ ಜನರ ಪ್ರಶ್ನೆಗೆ ಕಗಿಸೊ ರಬಾಡ ಅವರೇ ಉತ್ತರೆ ನೀಡಿದ್ದಾರೆ ಮತ್ತು ಮಾಡಿದ ತಪ್ಪಿಗೆ ಕ್ಷಮೆ ಕೂಡ ಕೇಳಿದ್ದಾರೆ. ಕಗಿಸೊ ರಬಾಡ ಅವರನ್ನು ಎಲ್ಲಾ ರೀತಿಯ ಕ್ರಿಕೆಟ್ ನಿಂದ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ. ಹಾಗಾದರೆ ಕಗಿಸೊ ರಬಾಡ ಅವರು ಎಲ್ಲಾ ರೀತಿಯ ಕ್ರಿಕೆಟ್ ನಿಂದ ತಾತ್ಕಾಲಿಕವಾಗಿ ಬ್ಯಾನ್ ಮಾಡಿದ್ದು ಏಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರಿಕೆಟ್ ನಿಂದ ತಾತ್ಕಾಲಿಕವಾಗಿ ಬ್ಯಾನ್ ಆದ ಕಗಿಸೊ ರಬಾಡ
ಹೌದು, ಕಗಿಸೊ ರಬಾಡ ಅವರನ್ನು ಎಲ್ಲಾ ರೀತಿಯ ಕ್ರಿಕೆಟ್ ನಿಂದ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ. ಗುಜರಾತ್ ತಂಡದ ಪರವಾಗಿ ಐಪಿಎಲ್ ಆಡುತ್ತಿದ್ದ ಕಗಿಸೊ ರಬಾಡ ಅವರು ಮಾದಕ ದ್ರವ್ಯ ಸೇವನೆ ಮಾಡಿದ ಕಾರಣ ಕಗಿಸೊ ರಬಾಡ ಅವರನ್ನು ತಾತ್ಕಾಲಿಕವಾಗಿ ಎಲ್ಲಾ ರೀತಿಯ ಕ್ರಿಕೆಟ್ ನಿಂದ ಬ್ಯಾನ್ ಮಾಡಲು ನಿರ್ಧಾರ ತಗೆದುಕೊಳ್ಳಲಾಗಿದೆ. ಕಗಿಸೊ ರಬಾಡ ಅವರು ಮಾದಕ ದ್ರವ್ಯಗಳ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಕಗಿಸೊ ರಬಾಡ ಅವರು ಈ ಪರೀಕ್ಷೆಯಲ್ಲಿ ಫೇಲ್ ಆದಕಾರಣ ಕಗಿಸೊ ರಬಾಡ ಅವರು ಅರ್ಧಕ್ಕೆ ಐಪಿಎಲ್ ತೊರೆಯಬೇಕಾಗಿದೆ.
ಜನರ ಬಳಿ ಕ್ಷಮೆ ಕೇಳಿದ ಕಗಿಸೊ ರಬಾಡ
ಇಷ್ಟು ದಿನಗಳ ಕಾಲ ಕಗಿಸೊ ರಬಾಡ ಅವರು ಏಕೆ ಐಪಿಎಲ್ ನಿಂದ ಅರ್ಧಕ್ಕೆ ವಾಪಾಸ್ ಆಗಿದ್ದಾರೆ ಅನ್ನುವ ಪ್ರಶ್ನೆ ಸಾಕಷ್ಟು ಜನರಿಗೆ ಕಾಡುತ್ತಿತ್ತು. ಈ ತನ್ನ ದೇಶಕ್ಕೆ ಮರಳಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿರುವ ಕಗಿಸೊ ರಬಾಡ ಅವರು ನಾನು ಮಾಡಿದ ತಪ್ಪು ಏನು ಅನ್ನುವುದರ ಬಗ್ಗೆ ಮಾತನಾಡಿದ್ದಾರೆ. ಇನ್ನು ಮಾಧ್ಯಮದ ಮುಂದೆ ಮಾತನಾಡಿದ ಕಗಿಸೊ ರಬಾಡ ಅವರು ಮಾದಕ ದ್ರವ್ಯ ಸೇವನೆಯ ಕಾರಣ ತಾತ್ಕಾಲಿವಾಗಿ ನನ್ನನ್ನು ಎಲ್ಲಾ ರೀತಿಯ ಕ್ರಿಕೆಟ್ ನಿಂದ ಬ್ಯಾನ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಆಡುವುದು ನನಗೆ ಸಿಕ್ಕ ಅತೀ ದೊಡ್ಡ ಗೌರವ, ಆದರೆ ನಾನು ಅದನ್ನು ಹಗುರವಾಗಿ ಪರಿಗಣಿಸಿದ್ದೇನೆ. ನಿಷೇಧಿತ ಔಷಧಿಯನ್ನು ನಾವು ಸೇವನೆ ಮಾಡಿದ ಕಾರಣ ನನ್ನನು ತಾತ್ಕಾಲಿಕವಾಗಿ ಎಲ್ಲಾ ರೀತಿಯ ಕ್ರಿಕೆಟ್ ನಿಂದ ಬ್ಯಾನ್ ಮಾಡಲಾಗಿದೆ ಎಂದು ಕಗಿಸೊ ರಬಾಡ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಈ ತಪ್ಪು ಮಾಡಿದ್ದಕ್ಕೆ ನಾನು ಎಲ್ಲಾ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದು ಮಾಧ್ಯಮದ ಮುಂದೆ ಕ್ಷಮೆ ಕೇಳಿದ್ದಾರೆ ಕಗಿಸೊ ರಬಾಡ ಅವರು. ಗುಜರಾತ್ ತಂಡದ ಪರವಾಗಿ ಐಪಿಎಲ್ ಆಡುತ್ತಿದ್ದ ಕಗಿಸೊ ರಬಾಡ ಅವರು ಯಾವುದೇ ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಅನ್ನುವ ಉದ್ದೇಶದಿಂದ ಅವರು ಮಾದಕ ದ್ರವ್ಯದ ಮೊರೆ ಹೋಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
Kagiso Rabada confirms in a statement through South Africa’s players union that he is currently serving a provisional suspension after testing positive for a recreational drug pic.twitter.com/gUd9Uu1Vhu
— Ali Martin (@Cricket_Ali) May 3, 2025