Karnataka Electricity: ರಾಜ್ಯದ ರೈತರು ಬೇಸಿಗೆಯ ಸಮಯದಲ್ಲಿ ವಿದ್ಯುತ್ ಸಮಸ್ಯೆ ಅನುಭವಿಸುವುದನ್ನು ನಾವು ಪ್ರತಿ ವರ್ಷ ನೋಡುತ್ತಾ ಬಂದಿದ್ದೇವೆ. ಹೌದು ರಾಜ್ಯದಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಸಾಕಷ್ಟು ರೈತರು ಸರ್ಕಾರಕ್ಕೆ ಪ್ರತಿ ವರ್ಷ ಮನವಿಯನ್ನು ಕೂಡ ಸಲ್ಲಿಸುತ್ತಿದ್ದಾರೆ. ಹೌದು ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಮತ್ತು ರೈತರು ತಮ್ಮ ಹೊಲಕ್ಕೆ ಹಾಗು ತೋಟಕ್ಕೆ ಪಂಪ್ ಸೆಟ್ ನಲ್ಲಿ ನೀರುಬಿಡಲು ಬಿಡಲು ವಿದ್ಯುತ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಸದ್ಯ ರೈತರ ಈ ಸಮಸ್ಯೆ ಅರಿತುಕೊಂಡ ಸಚಿವರಾದ ಕೆ.ಜೆ ಜಾರ್ಜ್ ಅವರು ಈಗ ಕೃಷಿ ಪಂಪ್ ಸೆಟ್ ಹೊಂದಿರುವ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಕೃಷಿ ಪಂಪ್ ಸೆಟ್ ಹೊಂದಿರುವ ರಾಜ್ಯದ ರೈತರಿಗೆ ಗುಡ್ ನ್ಯೂಸ್
ರೈತರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಆಗಬೇಕು ಅನ್ನುವ ನಿಟ್ಟಿನಲ್ಲಿ ರಾಜ್ಯದ ಸಚಿವರಾದ ಕೆ.ಜೆ ಜಾರ್ಜ್ ಅವರು ಇನ್ನುಮುಂದೆ ರಾಜ್ಯದ ರೈತರಿಗೆ 7 ಘಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಲು ಆದೇಶ ಹೊರಡಿಸಿದ್ದಾರೆ. ಸಚಿವರ ಆದೇಶದ ಪ್ರಕಾರ ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಹಗಲಿನ ವೇಳೆಯಲ್ಲಿ ನಿರಂತರ 7 ಘಂಟೆಗಳ ಯಾವುದೇ ಸಮಸ್ಯೆಯಿಂದ ವಿದ್ಯುತ್ ಪಂಪ್ ಸೆಟ್ ಗಳನ್ನೂ ಬಳಸಬಹುದಾಗಿದೆ.

ಈ ರೀತಿಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್
ಸಚಿವರ ನೀಡುವ ಮಾಹಿತಿಯ ಪ್ರಕಟ, ತಾಂತ್ರಿಕ ಸಾಧ್ಯತೆ ಇಲ್ಲದ ಉಪಕೇಂದ್ರಗಳಲ್ಲಿ ಹಗಲಿನ ವೇಳೆ 4 ಘಂಟೆ ಮತ್ತು ರಾತ್ರಿಯ ಸಮಯದಲ್ಲಿ 3 ಘಂಟೆ ಸೇರಿ ರೈತರು ಒಟ್ಟಾಗಿ 7 ಘಂಟೆಗಳ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಮೂಲಕ ಕೃಷಿ ಪಂಪ್ ಸೆಟ್ ಗಳನ್ನೂ ಬಳಸಬಹುದು. ಮುಂದಿನ ದಿನಗಳಲ್ಲಿ ಅಂತರ್ಜಲ ಕಡಿಮೆಯಾದರೆ ವಿದ್ಯುತ್ ಸರಬರಾಜು ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.