Shah Rukh Khan And Salman: ಸಲ್ಮಾನ್ ಖಾನ್ ಟೈಗರ್ 3 ಮೂವಿಯಲ್ಲಿ ಶಾರುಖ್ ನಟನೆ, ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್.
Shah Rukh Khan And Salman Khan In Tiger 3 Movie: ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾ (Pathan Movie) ಬಾಲಿವುಡ್ ನಲ್ಲಿ ವಿಶೇಷ ದಾಖಲೆ ಮಾಡಿದೆ. ಇನ್ನು ಪಠಾಣ್ 1000 ಕೋಟಿ ಕ್ಲಬ್ ಸೇರುವ ಮೂಲಕ ಬಿಟೌನ್ ಗೆ ಜೀವ ನೀಡಿದೆ.
ಇದೀಗ ಸಲ್ಮಾನ್ ಖಾನ್ (Salman Khan) ನಟನೆಯ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಬೇಕು ಎಂದು ಸಲ್ಮಾನ್ ಖಾನ್ ಆಸೆ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಟೈಗರ್ 3 ಮೂವಿಯಲ್ಲಿ ಶಾರುಖ್ ನಟನೆ
ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ಅಥಿತಿ ಪಾತ್ರ ಮಾಡಿದ್ದರು. ಹಾಗಾಗಿ ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿ ಶಾರುಖ್ ಖಾನ್ ನಟಿಸಬೇಕು ಎಂದು ಸಲ್ಮಾನ್ ಖಾನ್ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ಅದೊಂದು ಅಥಿತಿ ಪಾತ್ರವಾಗಿದ್ದರೂ ಬಲು ಪ್ರೀತಿಯಿಂದಲೇ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರಂತೆ ಶಾರುಖ್ ಖಾನ್.
ನಟ ಶಾರುಖ್ ಖಾನ್ ನಿವೃತ್ತಿ ಜೀವನ
ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಪ್ರಮೋಷನ್ ವೇಳೆ ಶಾರುಖ್ ಖಾನ್ ಅವರಿಗೆ ನಿವೃತ್ತಿ ಬಗ್ಗೆ ಕೇಳಲಾಗಿದೆ. ನೀವು ನಿವೃತ್ತಿ ಪಡೆದ ನಂತರ ಬಾಲಿವುಡ್ ನಲ್ಲಿ ದೊಡ್ಡ ವ್ಯಕ್ತಿ ಯಾರು ಎಂದು ಶಾರುಖ್ ಗೆ ಕೇಳಲಾಗಿದೆ. ನಾನು ನಟನೆಯಿಂದ ನಿವೃತ್ತಿ ಪಡೆಯುವ ಮಾತೆ ಇಲ್ಲ.
ನನ್ನನ್ನು ಹೊರ ಹಾಕಬೇಕು. ಬಹುಶಃ ಆಗಲು ನಾನು ಮತ್ತಷ್ಟು ಹಾಟ್ ಆಗಿ ಕಮ್ ಬ್ಯಾಕ್ ಮಾಡುತ್ತೇನೆ ಎಂದಿದ್ದಾರೆ. ಅಂದರೆ ನಟ ಶಾರುಖ್ ಖಾನ್ ಅವರು ಹೇಳಿದ ಪ್ರಕಾರ ಅವರು ಇನ್ನು ಹೆಚ್ಚು ಸಿನಿಮಾಗಳನ್ನು ಮುಂದೆ ಮಾಡುತ್ತಾರೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ.
1000 ಕೋಟಿ ಗಳಿಸಿದ ಪಠಾಣ್ ಸಿನಿಮಾ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ವಿಶ್ವದಾದ್ಯಂತ 1000 ಕೋಟಿ ಗಳಿಸಿದೆ. ಪಠಾಣ್ ಸಿನಿಮಾ ಸಾಧನೆ ಮಾಡಿದ ಮೊದಲ ಹಿಂದಿ ಆವೃತ್ತಿಯ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಹೇಳಿದೆ.
ವಿಶ್ವದಾದ್ಯಂತ ಈವರೆಗಿನ ಚಿತ್ರದ ಒಟ್ಟು ಗಳಿಕೆಯೂ 1000 ಕೋಟಿಯಾಗಿದೆ ಭಾರತದಲ್ಲಿ 623 ಕೋಟಿ ಮತ್ತು ವಿದೇಶದಲ್ಲಿ 377 ಕೋಟಿ ಎಂದು ಸುದ್ದಿ ಹರಡಿದೆ.