Ultraviolette Tesseract e-scooter: ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರ್ ಖರೀದಿ ಮಾಡುತ್ತಿರುವುದನ್ನು ನಾವು ನೀವೆಲ್ಲರೂ ಗಮನಿಸಬಹುದು. ಇದರ ನಡುವೆ ಹಲವು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ತಯಾರಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ ಈಗ ಇದರ ನಡುವೆ ಇನ್ನೊಂದು ಹೊಸ ಮಾದರಿಯ ಮತ್ತು ವಿವಿಧ ವಿಶೇಷತೆ ಇರುವ ಇನ್ನೊಂದು ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗಲು ತಯಾರಾಗಿದೆ ಮತ್ತು ಈ ಸ್ಕೂಟರ್ ಖರೀದಿಗೆ ಸಾಕಷ್ಟು ಜನರು ಕಾದು ಕುಳಿತ್ತಿದ್ದಾರೆ.
ಭಾರತದಲ್ಲಿ ಲಾಂಚ್ ಆಗಲಿದೆ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್
ಹೌದು, ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಈಗ ಭಾರತದಲ್ಲಿ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಅನ್ನು ಲಾಂಚ್ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದೆ. ಇನ್ನು ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಜನರು ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿದ್ದು ಈ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆದನಂತರ ದಾಖಲೆಯ ಮಾರಾಟ ಆಗಲಿದೆ ಎಂದು ಕಂಪನಿ ಹೇಳಿದೆ.

ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಬೆಂಗಳೂರು ಮೂಲದ ಈ ಅಲ್ಟ್ರಾವೈಲೆಟ್ ಕಂಪನಿ ಈ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಭಾರತದಲ್ಲಿ ಲಾಂಚ್ ಮಾಡುತ್ತಿದೆ. ಇನ್ನು ಈ ಸ್ಕೂಟರ್ ಬೆಲೆ ಸುಮಾರು 1.45 ಲಕ್ಷ ರೂ ಎಂದು ಅಂದಾಜು ಮಾಡಲಾಗಿದೆ. ಮೊದಲು ಮಾರಾಟ ಆಗುವ 10000 ಸ್ಕೂಟರ್ ಗೆ ರಿಯಾಯಿತಿ ಕೂಡ ಲಭ್ಯವಿದ್ದು 1.20 ಲಕ್ಷ ರೂ ನಲ್ಲಿ ಖರೀದಿ ಮಾಡಬಹುದು. ಮೊದಲ 10000 ಗ್ರಾಹಕರಿಗೆ ಸುಮಾರು 25 ಸಾವಿರ ರೂ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್
2026 ರ ಆರಂಭದಲ್ಲಿ ಈ ಸ್ಕೂಟರ್ ಮಾರಾಟ ಆರಂಭ ಆಗಲಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಆನ್ಲೈನ್ ಬುಕಿಂಗ್ ಆರಂಭ ಆಗಲಿದೆ. ಇನ್ನು ಗ್ರಾಹಕರು ವಿವಿಧ ಬ್ಯಾಟರಿ ಆಯ್ಕೆಯಲ್ಲಿ ಸ್ಕೂಟರ್ ಖರೀದಿ ಮಾಡಬಹುದು. 3.5 kWh ಬ್ಯಾಟರಿ ಬ್ಯಾಟರಿ ಇರುವ ಸ್ಕೂಟರ್ ಖರೀದಿ ಮಾಡಿದರೆ 162 Km ಮೈಲೇಜ್ ಇರುವ ಸ್ಕೂಟರ್ ಖರೀದಿ ಮಾಡಬಹುದು. ಇನ್ನು 5 kWh ಬ್ಯಾಟರಿ ಇರುವ ಸ್ಕೂಟರ್ ಖರೀದಿ ಮಾಡಿದರೆ ನೀವು 220 Km ಮೈಲೇಜ್ ಪಡೆದುಕೊಳ್ಳಬಹುದು. 6 kWh ಬ್ಯಾಟರಿ ಇರುವ ಸ್ಕೂಟರ್ ಖರೀದಿ ಮಾಡಿದರೆ 261 Km ತನಕ ಮೈಲೇಜ್ ಪಡೆದುಕೊಳ್ಳಬಹುದು.
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ನ ಎರಡು ಚಕ್ರಗಳು ABS ಸಿಸ್ಟಮ್ ಬ್ರೆಕೆ ಒಳಗೊಂಡಿದೆ ಮತ್ತು ನೀವು ಈ ಸ್ಕೂಟರ್ ನಲ್ಲಿ ದೊಡ್ಡದಾದ ಡಿಸ್ಪ್ಲೇ ಕೂಡ ನೋಡಬಹುದು. ಈ ಸ್ಕೂಟರ್ ನೇವಿಗೇಶನ್ ಮತ್ತು ಟ್ರಾಕರ್ ಕೂಡ ನೋಡಬಹುದು. ಅದೇ ರೀತಿಯಲ್ಲಿ 34 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಕೂಡ ಈ ಸ್ಕೂಟರ್ ನಲ್ಲಿ ಲಭ್ಯವಿದೆ. ಮೊಬೈಲ್ ಚಾರ್ಜಿಂಗ್ ಪೋರ್ಟ್ ಕೂಡ ಲಭ್ಯವಿದ್ದು ಹೈ ಸ್ಪೀಡ್ ನಲ್ಲಿ ಮೊಬೈಲ್ ಚಾರ್ಜ್ ಕೂಡ ಮಾಡಬಹುದು. ಪಾರ್ಕಿಂಗ್ ಸಿಸ್ಟಮ್ ಕೂಡ ಇದ್ದು ನೀವು ಈ ಸ್ಕೂಟರ್ ನಲ್ಲಿ LED ಹೆಡ್ ಲೈಟ್ ಕೂಡ ನೋಡಬಹುದು.