UPI New Rules: ದೇಶದಲ್ಲಿ ಏಪ್ರಿಲ್ 1 ನೇ ತಾರೀಕಿನಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಹೌದು, ದೇಶದಲ್ಲಿ ಡಿಜಿಟಲ್ ವಂಚನೆಗಳು (Digital Fraud) ಹೆಚ್ಚಾಗಿರುವ ಕಾರಣ ಕೇಂದ್ರ ಸರ್ಕಾರ ಈಗ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಇನ್ನು ಈ ಬದಲಾದ ಈ ಹೊಸ ನಿಯಮಗಳು ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಡಿಜಿಟಲ್ ಪಾವತಿ (Digital Payments) ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಬಹುದು. UP ಕ್ಷೇತ್ರದಲ್ಲಿ ಈಗ ಕೇಂದ್ರ ಸರ್ಕಾರ ಬಹುದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ ಮತ್ತು ಹೊಸ ಬದಲಾವಣೆ ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ.
UPI ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ
ಸದ್ಯ ದಿನಗಳಲ್ಲಿ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಸಾಕಷ್ಟು ವಂಚನೆಯ ಪ್ರಕಣಗಳು ಬೆಳಕಿಗೆ ಬಂದಿದೆ ಎಂದು ಹೇಳಬಹುದು. UPI ಬಳಸಿಕೊಂಡು ಸಾಕಷ್ಟು ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಈಗ ಎಲ್ಲಾ ಬ್ಯಾಂಕುಗಳಿಗೆ ಹೊಸ ಆದೇಶ ಹೊರಡಿಸಿದೆ. ಕೇಂದ್ರ ಹೊರಡಿಸಿರುವ ಆದೇಶದ ಪ್ರಕಾರ ಏಪ್ರಿಲ್ 1 ನೇ ತಾರೀಕಿನಿಂದ ಕೋಟ್ಯಾಂತರ ಮೊಬೈಲ್ ಸಂಖ್ಯೆಗಳು UPI ನಿಂದ ಡಿಲೀಟ್ ಆಗಲಿದೆ. ಏಪ್ರಿಲ್ 1 ನೇ ತಾರೀಕಿನಿಂದ ಎಲ್ಲಾ ಬ್ಯಾಂಕುಗಳು ಗ್ರಾಹಕರ UPI ನಲ್ಲಿ ನವೀಕರಣ ಮಾಡಲಿದೆ.

ಏಪ್ರಿಲ್ 1 ರಿಂದ UPI ಸಂಖ್ಯೆಯಲ್ಲಿ ನವೀಕರಣ
NPCI ನೀಡಿರುವ ಆದೇಶದ ಪ್ರಕಾರ, ದೇಶದ ಎಲ್ಲಾ ಬ್ಯಾಂಕುಗಳು ಏಪ್ರಿಲ್ 1 ನೇ ತಾರೀಕಿನಿಂದ ಕೋಟ್ಯಾಂತರ ಮೊಬೈಲ್ ಸಂಖ್ಯೆಯನ್ನು UPI ನಿಂದ ಡಿಲೀಟ್ ಮಾಡಲು ಆದೇಶ ಹೊರಡಿಸಿದೆ. ನಕಲಿ UPI ಮತ್ತು ಮೊಬೈಲ್ ಸಂಖ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ NPCI ಈಗ ಹೊಸ ರೂಲ್ಸ್ ಜಾರಿಗೆ ತಂದಿದೆ. ಇನ್ನು ಹೊಸ ನಿಯಮದ ಪ್ರಕಾರ ಎಲ್ಲಾ ಬ್ಯಾಂಕುಗಳು ಗ್ರಾಹಕರ ಒಪ್ಪಿಗೆ ಪಡೆದುಕೊಂಡು ಮೊಬೈಲ್ ಸಂಖ್ಯೆ ನವೀಕರಣ ಮಾಡಬೇಕಾಗಿದೆ.
ತಿಂಗಳಿಗೆ ಎರಡು ಬಾರಿ ಮೊಬೈಲ್ ಸಂಖ್ಯೆ ನವೀಕರಣ
NPCI ಮತ್ತು ಕೇಂದ್ರ ಸರ್ಕಾರ ನೀಡಿರುವ ಆದೇಶದ ಪ್ರಕಾರ ಎಲ್ಲಾ ಬ್ಯಾಂಕುಗಳುಗೆ ತಮ್ಮ ಗ್ರಾಹಕರ UPI ಮೊಬೈಲ್ ಸಂಖ್ಯೆಯನ್ನು ತಿಂಗಳಿಗೆ ಎರಡು ಬಾರಿ ನವೀಕರಣ ಮಾಡಬೇಕಾಗಿದೆ. UPI ಬಳಸುವ ಎಲ್ಲಾ ಗ್ರಾಹಕರ ಒಪ್ಪಿಗೆ ಪಡೆದುಕೊಂಡು ಬ್ಯಾಂಕುಗಳು ಮೊಬೈಲ್ ಸಂಖ್ಯೆ ನವೀಕರಣ ಮಾಡಬೇಕಾಗಿದೆ. ಇನ್ನು ಒಮ್ಮೆ ಮೊಬೈಲ್ ಸಂಖ್ಯೆ ನವೀಕರಣವಾದರೆ ಆ ಮೊಬೈಲ್ ಸಂಖ್ಯೆ ಶಾಶ್ವತವಾಗಿ UPI ಕ್ಷೇತ್ರದಿಂದ ಡಿಲೀಟ್ ಆಗಲಿದೆ. ತಿಂಗಳಿಗೆ ಎರಡು ಬಾರಿ ಈ ರೀತಿಯಲ್ಲಿ ನವೀಕರಣ ಮಾಡಬೇಕು ಎಂದು NPCI ಈಗ ಬ್ಯಾಂಕುಗಳಿಗೆ ಖಡಕ್ ಆದೇಶ ಹೊರಡಿಸಿದೆ.
ಕಡಿಮೆ ಆಗಲಿದೆ ಆನ್ಲೈನ್ ವಂಚನೆ
UPI ಕ್ಷೇತ್ರದಲ್ಲಿ ಈ ರೀತಿಯ ಬದಲಾವಣೆ ಮಾಡುವುದರಿಂದ ಆನ್ಲೈನ್ ವಂಚನೆಗಳು ಕಡಿಮೆ ಆಗುವುದರಲ್ಲಿ ಎರಡು ಮಾತಿಲ್ಲ. ಇನ್ನು ಈ ಹೊಸ ನಿಯಮ ಗೂಗಲ್ ಪೆ, ಫೋನ್ ಪೆ ಸೇರಿದಂತೆ ಹಲವು UPI ಪಾವತಿ ಅಪ್ಲಿಕೇಶನ್ ಅನ್ವಯ ಆಗಲಿದೆ. ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಈ ನಿಯಮ ಜಾರಿಗೆ ಬರಲಿದೆ. ಇನ್ನು ಗ್ರಾಹಕರು ಕೂಡ ಬ್ಯಾಂಕ್ ಗ್ರಾಹಕರಿಗೆ ಸ್ಪಂಧಿಸಬೇಕಾಗಿದೆ ಮತ್ತು ಬ್ಯಾಂಕಿನವರು ಮೊಬೈಲ್ ಸಂಖ್ಯೆ ನವೀಕರಣ ಮಾಡುವ ಕುರಿತಂತೆ ಮನವಿ ಮಾಡಿದರೆಬ್ಯಾಂಕಿನ ಸಿಬ್ಬಂದಿಗಳಿಗೆ ಗ್ರಾಹಕರು ಸ್ಪಂದಿಸಬೇಕು ಎಂದು NPCI ಹೇಳಿದೆ. ಬ್ಯಾಂಕ್ ಗ್ರಾಹಕರು OTP ಸೇರಿದಂತೆ ಯಾವುದೇ ವ್ಯಾವಹಾರಿಕ OTP ಕೇಳಿದರೆ ಅದನ್ನ ಕೊಡಬೇಕು ಎಂದು ಕೇಂದ್ರ ತಿಳಿಸಿದೆ.