Education: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಹೊಸ ರೂಲ್ಸ್, ಈ ಮಕ್ಕಳನ್ನ ಸೇರಿಸಿಕೊಳ್ಳಲ್ಲ

Educational Year 2025-26: ಪ್ರಸ್ತುತ ವರ್ಷದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೌದು ಇನ್ನೇನು ಮಕ್ಕಳ ದಾಖಲಾತಿ ಆರಂಭ ಆಗಲಿದೆ ಇದರ ನಡುವೆ ರಾಜ್ಯ ಶಿಕ್ಷಣ ಇಲಾಖೆ ರಾಜ್ಯದ ಪೋಷಕರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಕ್ಕಳ ಪ್ರಗತಿ ಮತ್ತು ಅವರ ಆರೋಗ್ಯ ಉದ್ದೇಶದಿಂದ ಈಗ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳ ದಾಖಲಾತಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದೆ ಎಂದು ಹೇಳಬಹುದು. ಪ್ರಸ್ತುತ ವರ್ಷದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಎಲ್ಲಾ ಪೋಷಕರು ಬದಲಾದ ಈ ನಿಯಮಗ ತಿಳಿದುಕೊಳ್ಳುವುದು ಅತೀ ಅಗತ್ಯ ಕೂಡ ಆಗಿದೆ.

WhatsApp Group Join Now
Telegram Group Join Now

1 ನೇ ತರಗತಿಗೆ ಸೇರಲು ಮಕ್ಕಳಿಗೆ 6 ವರ್ಷ ಕಡ್ಡಾಯ
ಹೌದು, ಇನ್ನುಮುಂದೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಮಕ್ಕಳಿಗೆ 6 ವರ್ಷ ಕಡ್ಡಾಯವಾಗಿ ಆಗಿರಬೇಕು ಎಂದು ರಾಜ್ಯ ಸರ್ಕಾರ ಈಗ ಆದೇಶವನ್ನು ಹೊರಡಿಸಿದೆ. ಮಕ್ಕಳಿಗೆ ಆರು ವರ್ಷ ಪೂರ್ಣವಾಗದೆ ಇದ್ದರೆ ಅವರನ್ನು ಶಾಲೆಗೆ ಸೇರಿಸುವಂತಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ಈಮೂಲಕ ಆದೇಶ ಹೊರಡಿಸಿದೆ. ಮಕ್ಕಳ ಆರೋಗ್ಯವನ್ನು ಮತ್ತು ಅವರ ಭವಿಷ್ಯ ಗಮನದಲ್ಲಿ ಇರಿಸಿಕೊಂಡು ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹಿಂದೆ ಪೋಷಕರು ಮಕ್ಕಳಿಗೆ ಐದು ವರ್ಷವಾದ ನಂತರ ಅವರನ್ನ ಶಾಲೆಗೆ ಸೇರಿಸುವ ಕೆಲಸ ಮಾಡುತ್ತಿದ್ದರು, ಆದರೆ ಇನ್ನುಮುಂದೆ ಮಗುವಿಗೆ ಆರು ವರ್ಷ ವಯಸ್ಸು ಆಗದೆ ಶಾಲೆಗೆ ಸೇರಿಸುವಂತಿಲ್ಲ.

school admission rules in karnataka
karnataka school admission rules 2025

ಕೆಲವು ಪೋಷಕರಕ್ಕೆ ಬೇಸಾಯಕ್ಕೆ ಕಾರಣವಾದ ಸರ್ಕಾರದ ನಿರ್ಧಾರ
ಇನ್ನು ಸರ್ಕಾರದ ಈ ನಿರ್ಧಾರ ಕೆಲವು ಪೋಷಕರ ಬೇಸರಕ್ಕೆ ಕಾರಣವಾಗಿದೆ. ಹೌದು ಕೆಲವು ಮಕ್ಕಳಿಗೆ ಆರು ವರ್ಷ ಆಗಲು ಇನ್ನೇನು ಕೆಲವು ವಾರಗಳು ಮಾತ್ರ ಭಾಕಿ ಉಳಿದುಕೊಂಡಿರುತ್ತದೆ, ಆದರೆ ಆ ಮಕ್ಕಳು ಶಾಲೆಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಶಾಲೆಗಳಲ್ಲಿ ಈಗಾಗಲೇ ದಾಖಲಾತಿ ಆರಂಭವಾಗಿದ್ದು ಮಗುವಿಗೆ ವರ್ಷವಾಗದ ಕಾರಣ ಮಗುವನ್ನು ಶಾಲೆಗೆ ಸೇರಿಸ್ಕೊಳ್ಳಲಾಗುತ್ತಿಲ್ಲ, ಮಗುವಿಗೆ ಆರು ವರ್ಷ ವಯಸ್ಸಾಗುವ ಸಮಯದಲ್ಲಿ ಶಾಲಾ ದಾಖಲಾತಿ ಮುಕ್ತಾಯವಾಗುರುತ್ತದೆ ಎಂದು ಸಾಕಷ್ಟು ಪೋಷಕರು ಬೇಸರವನ್ನು ಹೊರಹಾಕಿದ್ದಾರೆ.

ಕೆಲವು ತಿಂಗಳು ಮೀಸಲಾತಿ ನೀಡಬೇಕು
ಇನ್ನೇನು ಆರು ವರ್ಷ ಮುಗಿಯುದಕ್ಕೆ 1 ಅಥವಾ 2 ತಿಂಗಳು ಇರುವ ಮಕ್ಕಳಿಗೆ ಮೀಸಲಾತಿ ನೀಡಬೇಕು ಎಂದು ಸಾಕಷ್ಟು ಪೋಷಕರು ಮನವಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಈ ನಿಯಮ ಅನ್ವಯ ಮಾಡಿದರೆ ಅವರ ಭವಿಷ್ಯದ ಮೇಲೆ ಇದು ನೇರ ಪರಿಣಾಮ ಬೀರುತ್ತದೆ ಅನ್ನುವುದು ಕೆಲವರ ಅಭಿಪ್ರಾಯವಾಗಿದೆ. ಈ ಕಾರಣಗಳಿಂದ ಈ ನಿಯಮದಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸಾಕಷ್ಟು ಜನರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

6 ವರ್ಷದ ಈ ನಿಯಮ ಅವೈಜ್ಞಾನಿಕವಾಗಿದೆ
ಹೌದು, ಈ ನಿಯಮ ದೇಶದಲ್ಲಿ ಜಾರಿಗೆ ಬಂದರೆ ಕೆಲವು ಮಕ್ಕಳು ಪೂರ್ವ ಪ್ರಾರ್ಥಮಿಕ ತರಗತಿಗಳಲ್ಲಿಯೇ ಇನ್ನೊಂದು ವರ್ಷ ಕಳೆಯಬೇಕಾಗುತ್ತದೆ ಎಂದು ಸಾಕಷ್ಟು ಪೋಷಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಜೂನ್ 1 ಶಾಲೆಗೆ ಸೇರಿಸುವ ಮಗುವಿಗೆ ಆರು ವರ್ಷ ಪೂರ್ಣ ಆಗಿರಬೇಕು ಅನ್ನುವ ಈ ನಿಯಮ ಅವೈಜ್ಞಾನಿಕವಾಗಿದೆ ಅನ್ನುವುದು ಹಲವು ಪೋಷಕರ ಅಭಿಪ್ರಾಯವಾಗಿದೆ.

Leave a Comment