ICC Champians Trophy In Pakistan: ಸದ್ಯ ICC Champians Trophy ಮುಗಿದಿದ್ದು ಭಾರತ ಮೂರನೇ ಭಾರಿಗೆ ICC Champians Trophy ಗೆದ್ದು ಬಿಗಿದೆ ಎಂದು ಹೇಳಬಹುದು. ಹೌದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಪಡೆದ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸುವುದರ ಮೂಲಕ 2025 ರ ICC Champians Trophy ಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದೆ. ಇದರ ನಡುವೆ ಈಗ ICC Champians Trophy ಆಯೋಜನೆ ಮಾಡಿದ್ದ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ನಷ್ಟ ಆಗಿದೆ ಎಂದು ತಿಳಿದುಬಂದಿದೆ.
ಇನ್ನು ಪಾಕಿಸ್ತಾನಕ್ಕೆ ಇಷ್ಟು ನಷ್ಟ ಆಗಲು ಮುಖ್ಯ ಕಾರಣ ಭಾರತ ಎಂದು ಪಾಕಿಸ್ತಾನದ ಜನರು ಆರೋಪ ಕೂಡ ಮಾಡುತ್ತಿದ್ದಾರೆ. ಇತಿಹಾಸದಲ್ಲಿ ಇದೆ ಮೊದಲ ICC ಪಂದ್ಯಾವಳಿ ಆಯೋಜನೆ ಮಾಡಿ ನಷ್ಟ ಮಾಡಿಕೊಂಡ ದೇಶ ಅನ್ನುವ ಕೆಟ್ಟ ಪಟ್ಟವನ್ನ ಈಗ ಪಾಕಿಸ್ತಾನ ಪಡೆದುಕೊಂಡಿದೆ ಎಂದು ಹೇಳಬಹುದು. ಹಾಗಾದರೆ ICC Champians Trophy ಆಯೋಜನೆ ಮಾಡಿದ್ದ ಪಾಕಿಸ್ತಾನಕ್ಕೆ ಆದ ಒಟ್ಟು ನಷ್ಟ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಿಂದ ಪಾಕಿಸ್ತಾನಕ್ಕೆ ಆಯಿತು ನಷ್ಟ.
ಹೌದು, ಈ ಬಾರಿಯ ICC Champians Trophy ಯನ್ನು ಪಾಕಿಸ್ತಾನ ಹೋಸ್ಟಿಂಗ್ ಮಾಡಿತ್ತು, ಆದರೆ ಪಾಕಿಸ್ತಾನದಲ್ಲಿ ನಮಗೆ ಯಾವುದೇ ರಕ್ಷಣೆ ಇಲ್ಲ ಅನ್ನುವ ಕಾರಣಕ್ಕೆ ಭಾರತ ಪಾಕಿಸ್ತಾನಕ್ಕೆ ಬಂದು ನಾವು ICC Champians Trophy ಆಡುವುದಿಲ್ಲ ಅನ್ನುವ ನಿರ್ಧಾರ ಮಾಡಿತ್ತು. ಈ ಕಾರಣಕ್ಕೆ ICC ಭಾರತ ಎಲ್ಲಾ ಪಂದ್ಯವನ್ನು ದುಬೈ ನಲ್ಲಿ ಆಯೋಜನೆ ಮಾಡುತ್ತು.
ಪಾಕಿಸ್ತಾನ ಆಯೋಜನೆ ಮಾಡಿದ ICC Champians Trophy ಯಲ್ಲಿ ಭಾರತ ದುಬೈಗೆ ಹೋಗಿ ಪಂದ್ಯಗಳನ್ನು ಆಡಿದ್ದಕ್ಕೆ ಸುಮಾರು 9 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿಯಲ್ಲಿ ಭಾರತ ಪಾಕಿಸ್ತಾನದಲ್ಲಿ ICC Champians Trophy ಆಡಿದ್ದರೆ ಸಾಕಷ್ಟು ಟಿಕೆಟ್ ಗಳು ಸೇಲ್ ಆಗುತ್ತಿತ್ತು, ಆದರೆ ಪಾಕಿಸ್ತಾನದಲ್ಲಿ ಭಾರತ ಯಾವುದೇ ಪಂದ್ಯವನ್ನು ಆಡದ ಕಾರಣ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದ ನಷ್ಟವಾಗಿದೆ ಎಂದು ತಿಳಿದುಬಂದಿದೆ.

299 ವರ್ಷದ ನಂತರ ಪಾಕಿಸ್ತಾನದಲ್ಲಿ ನಡೆದ ICC ಪಂದ್ಯ
ಹೌದು, ಬರೋಬ್ಬರಿ 29 ವರ್ಷದ ನಂತರ ಪಾಕಿಸ್ತಾನದಲ್ಲಿ ICC ಪಂದ್ಯ ನಡೆದಿದೆ, ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಯಾವುದೇ ಪಂದ್ಯ ವಿನ್ ಆಗಲಿಲ್ಲ. ಪಾಕಿಸ್ತಾನ ಯಾವುದೇ ಪಂದ್ಯ ವಿನ್ ಆಗದ ಕಾರಣ ಪಾಕಿಸ್ತಾನದ ಕ್ರಿಕೆಟ್ ಪ್ರಿಯರು ಪಾಕಿಸ್ತಾನದ ಮೈದಾನದಲ್ಲಿ ಟಿಕೆಟ್ ಖರೀದಿ ಮಾಡಿಲ್ಲ. ಅದೇ ರೀತಿಯಲ್ಲಿ ಸಾಕಷ್ಟು ಪಂದ್ಯ ಮಳೆಯ ಕಾರಣ ರದ್ದಾದ ಕಾರಣ ಕೂಡ ಪಾಕಿಸ್ತಾನ ಕೋಟಿ ಕೋಟಿ ನಷ್ಟ ಅನುಭವಿಸಬೇಕಾಯಿತು. ಭಾರತದ ಅಭಿಮಾನಿಗಳು ಯಾವ್ದುಯೇ ದೇಶದಲ್ಲಿ ಕ್ರಿಕೆಟ್ ಮ್ಯಾಚ್ ಇದ್ದರೂ ಕೂಡ ಅದನ್ನು ನೋಡುತ್ತಾರೆ, ಆದರೆ ಪಾಕಿಸ್ತಾನದಲ್ಲಿ ಯಾವುದೇ ಪಂದ್ಯ ಭಾರತ ಆಡದ ಕಾರಣ ಕ್ರಿಕೆಟ್ ಸ್ಟೇಡಿಯಂ ಖಾಲಿ ಖಾಲಿಯಾಗಿತ್ತು.
ಫೈನಲ್ ಪಂದ್ಯ ಕೂಡ ಪಾಕಿಸ್ತಾನದಲ್ಲಿ ನಡೆಯಲಿಲ್ಲ
ಸಾಮಾನ್ಯವಾಗಿ ಫೈನಲ್ ಪಂದ್ಯಕ್ಕೆ ಸ್ಟೇಡಿಯಂ ಫುಲ್ ಆಗಿರುತ್ತದೆ ಮತ್ತು ದುಬೈ ನಲ್ಲಿ ಕೂಡ ಸ್ಟೇಡಿಯಂ ಬಹುತೇಕ ಫುಲ್ ಆಗಿತ್ತು. ಈ ಪಂದ್ಯ ಕೂಡ ಪಾಕಿಸ್ತಾನದಲ್ಲಿ ನಡೆಯದ ಕಾರಣ ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಕೂಡ ಬಹುದೊಡ್ಡ ನಷ್ಟ ಅನುಭವಿಸಬೇಕಾಯಿತು. ಇನ್ನು ಪಾಕಿಸ್ತಾನ ICC Champians Trophy ಪಂದ್ಯಕ್ಕಾಗಿ ಸುಮಾರು 558 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ ಎಂದು ವರದಿಗಳು ಹೇಳುತ್ತಿದೆ ಆದರೆ ಪಾಕಿಸ್ತಾನದ ಮೈದಾನದಲ್ಲಿ ಯಾವುದೇ ಆಡಂಭರ ಇರದ ಕಾರಣ ಇದು ಸುಳ್ಳು ಲೆಕ್ಕಾಚಾರ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ICC Champians Trophy ಪಂದ್ಯಾವಳಿಗಳು ಅಷ್ಟೊಂದು ಯಶಸ್ವಿಯಾಗದ ಕಾರಣ ಪಾಕಿಸ್ತಾನಕ್ಕೆ ಸುಮಾರು 198 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.