Bajaj Chetak Ev: ಸದ್ಯದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮತ್ತು ಬೈಕ್ ಹಾವಳಿ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ಹಲವು ಎಲೆಕ್ಟ್ರಿಕ್ ವಾಹನ ತಯಾಕರ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ಈಗ ಈ ಒಂದು ಎಲೆಕ್ಟ್ರಿಕ್ ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿರುವುದನ್ನು ಗಮನಿಸಬಹುದು. ಹೌದು ಕೆಲವೇ ತಿಂಗಳಲ್ಲಿ ಈ ಸ್ಕೂಟರ್ ನ ಮಾರಾಟ ಶೇಕಡಾ 82 ರಷ್ಟು ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಈ ಸ್ಕೂಟರ್ ಯಾವುದು ಮತ್ತು ಇದರ ಹಾಗು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ ಹೆಚ್ಚಾಗಿದೆ ಬಜಾಜ್ ಚೇತಕ್ ಸ್ಕೂಟರ್ ಮಾರಾಟ
ಹೌದು ದೇಶದಲ್ಲಿ ಬಜಾಜ್ ಚೇತಕ್ (Bajaj Chetak) ಮತ್ತೆ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೌದು ಕೆಲವೇ ತಿಂಗಳಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ದಾಖಲೆಯ ಮಾರಾಟ ಕಂಡಿದ್ದು ದೇಶದಲ್ಲಿ ಅಧಿಕ ಸ್ಕೂಟರ್ ಮಾರಾಟ ಮಾಡಿದ ಕಂಪನಿ ಅನ್ನುವ ಹೆಗ್ಗಳಿಕೆಯನ್ನು ಈಗ ಬಜಾಜ್ ಚೇತಕ್ ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮಾರುಕಟ್ಟೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಾರ್ಷಿಕವಾಗಿ ಸುಮಾರು 21,383 ಸ್ಕೂಟರ್ ಮಾಡಿದೆ ಎಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ 2025 ರ ಫೆಬ್ರವರಿ ತಿಂಗಳಲ್ಲಿ ಸುಮಾರು 11,000 ಸ್ಕೂಟರ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಬಜಾಜ್ ಚೇತಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ದೇಶದಲ್ಲಿ ದಾಖಲೆಯ ಮಾರಾಟ ಕಂಡಿರುವ ಈ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೂಡ ಕಡಿಮೆ ಆಗಿದೆ ಮತ್ತು ಮೈಲೇಜ್ ಕೂಡ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಈ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸುಮಾರು 1.5 ಲಕ್ಷ ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 153 Km ಮೈಲೇಜ್ ಕೊಡುತ್ತದೆ. ಹೌದು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 153 Km ಮೈಲೇಜ್ ಕೊಡುತ್ತದೆ.
ಇನ್ನು ಸ್ಕೂಟರ್ ಚಾರ್ಜ್ ಮಾಡಲು ಸುಮಾರು 5 ಘಂಟೆ ಸಮಯ ತಗೆದುಕೊಳ್ಳುತ್ತದೆ. ಇನ್ನು ಈ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ 73 Km ಆಗಿದೆ ಮತ್ತು ಎರಡು ಟೈಯರ್ ಗಳು ಟ್ಯೂಬ್ ಲೆಸ್ ಟೈಯರ್ ಆಗಿದೆ. 3.5 kWh ಬ್ಯಾಟರಿ ಕ್ಯಾಪಾಸಿಟಿ ಹೊಂದಿರುವುದನ್ನು ನಾವು ಗಮನಿಸಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ವಿವಿಧ ಮಾದರಿಯಲ್ಲಿ ಲಭ್ಯವಿದ್ದು ನಾವು ಅದನ್ನು ಖರೀದಿ ಮಾಡಬಹುದು. ಸದ್ಯ ಈ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ದೇಶದಲ್ಲಿ ದಾಖಲೆಯ ಮಾರಾಟ ಕಾಣುವುದರ ಮೂಲಕ ಅದೆಷ್ಟೋ ಗ್ರಾಹಕರನ್ನು ತನ್ನತ್ತ ಸೆಳೆದಿದೆ.