Vivo T2 5G: ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್, Vivo ಮೊಬೈಲ್ ಮೇಲೆ 5,000 ರೂ ಡಿಸ್ಕೌಂಟ್.
ವಿವೊ T2 ಮೊಬೈಲ್ ಮೇಲೆ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಯಲ್ಲಿ ಮೊಬೈಲ್ ಖರೀದಿ ಮಾಡಬಹುದು.
Vivo T2 5G Price And Review: ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಗಳ ಮೇಲಿನ ಬೇಡಿಕೆ ಹೆಚ್ಚಿದ್ದು ಗ್ರಾಹಕರ ಬೇಡಿಕೆ ಅನುಗುಣವಾಗಿ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಮೊಬೈಲ್ ಗಳನ್ನೂ ಪರಿಚಯಿಸುತ್ತಿವೆ.
ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ. ನೀವು ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಈ ಹೊಸ ಮಾದರಿಯ ಮೊಬೈಲ್ ಬಗ್ಗೆ ತಿಳಿದುಕೊಳ್ಳಿ.
ವಿವೋ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ
ಅನೇಕ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮ ಕಂಪನಿಯ ಮೊಬೈಲ್ ಫೋನ್ ಗಳ್ ಮೇಲೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ ವಿವೋ (Vivo) ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಿದೆ. ವಿವೋ ಕಂಪನಿ ಸ್ಮಾರ್ಟ್ ಫೋನ್ ಗಳ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ತಿಳಿಯೋಣ.
ವಿವೋ T2 5G ಸ್ಮಾರ್ಟ್ ಫೋನ್ (Vivo T2 5G)
ಈ ಹೊಚ್ಚ ಹೊಸ ವಿವೋ T2 5G ಸ್ಮಾರ್ಟ್ ಫೋನ್ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನಲ್ಲಿ ಅತ್ಯಾಕರ್ಷ ಕೊಡುಗೆಗಳ ಜೊತೆಗೆ ಲಭ್ಯವಾಗಲಿದೆ. ಈ ವಿವೋ T2 5G ಸ್ಮಾರ್ಟ್ ಫೋನ್ ನ ಬೆಲೆ 23,999 ರೂ. ಆಗಿದ್ದು ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ನ ಮೇಲೆ 5 ಸಾವಿರ ರಿಯಯಾಯಿತಿ ಸಿಗಲಿದೆ. 5 ಸಾವಿರ ರಿಯಯಾಯಿತಿ ಪಡೆಯುವ ಮೂಲಕ ಕೇವಲ 18,999 ರೂ. ಗೆ ವಿವೋ T2 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ.
ವಿವೋ T2 5G ಸ್ಮಾರ್ಟ್ ಫೋನ್ ವಿಶೇಷತೆ
ವಿವೋ T2 5G ಸ್ಮಾರ್ಟ್ ಫೋನ್ ನಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಈ ಫೋನ್ 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್ ಫೋನ್ ಗಳ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಬ್ಯಾಂಕ್ ಆಫ್ ಬರೋಡ ಕ್ರೆಡಿಟ್ ಕಾರ್ಡ್ ನ ಪಾವತಿಯಾ ಮೇಲೆ 10 % ರಿಯಾಯಿತಿಯನ್ನು ಪಡೆಯಬಹುದು. ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಪ್ಲಾಟ್ ರೂ. 1,250 ರಿಯಾಯಿತಿಯನ್ನು ಪಡೆಯಬಹುದು.